Homeಜಿಲ್ಲೆಶೈಕ್ಷಣಿಕ ನೆರವಿಗೆ ನಮ್ಮ ಸಂಸ್ಥೆ ಸದಾ ಬದ್ದ: ದೀಪಕ್

ಶೈಕ್ಷಣಿಕ ನೆರವಿಗೆ ನಮ್ಮ ಸಂಸ್ಥೆ ಸದಾ ಬದ್ದ: ದೀಪಕ್

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.7

ಬೆಂಗಳೂರು ಮೂಲದ ನೋವೆಲ್ ಹೋಪ್ ಫೌಂಡೇಶನ್ ಹಾಗೂ ಕ್ರಿಯಾಶೀಲ ತಾರೆಯರು ಟ್ರಸ್ಟ್, ಶಿವಮೊಗ್ಗ ಇವರ ಸಹಯೋಗದಲ್ಲಿ ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳ ಸುಮಾರು 3 ಸಾವಿರ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋವೆಲ್ ಹೋಪ್ ಫೌಂಡೇಶನ್‌ನ ಸಿಎಸ್‌ಆರ್ ಎಕ್ಸಿಕ್ಯೂಟಿವ್ ದೀಪಕ್ ಉಚಿತ ವಾಟರ್ ಬಾಟಲ್ ಮತ್ತು ತಟ್ಟೆಗಳನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಸರ್ಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯ ಮತ್ತು ಶೈಕ್ಷಣಿಕ ನೆರವು ಒದಗಿಸುವ ಕಾರ್ಯದಲ್ಲಿ ನಮ್ಮ ಸಂಸ್ಥೆ ಸದಾ ಬದ್ಧವಾಗಿದೆ. ಮುಂದೆಯೂ ಸರ್ಕಾರಿ ಶಾಲೆಗಳ ಮಕ್ಕಳ ಹಿತದೃಷ್ಟಿಯಿಂದ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು,” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕ್ರಿಯಾಶೀಲ ತಾರೆಯರು ಟ್ರಸ್ಟ್, ಶಿವಮೊಗ್ಗ ಅಧ್ಯಕ್ಷೆ ಪೌಜಿಯ ಸರವತ್ ಮಾತನಾಡಿ, “ಸಂಸ್ಥೆಯಿಂದ ನೀಡಲಾಗಿರುವ ವಸ್ತುಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು. ನೋವೆಲ್ ಹೋಪ್ ಫೌಂಡೇಶನ್‌ನಂತಹ ದಾನಿ ಸಂಸ್ಥೆಗಳ ಉದಾರ ಸಹಾಯದಿಂದ ಶಿವಮೊಗ್ಗ ಜಿಲ್ಲೆಯ ಸಾವಿರಾರು ಮಕ್ಕಳ ಮುಖದಲ್ಲಿ ಸಂತಸ ಮೂಡಿದೆ. ಮುಂದಿನ ದಿನಗಳಲ್ಲಿಯೂ ಜಿಲ್ಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಇಂತಹ ಸಹಕಾರ ಮುಂದುವರಿಯಲಿ. ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆ, ಸುಗಮಕಾರರು, ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಮಕ್ಕಳ ಪರವಾಗಿ ನೋವೆಲ್ ಹೋಪ್ ಫೌಂಡೇಶನ್‌ಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕ್ರಿಯಾಶೀಲ ತಾರೆಯರು ಟ್ರಸ್ಟ್ನ ಕಾರ್ಯದರ್ಶಿ ಭಾಗೀರಥಿ, ಖಜಾಂಚಿ ಪವಿತ್ರ, ನಿರ್ದೇಶಕರಾದ ಪುರುಷೋತ್ತಮ್, ಮಹಮ್ಮದ್ ಜಫರ್ವುಲ್ಲಾ, ಪ್ರವೀಣ್, ಶಾಲೆಯ ಮುಖ್ಯಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments