ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.14
ಸ್ಥಳೀಯ ಜ್ಞಾನ ಮತ್ತು ಜಾಗತಿಕ ಕೌಶಲ್ಯಗಳು ವಿದ್ಯಾರ್ಥಿಗಳಿಗೆ ಹೊಸ ಅವಕಾಶ ಸೃಷ್ಟಿಸುತ್ತವೆ ಎಂದು ಸಹ್ಯಾದ್ರಿ ವಾಣಿಜ್ಯ ಮತು ನಿರ್ವಹಣಾ ಕಾಲೇಜಿನ ಪ್ರಾಂಶುಪಾಲ ಟಿ. ಅವಿನಾಶ್ ಹೇಳಿದರು.
ಅವರು ಶುಕ್ರವಾರ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಇಂಗ್ಲಿಷ್ ವಿಭಾಗವು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.
ಇಂಗ್ಲಿಷ್ ಪಠ್ಯಕ್ರಮದಲ್ಲಿರುವ ಸಾಹಿತ್ಯದ ಭಾಗವು ಸಾಮಾಜಿಕ ವಾಸ್ತವಗಳ ಮೂಲಕ ನಮ್ಮನ್ನು ಸಮಾಜದೊಂದಿಗೆ ಸಂಪರ್ಕಿಸುತ್ತದೆ. ವರ್ಕ್ ಬುಕ್ ನಲ್ಲಿರುವ ವ್ಯಾಕರಣದ ಭಾಗವು ಕೌಶಲ್ಯಗಳನ್ನು ಕಲಿಸುತ್ತದೆ. ಮಾತೃ ಭಾಷೆಯನ್ನ ಸಹಜವಾಗಿ ಅನುಕರುಣೆಯ ಮೂಲಕ ಕಲಿಯಬಹುದಾದರೆ ಇಂಗ್ಲಿಷ್ ಅಥವಾ ಮತ್ತೊಂದು ಭಾಷೆಯನ್ನು ಒತ್ತಾಯದ ಅಭ್ಯಾಸದ ಮೂಲಕವಾಗಿ ಕಲಿಯಬೇಕು ಎಂದರು.
ಗಮನಿಸಿ: ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದು:ರಾಜ್ಯ ರೈತ ಸಂಘ
ಎ.ಐ ಕಾಲದಲ್ಲಿ ಇಂಗ್ಲಿಷ್, ಕೌಶಲ್ಯ ಮತ್ತು ಭಾಷೆಯ ಮಹತ್ವ ತಿಳಿಯುವುದು ಅಗತ್ಯ. ಇಂದಿನ ಉದ್ಯೋಗ ಮಾರುಕಟ್ಟೆ ಮತ್ತು ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ಪದವಿ ಸಾಕಾಗುವುದಿಲ್ಲ. ಕೃತಕ ಬುದ್ಧಿಮತ್ತೆ, ಜಾಗತೀಕರಣ ಮತ್ತು ಸ್ಪರ್ಧೆಯ ಈ ಕಾಲದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ಹೇಗೆ ಸಿದ್ಧಪಡಿಸಿಕೊಳ್ಳಬೇಕು ಎನ್ನುವುದರ ಬಗ್ಗೆ ಇತ್ತೀಚಿನ ಉಪನ್ಯಾಸಗಳು ಹಲವು ಮುಖ್ಯ ಅಂಶಗಳನ್ನು ಮುಂದಿಡುತ್ತವೆ. ಪದವಿಯ ಆಚೆಗೂ ಕೌಶಲ್ಯವೇ ಮುಖ್ಯ ಎಂದರು.
ಬಿ.ಕಾಂ, ಬಿ.ಬಿ.ಎ ಮುಗಿಸಿದ ನಂತರ ಹೆಚ್ಚಿನ ವಿದ್ಯಾರ್ಥಿಗಳು ಎಂ.ಕಾಂ ಅಥವಾ ಸ್ನಾತಕೋತ್ತರಕ್ಕೆ ಹೋಗದೆ ನೇರವಾಗಿ ಉದ್ಯೋಗಕ್ಕೆ ಹೋಗುತ್ತಿದ್ದಾರೆ. ಆದರೆ ಕೇವಲ ಡಿಗ್ರಿ ಇದ್ದರೆ ಸಾಲದು. ಕರ್ನಾಟಕದ ಬಗ್ಗೆ ಯೋಚಿಸಿ, ಭಾರತದ ಬಗ್ಗೆ ಯೋಚಿಸಿ. ನಿಮ್ಮ ವೃತ್ತಿಯನ್ನು ರೂಪಿಸಿಕೊಳ್ಳಬೇಕಾದರೆ ನೀವು ಹಲವು ಕೌಶಲ್ಯಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈಗ ಮಾರುಕಟ್ಟೆಗೆ ಬೇಕಾಗಿರುವುದು. ಕೌಶಲ್ಯ ಹೊಂದಿದ ಅಭ್ಯರ್ಥಿಗಳು. ಅದಕ್ಕಾಗಿ ಸ್ವವಿವರ ರಚನೆಯ ಹೊಸ ವಿಧಾನಗಳನ್ನು ಕಲಿಯಬೇಕಿದೆ, ಸಂವಹನ ಕೌಶಲ್ಯ, ತಂತ್ರಜ್ಞಾನ ನಿರ್ವಹಣೆ ಎಲ್ಲವೂ ಅಗತ್ಯ ಎಂದರು.
ಮಣಿಪಾಲ್ ಅಕಾಡೆಮಿ ಆಪ್ ಹೈಯರ್ ಎಜುಕೇಶನ್‌ನ ಡಾ.ಪ್ರವೀಣ್ ಶೆಟ್ಟಿ ಮಾತನಾಡಿ, ಇಂಗ್ಲಿಷ್ ಹೊಸದಾರಿಗಳನ್ನು ತೆರೆಯುವ ಭಾಷೆ, ಸಮಕಾಲೀನ ಸಂದರ್ಭದಲ್ಲಿ ಇಂಗ್ಲಿಷ್ ಮೂಲಕ ನಾವು ಕೌಶಲ್ಯ ಗಳನ್ನು ರೂಢಿಸಿಕೊಳ್ಳಬಹುದು ಎಂದು ತಿಳಿಸಿದರು.
ಅಸ್ಮಾ ಮೇಲಿನಮನಿ ಸ್ವವಿವರದ ಬಗ್ಗೆ ಉಪನ್ಯಾಸ ನೀಡಿದರು. ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಪರುಶರಾಮ್ ಎಂ. ಉಪಸ್ಥಿತರಿದ್ದರು. ರಮ್ಯ ಕಾರ್ಯಕ್ರಮ ನಿರೂಪಿಸಿ, ಧರ್ಮೇಗೌಡ ವಂದಿಸಿದರು.
