Homeಜಿಲ್ಲೆನೂತನ ವಿದ್ಯಾರ್ಥಿ ನಿಲಯಕ್ಕೆ “ಬಿಎಸ್‌ವೈ” ಹೆಸರು-ಆ.16 ರಂದು ಉದ್ಘಾಟನೆ

ನೂತನ ವಿದ್ಯಾರ್ಥಿ ನಿಲಯಕ್ಕೆ “ಬಿಎಸ್‌ವೈ” ಹೆಸರು-ಆ.16 ರಂದು ಉದ್ಘಾಟನೆ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.13

ನಗರ ಡಿವಿಷನ್ ವೀರಶೈವ ಲಿಂಗಾಯತ ವಿದ್ಯಾರ್ಥಿ ನಿಲಯ ವಿಶ್ವಸ್ಥ ಮಂಡಳಿ ವತಿಯಿಂದ ಸುಸಜ್ಜಿತವಾಗಿ ನಿರ್ಮಿಸಲಾಗಿರುವ ನೂತನ ವಿದ್ಯಾರ್ಥಿ ನಿಲಯದ ಭವ್ಯ ಕಟ್ಟಡಕ್ಕೆ ಸರ್ವರ ಒಮ್ಮತದೊಂದಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿದ್ಯಾರ್ಥಿ ನಿಲಯ ಎಂದು ನಾಮಕರಣ ಮಾಡಲಾಗಿದ್ದು, ಆ.16 ಬೆಳಿಗ್ಗೆ 11 ಗಂಟೆಗೆ ಈ ಕಟ್ಟದ ಉದ್ಘಾಟನೆ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿ ತಿಳಿಸಿದರು.

ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾಜ ಹಾಗೂ ಕರ್ನಾಟಕದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ಯಡಿಯೂರಪ್ಪ ಅವರ ಹೆಸರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಹೆಸರಿಡಲಾಗಿದೆ ಎಂದರು.

ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಹಿತಾದೃಷ್ಠಿಯಿಂದ ಈ ವಸತಿ ನಿಲಯವನ್ನು ನಿರ್ಮಾಣ ಮಾಡಲಾಗಿದ್ದು, ಈ ನಿಲಯದಲ್ಲಿ ಶಿಕ್ಷಣ ಹಾಘೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದತೆ ಮಾಡಿಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ ಅಗತ್ಯವಾದ ವಿವಿಧ ಸೌಲಭ್ಯವನ್ನು ಕಲ್ಪಿಸಲಾಗಿದೆ. ಕಚೇರಿ ಕೊಠಡಿ, ಡಿಜಿಟಲ್ ಲೈಬ್ರರಿ, ವಾರ್ಡನ್ ಕೊಠಡಿ, ಸಿಬ್ಬಂದಿ ಕೊಠಡಿ, ಅಡುಗೆಮನೆ, ಊಟದ ಹಾಲ್, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು.

ವಿಶಾಲವಾದ ಕಟ್ಟಡವುಳ್ಳ ನಿಲಯ:

ವಿದ್ಯಾರ್ಥಿಗಳಿಗೆ ಯಾವುದೇ ಸೌಲಭ್ಯಗಳಲ್ಲಿ ತೊಂದರೆ ಉಂಟಾಗಬಾರದೆಂದು ನಿಟ್ಟನಲ್ಲಿ ವಿಶಾಲವಾದ ಕಟ್ಟವನ್ನು ನಿರ್ಮಿಸಿದ್ದು, ಮೂರು ಅಂತಸ್ತು ಹೊಂದಿದೆ. 62 ಕೊಠಡಿಯುಳ್ಳ ವಿದ್ಯಾರ್ಥಿ ನಿಲಯ ಇದಾಗಿದ್ದು, 204 ವಿದ್ಯಾರ್ಥಿಗಳ ಸಾಮರ್ಥ್ಯ ಹೊಂದಿದೆ. ಹಿಂದೆ ಸುಮಾರು 100 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ನೂತನ ಕಟ್ಟಡದಿಂದ ಹೆಚ್ಚಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು. ಇನ್ನೂ ಊಟ ಹಾಲ್ ವಿಸ್ತರಣೆ ಕೂಡ ಹೆಚ್ಚು ಮಾಡಿದ್ದು, ಒಂದೇ ಬಾರಿ 112 ವಿದ್ಯಾರ್ಥಿಗಳು ಊಟ ಮಾಡಬಹುದು ಎಂದರು.

ಮಂಡಳಿ ಅಧ್ಯಕ್ಷ ಆಯನೂರು ಮಂಜುನಾಥ್ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಹಾಗೂ ಆಧುನಿಕ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶವನ್ನು ಮಂಡಳಿ ಹೊಂದಿದ್ದು, ಆ ನಿಟ್ಟಿನಲ್ಲಿ ಇಂತಹ ಕಾರ್ಯ ಮಾಡಲಾಗಿದೆ ಎಂದರು.

ವಿದ್ಯಾರ್ಥಿ ನಿಲಯಕ್ಕೆ ಸೆಪ್ಟೆಂಬರ್ ನಂತರ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದ್ದು, ಈ ಉದ್ಘಾಟನೆ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳ ಆಯ್ಕೆ ನಡೆಯಲಿದೆ. ವಿದ್ಯಾರ್ಥಿನಿಯರಿಗೆ ಇಲ್ಲಿ ವಸತಿ ಅವಕಾಶವಿಲ್ಲ. ಅವರಿಗಾಗಿ ಸಿರಿಗೆರೆ ಮಠದ ವತಿಯಿಂದ ಪ್ರತ್ಯೇಕ ವ್ಯವಸ್ಥೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಯನೂರು ಮಂಜುನಾಥ್ ವಹಿಸಲಿದ್ದು, ಸಂಸದ ಬಿ.ವೈ. ರಾಘವೇಂದ್ರ, ಶಾಸಕರುಗಳಾದ ಎಸ್.ಎನ್. ಚನ್ನಬಸಪ್ಪ, ಡಾ. ಧನಂಜಯ ಸರ್ಜಿ, ಪ್ರಮುಖರಾದ ಎಸ್.ಎಸ್. ಜ್ಯೋತಿಪ್ರಕಾಶ್, ಬಿ.ವೈ. ವಿಜಯೇಂದ್ರ, ಜಿ.ಎಸ್. ರಾಜೇಶ್, ಎಸ್. ರುದ್ರೇಗೌಡ, ಎಂ.ಟಿ. ಕುಮಾರಸ್ವಾಮಿ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

 

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments