Homeಜಿಲ್ಲೆಕೆ.ಎಸ್.ಈಶ್ವರಪ್ಪ ಮತ್ತೇ ಬಿಜೆಪಿಗೆ!: ಈ ಬಗ್ಗೆ ಅವರು ಹೇಳಿದ್ದೇನು?

ಕೆ.ಎಸ್.ಈಶ್ವರಪ್ಪ ಮತ್ತೇ ಬಿಜೆಪಿಗೆ!: ಈ ಬಗ್ಗೆ ಅವರು ಹೇಳಿದ್ದೇನು?

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.8

ಕಳೆದ ಚುನಾವಣೆಯಲ್ಲಿ ಸ್ವತಃ ಮೋದಿ ಅವರೆ ಕರೆ ಮಾಡಿದರು ಹಾಗಾಗಿ ಚುನಾವಣೆಗೆ ಸ್ವರ್ಧಿಸುವುದರಿಂದ ಹಿಂದೆ ಸರಿದಿದ್ದೇನೆ ಎಂದು ಮಾಧ್ಯಮಗಳ ಮುಂದೆ ಹೇಳುವ ಮೂಲಕ ಕೆ.ಎಸ್.ಈಶ್ವರಪ್ಪ ಬಿಜೆಪಿ ಹೈಕಮಾಂಡ್ ಅನ್ನು ತೃಪ್ತಿ ಪಡೆಸಿದ್ದರು. ನಂತರ ಬಿಜೆಪಿ ಟಿಕೇಟ್ ಕೊಡುವಲ್ಲಿ ಕಣ್ಣಮುಚ್ಚಾಲೆ ಆಟವೂ ಆಡಿತ್ತು.

ಗಮನಿಸಿ: ಡಿ.ಕೆ.ಶಿವಕುಮಾರ್ ನನ್ನ ಅಣ್ಣನ ಸಮಾನ : ಈ ಬಗ್ಗೆ ಮಧು ಹೇಳಿದ್ದೇನು!?

ಈ ಘಟನಗಳಿಂದ ಕೆ.ಎಸ್.ಈಶ್ವರಪ್ಪನವರು ಹಠಕ್ಕೆ ಬಿದ್ದು ತಮ್ಮ ಮಗನನ್ನು ರಾಜಕಾರಣಕ್ಕೆ ತರಬೇಕೆಂಬ ಉದ್ದೇಶದಿಂದ ರಾಷ್ಟ್ರ ಭಕ್ತರ ಬಳಗ ಸ್ಥಾಪಿಸಿಕೊಂಡು ಚುನಾವಣೆ ಸ್ವರ್ಧಿಸಲು ಯಾವ್ಯಾವ ತಯಾರಿ ಮಾಡಬೇಕೋ ಎಲ್ಲವನ್ನು ಚೆನ್ನಾಗಿ ಮಾಡುತ್ತಲೆ ಬಂದಿದ್ದಾರೆ. ಬಿಜೆಪಿ ಯಿಂದ ಹೊರ ಉಳಿದಿದ್ದರೂ ನಾನು ಬಿಜೆಪಿಯವನೇ ಎಂದುಕೊಂಡು ಸಾಮಾಜಿಕ ಕಾರ್ಯ ಮಾಡುತ್ತಾ ಬಂದಿದ್ದರು. ಆದರೆ ಈಗ ಕೆ.ಎಸ್.ಈಶ್ವರಪ್ಪ ನವರು ಮತ್ತೆ ತನ್ನ ತವರು ಮನೆಗೆ ಸೇರುವ ಮುನ್ಸೂಚನೆ ನೀಡಿದ್ದಾರೆ.

ಅದರಂತೆ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನನ್ನ ಮಾತೃ ಪಕ್ಷ. ಅಲ್ಲಿರುವ ಗೊಂದಲ ನಿವಾರಣ ಆದರೆ ಬಿಜೆಪಿ ಪಕ್ಷಕ್ಕೆ ಸೆರುತ್ತೇನೆ. ಇನ್ನು ಬಿಜೆಪಿ ಬಿಟ್ಟು ಬೇರೆ ಯಾವ ಪಕ್ಷಕ್ಕೂ ಹೋಗುವುದಿಲ್ಲ ಎಂದು ಪ್ರಸ್ತಾಪ ಮಾಡಿದ್ದಾರೆ.

ಬಿಜೆಪಿ ಸೇರಬೇಕೆಂಬ ಪ್ರಯತ್ನಗಳು ನಡೆಯುತ್ತಿವೆ. ಹಾಗಾಗಿ ಪಕ್ಷದಲ್ಲಿ ಕೆಲವು ಸುಧಾರಣೆ ಆಗಬೇಕು ಹಾಗೂ ಗೊಂದಲು ಬಗೆ ಹರಿಯಬೇಕೆಂದು ಬಿಜೆಪಿ ನಾಯಕರ ಬಳಿ ಮಾತನಾಡುತ್ತಿದ್ದು, ಬಿಜೆಪಿ ಶುದ್ಧೀಕರಣವಾಗಬೇಕು ಎಂದರು.

ನಾನು ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ. ಸಮಾಜವಾದಿ, ಕಾಂಗ್ರೆಸ್ ಪಕ್ಷದಿಂದಲೂ ಕರೆ ಬಂದಿದೆ. ಆದರೆ ನನ್ನ ಪ್ರಾಣ ಹೋದರು ನಾನು ಬಿಜೆಪಿ ಬಿಟ್ಟು ಎಲ್ಲೂ ಹೋಗಲ್ಲ. ಪಕ್ಷದ ಸಂಘಟನೆ ದೃಷ್ಟಿಯಿಂದ ನಾನು ಕೆಲವು ಬೇಡಿಕೆ ಇಟ್ಟಿದ್ದೇನೆ. ಆದರೆ ಪಕ್ಷದ ಸೇರ್ಪಡೆಗಾಗಿ ಯಾವುದೇ ಷರತ್ತು ವಿಧಿಸಿಲ್ಲ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments