ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.8
ಯತೀಂದ್ರ ಸಿದ್ದರಾಮಯ್ಯ ಇನ್ನೂ ರಾಜಕಾರಣದಲ್ಲಿ ಬಚ್ಚ. ಹಿಂದೂ ಧರ್ಮಕ್ಕೆ ಟೀಕೆ ಮಾಡಿದರೆ ಬಹಳ ದೊಡ್ಡವನಾಗುತ್ತೇನೆ ಅಂದುಕೊಂಡಿದ್ದಾರೆ. ಅದಕ್ಕೆ ಭಾರತ ಹಿಂದೂ ರಾಷ್ಟ್ರ ಆಗೋಲ್ಲ ಎಂಬ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯತೀಂದ್ರ ಸಿದ್ದರಾಮಯ್ಯನಿಗೆ ಹಿಂದೂ ಧರ್ಮದ ಬಗ್ಗೆ ಎಳ್ಳು ಕಾಳಷ್ಟು ಗೊತ್ತಿಲ್ಲ. ಈ ದೇಶ ನಿಂತಿರುವುದೇ ಹಿಂದೂ ಧರ್ಮದಿಂದ, ಹಿಂದೂ ಸಂಸ್ಕೃತಿಯಿಂದಲೇ ಪ್ರಪಂಚದಲ್ಲಿ ಶಾಂತಿ ಸಿಗುತ್ತಿದೆ.
ಮೊಹಮ್ಮದ್ ಗಜನಿ, ಕ್ರಿಶ್ಚಿಯನ್ ಮಿಷನರಿಗಳು ದೇಶಕ್ಕೆ ಬಂದು ಹಿಂದುಗಳನ್ನ ಮತಾಂತರ ಮಾಡಿದ್ದಾರೆ. ಭಗವದ್ಗೀತೆ ರಾಮಾಯಣ, ಮಹಾಭಾರತ ಉದ್ಗಂತಗಳು ಇಡೀ ಧರ್ಮ ಸಮಾಜ ಒಂದಾಗಬೇಕು ಎಂದು ಹೇಳುವ ಗ್ರಂಥಗಳು. ಆದರೆ ಇವರು ಹಿಂದೂ ಧರ್ಮದ ಬಗ್ಗೆ ಟೀಕೆ ಮಾಡಿ ಇದು ಹಿಂದೂ ರಾಷ್ಟ್ರ ಆಗೋಲ್ಲ ಎಂದಿದ್ದಾರೆ. ಹಾಗಾದರೆ ಹಿಂದೂ ಧರ್ಮದ ಬಗ್ಗೆ ಗೌರವ ಇಲ್ಲ, ಹಿಂದೂ ದೇವರನ್ನು ಪೂಜೆ ಮಾಡಲ್ಲ ಎನ್ನಲ್ಲಿ ಎಂದು ಸವಾಲು ಹಾಕಿದರು.
ಹಿಂದೂ ಧರ್ಮದ ಪಾಯಿಂಟ್ ವನ್ ಪರ್ಸೆಂಟ್ ಕೂಡ ಅರ್ಥ ಆಗದ ಮಂತ್ರಿ ಸಿದ್ದರಾಮಯ್ಯನವರ ಲೆವೆಲ್ ಗೆ ಮಾತನಾಡುತ್ತಿದ್ದಾರೆ. ಈ ದೇಶ ಯಾರೇ ಹೇಳಿದರೂ ಹಿಂದೂ ರಾಷ್ಟ್ರವೇ ಆಗುತ್ತದೆ. ಮುಸ್ಲಿಂ ರಾಷ್ಟ್ರ ಮಾಡಲು ಹೊರಟಿದ್ದೇನೆ ಎಂದು ಹೇಳಲಿ ಮುಸ್ಲಿಮರ ಓಟುಗಳಿಗಾಗಿ ಆಡುವ ನಾಟಕಗಳಲ್ಲಿ ಇದು ಒಂದು ನಾಟಕ. ಹಿಂದೂ ಧರ್ಮದ ರಕ್ಷಣೆಗೆ ಕೋಟಿ ಕೋಟಿ ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದರು.
