ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.16
ಕೆಲವರು ಹಾರ ತುರಾಯಿ, ಪ್ಲೆಕ್ಸ್ ಗಳಿಗೆ ಕೆಲವು ರಾಜಕಾರಣಿಗಳು ಸೀಮಿತವಾಗಿರುತ್ತಾರೆ. ಆದರೆ ಸಂಸದಬಿ.ವೈ. ರಾಘವೇಂದ್ರ ರಾಜಕೀಯ ಜೀವನ ಹಾಗಿಲ್ಲ. ಎಲ್ಲೆಲ್ಲಿ ಅನುದಾನ ತರಬಹುದು, ಯಾವ ಅಭಿವೃದ್ಧಿಕೆಲಸ ಮಾಡಬಹುದೆಂದು ಯೋಚಿಸಿ ಜನಪರ ಯೋಜನೆಯ ನಡೆ ಇಡುತ್ತಿದ್ದಾರೆ ಎಂದು ಶಾಸಕ ಆರಗ ಜ್ಞಾನೇಂದ್ರ ಬಣ್ಣಿಸಿದರು.
ಅವರು ಬಿ.ವೈ. ರಾಘವೆಂದ್ರ ಅಭಿಮಾನಿ ಬಳಗದ ವತಿಯಿಂದ ಭಾನುವಾರ ಬಂಟರ ಭವನದಲ್ಲಿ ಆಯೋಜಿಸಿದ್ದ ಸಂಸದ ಬಿ.ವೈ. ರಾಘವೇಂದ್ರ ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮದಲ್ಲಿ ಸಂಸದರನ್ನು ಅಭಿನಂದಿಸಿ ಮಾತನಾಡಿದರು.

ತಂದೆಯ ರಾಜಕೀಯ ಚಾಣಕ್ಷತನ, ತಾಯಿ ನೀಡಿದ ಸಂಸ್ಕಾರದಿಂದಾಗಿ ಅವರು ಉತ್ತೇಜಿತರಾಗಿ ಕೆಲಸ ಮಾಡುತ್ತಿದ್ದಾರೆ. ನಗರಕ್ಕೆ ಎರಡು ರೈಲುಗಳು ಬರುತ್ತಿದ್ದವು. ಈಗ 20 ಕ್ಕೂ ಹೆಚ್ಚು ರೈಲುಗಳು ಓಡಾಡುತ್ತಿವೆ. ಕೆಲವು ಸಂಸದರು ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಆದರೆ ಈ ಸಂಸದರು ಪಾದರಸದಂತೆ ಓಡಾಡಿ ಕೆಲಸ ಮಾಡುತ್ತಿದ್ದಾರೆ. ಅಂತಹವರ ಹುಟ್ಟು ಹಬ್ಬ ಅರ್ಥಪೂರ್ಣವಾಗಿದೆ ಎಂದರು.
ಗಮನಿಸಿ: ಮತ್ತಷ್ಟು ಅಭಿವೃದ್ಧಿ ಮಾಡಲು ಜಿಲ್ಲೆಯ ಜನರು ಸಂಸದರಿಗೆ ಶಕ್ತಿ ನೀಡಿ : ಬಿಎಸ್ ವೈ
ಎಫ್ ಎಂ ರೇಡಿಯೋ, ಸಿಗಂದೂರು ಸೇತುವೆ, ನ್ಯಾಷನಲ್ ಹೈವೆ, ರೈಲ್ವೆ, ಏರ್ ವೇ, ಆರ್ ಎಎಫ್ ಘಟಕ, ಅಡಿಕೆ ಬೆಳೆಗಾರರಿಗೆ ಸ್ಪಂದನೆ ಹೀಗೆ ಹತ್ರಾರು ಯೋಜನೆಗಳನ್ನು ತಂದಿದ್ದಾರೆ. ರಾಘಣ್ಣ ಶೋ ಪೀಸ್ ರಾಜಕಾರಣಿಯಲ್ಲ. ನಿಜವಾದ ಶಕ್ತಿ ಇರುವಂತಹ ರಾಜಕಾರಣಿ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎನ್. ಕೆ. ಜಗದೀಶ್, ಸಿ.ಎಚ್. ಮಾಲತೇಶ್, ವೇದಿಕೆಯಲ್ಲಿ ಪ್ರಮುಖರಾದ ಬಳ್ಳೆಕೆರೆ ಸಂತೋಷ್ ಡಾ.ಸತೀಶ್ ಕುಮಾರ್ ಶೆಟ್ಟಿ, ಗುರುಮೂರ್ತಿ, ಪದ್ಮನಾಭ ಭಟ್, ಶಾಂತಾ ಸುರೇಂದ್ರ, ಸುರೇಖಾ ಮುರಳೀಧರ್, ಟಿ.ಡಿ. ಮೇಘರಾಜ್ ಮೊದಲಾದವರು ಇದ್ದರು.
