ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಆ.6
ನಗರದ ಹೊಳೆಹೊನ್ನೂರು ರಸ್ತೆಯಲ್ಲಿ ಗುಡ್ಡೆಕಲ್ ಶ್ರೀ ಬಾಲ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಅಡಿಕೃತ್ತಿಕೆ ಹರೋಹರ ಜಾತ್ರೆ ನಡೆಯುತ್ತಿದ್ದು, ಸಾರ್ವಜನಿಕರಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರ ನಿಷೇಧ ಮತ್ತು ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.
ವಾಹನ ಸಂಚಾರಕ್ಕೆ ಬದಲಿ ಮಾರ್ಗ:
ಬೆಂಗಳೂರು, ಭದ್ರಾವತಿ ಎನ್‌ಆರ್ ಪುರ ಕಡೆಯಿಂದ ಬರುವ ಎಲ್ಲಾ ಭಾರಿ ವಾಹನ ಮತ್ತು ಎಲ್ಲಾ ಬಸ್‌ಗಳು ಮತ್ತು ಸಿಟಿ ಬಸ್‌ಗಳು ಹಾಗೂ ಕಾರು ವಾಹನಗಳು ಎಂಆರ್‌ಎಸ್ ಸರ್ಕಲ್ ನಿಂದ ಬೈಪಾಸ್ ರಸ್ತೆ ಮುಖಾಂತರ ಹೋಗುವುದು.
ಶಿವಮೊಗ್ಗ ನಗರದಿಂದ ಬೆಂಗಳೂರು, ಭದ್ರಾವತಿ, ಚಿತ್ರದುರ್ಗ, ಹೊಳೆಹೊನ್ನೂರು ಹೋಗುವ ಎಲ್ಲಾ ಭಾರಿ ವಾಹನ ಮತ್ತು ಎಲ್ಲಾ ಬಸ್‌ಗಳು ಮತ್ತು ಸಿಟಿ ಬಸ್‌ಗಳು ಹಾಗೂ ಕಾರುಗಳು ಬೈಪಾಸ್ ರಸ್ತೆಯಿಂದ ಎಂಆರ್‌ಎಸ್ ಸರ್ಕಲ್ ಮುಖಾಂತರ ಹೋಗುವುದು.
ಚಿತ್ರದುರ್ಗ ಹೊಳೆಹೊನ್ನೂರುನಿಂದ ಶಿವಮೊಗ್ಗ ನಗರಕ್ಕೆ ಒಳ ಬರುವ ಮತ್ತು ಹೊರ ಹೋಗುವ ಎಲ್ಲ ಭಾರಿ ವಾಹನ ಮತ್ತು ಬಸ್ ಗಳು ಭದ್ರಾವತಿ ಮಾರ್ಗವಾಗಿ ಬೈಪಾಸ್ ರಸ್ತೆ ಮೂಲಕ ಶಿವಮೊಗ್ಗ ನಗರಕ್ಕೆ ಒಳಬರುವುದು ಮತ್ತು ಹೊರ ಹೋಗುವುದು.
ಚಿತ್ರದುರ್ಗ ಹೊಳೆಹೊನ್ನೂರುನಿಂದ ಬರುವ ಮತ್ತು ಹೋಗುವ ಎಲ್ಲಾ ಲಘು ವಾಹನಗಳು, ಪಿಳ್ಳಂಗಿರಿ ಕ್ರಾಸ್ ನಿಂದ ಯಲವಟ್ಟಿ ಮಾರ್ಗವಾಗಿ ಮತ್ತು ಹೊಳೆಬೆನವಳ್ಳಿ ತಾಂಡ ಕ್ರಾಸ್ ನಿಂದ ಯಲವಟ್ಟಿ ಮಾರ್ಗವಾಗಿ ಮಲವಗೊಪ್ಪ ಮೂಲಕ ಬಿಹೆಚ್ ರಸ್ತೆಗೆ ಸೇರಿಕೊಂಡು ಬೈಪಾಸ್ ರಸ್ತೆ ಮಾರ್ಗವಾಗಿ ಶಿವಮೊಗ್ಗ ನಗರಕ್ಕೆ ಹೋಗುವುದು.
ಶಿವಮೊಗ್ಗ ನಗರದಿಂದ ಹೊಳೆಹೊನ್ನೂರು ಚಿತ್ರದುರ್ಗಕ್ಕೆ ಹೋಗುವ ಲಘು ವಾಹನಗಳು(ದ್ವಿಚಕ್ರ ಮತ್ತು ಕಾರು ವಾಹನಗಳು) ಬೈಪಾಸ್ ರಸ್ತೆಯ ಮಾರ್ಗವಾಗಿ ಮಲವಗೊಪ್ಪ ಯಲವಟ್ಟಿ ಕ್ರಾಸ್ ನಿಂದ ಯಲವಟ್ಟಿ ಮಾರ್ಗವಾಗಿ ಪಿಳ್ಳಂಗಿರಿ ಕ್ರಾಸ್ ಮೂಲಕ ಹೊಳೆಹೊನ್ನೂರು ನಿಂದ ಚಿತ್ರದುರ್ಗಕ್ಕೆ ಹೋಗುವುದು.
ಹರಿಹರ, ಹೊನ್ನಾಳಿಯಿಂದ ಬರುವ ಎಲ್ಲಾ ಭಾರಿ ವಾಹನ, ಎಲ್ಲಾ ಬಸ್‌ಗಳು ಸಂಗೊಳ್ಳಿ ರಾಯಣ್ಣ ಸರ್ಕಲ್, ಕೆಇಬಿ ಸರ್ಕಲ್, ಉಷಾ ಸರ್ಸಿಂಗ್ ಹೋಂ ಸರ್ಕಲ್, 100 ಅಡಿ ರಸ್ತೆ ವಿನೋಬ ನಗರ ಮಾರ್ಗವಾಗಿ ಹೋಗುವುದು.
ಹೊಳೆಹೊನ್ನೂರು ಸರ್ಕಲ್‌ನಿಂದ ಗುರುಪುರದ ಯಲವಟ್ಟಿ ಕ್ರಾಸ್‌ವರೆಗೆ ಸಾರ್ವಜನಿಕ ವಾಹನಗಳು ಓಡಾಡದಂತೆ ಸಂಚಾರ ನಿಷೇಧಿಸಲಾಗಿದೆ.
