Homeಜಿಲ್ಲೆಡಿ.ಕೆ.ಶಿವಕುಮಾರ್ ನನ್ನ ಅಣ್ಣನ ಸಮಾನ : ಈ ಬಗ್ಗೆ ಮಧು ಹೇಳಿದ್ದೇನು!?

ಡಿ.ಕೆ.ಶಿವಕುಮಾರ್ ನನ್ನ ಅಣ್ಣನ ಸಮಾನ : ಈ ಬಗ್ಗೆ ಮಧು ಹೇಳಿದ್ದೇನು!?

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.8

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನನ್ನ ಅಣ್ಣ ಸಮಾನ. ಅವರಿಗೆ ನಮ್ಮ ತಂದೆಯ ಮೇಲೆ ಅಪಾರ ಗೌರವ ಇರುವುದರಿಂದ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ ಎಂದು ಸಚಿವ ಮಧು ಬಂಗಾರಪ್ಪ ಸಂತಸ ವ್ಯಕ್ತಪಡಿಸಿದರು.

ಅವರು ಶನಿವಾರ ಮಾಧ್ಯಮದೊಂದಿಗೆ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್ ನನ್ನ ಮೇಲೆ ವಿಶ್ವಾಸ ಇರಿಸಿ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದ್ದಾರೆ. ಈ ಹಿಂದೆ ಸಚಿವನಾಗಿದ್ದಾಗ ಯಾವುದೇ ನಿರೀಕ್ಷೆಯೆಲ್ಲದೆ ಶಿಕ್ಷಣ ಖಾತೆ ನೀಡಿದ್ದರು. ಈ ಬಾರಿ ಅಂತಹ ಯಾವುದೇ ನಿರೀಕ್ಷೆಯಿಲ್ಲ ಮುಖ್ಯಮಂತ್ರಿ ಯಾವ ಖಾತೆ ಕೊಟ್ಟರು ನಿಭಾಯಿಸುತ್ತೇನೆ. ಅಥವಾ ಈ ಹಿಂದೆ ಇದ್ದ ಶಿಕ್ಷಣ ಖಾತೆ ಕೊಟ್ಟರು ನಿಭಾಯಿಸುತ್ತೇನೆ ಎಂದರು.

ಗಮನಿಸಿ: ಹಿಂದೂ ಧರ್ಮದ ಹೇಳಿಕೆಗೆ ಈಶ್ವರಪ್ಪ ಕಿಡಿ: ಯತೀಂದ್ರನ ಬಗ್ಗೆ ಹೇಳಿದ್ದೇನು!?

ಕಾಂಗ್ರೆಸ್‌ನ ಜಿಲ್ಲಾ ಕಾರ್ಯಕರ್ತರಿಗೆ ಧನ್ಯವಾಗಳು ಸಲ್ಲಿಸುತ್ತೇವೆ. ನಾನು ಸಚಿವನ್ನಾಗಿದ್ದಾಗ ಜಿಲ್ಲಾ ಸರ್ವಾಂಗೀಣ ಅಭಿವೃದ್ದಿ ವಿಚಾರವಾಗಿ ಎಲ್ಲಾ ರೀತಿಯ ಸಹಕಾರ ನೀಡಿದ್ದರು. ಈ ಬಾರಿ ಅಂತಹ ಸಹಕಾರವನ್ನು ಬಯಸುತ್ತೇನೆ. ಮುಖ್ಯಮಂತ್ರಿ ಸೂಚನೆಯಂತೆ ಜಿಲ್ಲೆಯ ಅತಿವೃಷ್ಟಿ ಮತ್ತು ಬರ ಪರಿಶೀಲನೆÀ ಜಿಲ್ಲೆ ಪ್ರವಾಸ ಕೈಗೊಂಡಿದ್ದೇನೆ ಎಂದರು.

ಸಂಪುಟ ಪುನರ್ ಮತ್ತು ಗೊಂದಲಗಳ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಧ್ಯಮದಲ್ಲಿ ನೋಡಿದ್ದೇನೆ. ಸೋಮವಾದ ವೇಳೆಗೆ ಖಾತೆ ಹಂಚಿಕೆ ಆಗಬಹುದು. ಬೇಳೂರು ಗೋಪಾಲಕೃಷ್ಣ ಹಾಗೂ ಬಿ.ಕೆ. ಸಂಗಮೇಶ್ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಸಚಿವ ಸ್ಥಾನ ದೊರಕಿಲ್ಲ. ಇದರಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರನ್ನು ಇನ್ನು ಭೇಟಿ ಆಗಿ ಅವರೊಂದಿಗೆ ಮಾತನಾಡುತ್ತೇನೆ ಎಂದರು.

ಕುಮಾರ್ ಬಂಗಾರಪ್ಪ ಒಳ್ಳೆದಾಗಲಿ:

ಮಧು ಬಂಗಾರಪ್ಪ ಸಚಿವ ಸ್ಥಾನ ಸಿಕ್ಕಿರುವುದು ಸಂತೋಷವಾಗಿದೆ ಎಂಬ ಕುಮಾರ್ ಬಂಗಾರಪ್ಪ ಹೇಳಿಕೆ ಹಿನ್ನೆಲೆಯಲ್ಲಿ
ಅವರಿಗೆ ಒಳ್ಳೆಯದಾಗಲಿ ಎಂದು ಮಧು ಬಂಗಾರಪ್ಪ ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments