Homeಜಿಲ್ಲೆಮತ್ತಷ್ಟು ಅಭಿವೃದ್ಧಿ ಮಾಡಲು ಜಿಲ್ಲೆಯ ಜನರು ಸಂಸದರಿಗೆ ಶಕ್ತಿ ನೀಡಿ : ಬಿಎಸ್ ವೈ

ಮತ್ತಷ್ಟು ಅಭಿವೃದ್ಧಿ ಮಾಡಲು ಜಿಲ್ಲೆಯ ಜನರು ಸಂಸದರಿಗೆ ಶಕ್ತಿ ನೀಡಿ : ಬಿಎಸ್ ವೈ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.16

ಇಡೀ ರಾಜ್ಯದಲ್ಲಿ ಜಿಲ್ಲೆಯನ್ನು ಮಾದರಿಯನ್ನಾಗಿ ಮಾಡಲಾಗಿದೆ. ಇದರಲ್ಲಿ ಸಂಸದ ಬಿ.ವೈ. ರಾಘವೇಂದ್ರ  ಪಾತ್ರವೂ ಮುಖ್ಯವಾಗಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಅವರು ಬಿಜೆಪಿ ಗ್ರಾಮಾಂತರ ಘಟಕದಿಂದ ನಗರದ ಬಂಜಾರ ಕನ್ವೆನ್‌ಶನ್ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಸಂಸದ ಬಿ.ವೈ. ರಾಘವೇಂದ್ರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಾಲ್ಕು ಬಾರಿ ಸಂಸದರಾದ ರಾಘವೇಂದ್ರ ಅವರು ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದು, ಕಳೆದ ಹತ್ತಾರು ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಏನೇನುಮಾಡಬೇಕೋ ಅದನ್ನೆಲ್ಲಾ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಲು ಸಿದ್ಧವಿದ್ದು ಜಿಲ್ಲೆಯ ಜನತೆ ಶಕ್ತಿ ನೀಡಬೇಕು ಎಂದರು.

ಗಮನಿಸಿ: ಶಿಕ್ಷಣ ಪಡೆಯುವ ಸಮಾಜ ಸದೃಢವಾಗಿ ಬೆಳೆಯಲಿದೆ: ಬಿಎಸ್‌ವೈ

ಹಿಂದೆ ಹಣ, ಹೆಂಡ, ತೋಳ್ಬಲದಲ್ಲಿ ರಾಜಕಾರಣ ಮಾಡಲಾಗುತ್ತಿತ್ತು. ಆದರೆ ಮುಂದಿನ ದಿನಗಳಲ್ಲಿ ಅಂತಹದೊಂಬರಾಟಗಳು ನಡೆಯುವುದಿಲ್ಲ. ಎಲ್ಲರೂ ವಿದ್ಯಾವಂತರಾಗಿದ್ದಾರೆ. ಯೋಚಿಸುವ ಶಕ್ತಿ ಎಲ್ಲರಲ್ಲಿಯೂಇದೆ. ಹೀಗಾಗಿ ಕೆಲಸವೇ ಮತನಾಡುತ್ತವೆ ಎಂದರು.

ನನ್ನ ಅಧಿಕಾರ ಅವಧಿಯಲ್ಲಿ ಎಲ್ಲಾ ಸಮಾಜದವರಿಗೂ ಸುಸಜ್ಜಿತವಾದ ಸಮುದಾಯ ಭವನಗಳನ್ನುಮಾಡಿ ಕೊಡಲಾಗಿದೆ. ನಗರದಿಂದ ಬೆಂಗಳೂರಿಗೆ ಹಾರುತ್ತಿದ್ದ  ವಿಮಾನ ನಿಂತು ಹೋಗಿದ್ದವು. ಕೆಲವೇ ದಿನಗಳಲ್ಲಿ ಅವುಗಳ ಹಾರಾಟ ಆರಂಭವಾಗಲಿದೆ ಎಂದರು.

ಇಲ್ಲಿ ಹಿರಿಯ ಕಾರ್ಯಕರ್ತರರಿಗೆ ಸನ್ಮಾನ ಮಾಡಿದ್ದು, ನಿಮಗೆ ವಯಸ್ಸಾಗಿದೆ. ನೀವು ಮನೆಯಲ್ಲಿ ಇರಿ ಎಂದಲ್ಲ. 18 ವರ್ಷದ  ಹುಡುಗರಂತೆ ಮತ್ತಷ್ಟು ಕೆಲಸ ಮಾಡಿಯೆಂದು. ಹೀಗಾಗಿಕ್ಷೇತ್ರದಲ್ಲಿ ಓಡಾಟ ಮಾಡಿ ಸಂಘಟನೆ ಮಾಡುವಂತೆ  ಪ್ರೇರೇಪಿಸಿದರು.

ಸಂಸದ ರಾಘವೇಂದ್ರ ಮಾತನಾಡಿ, ಕಾರ್ಯಕರ್ತರು, ಮತದಾರರ ಹಾರೈಕೆ ಮುಂದೆ ನಾನೇನು ಅಲ್ಲ.ನಾನು ಮಾಜಿ ಸಿಎಂ ಮಗ, ಸಂಸದ ಎಂಬುದು ತೃಣ ಸಮಾನ. ನೀವು ಹಾಕಿರುವ ಫ್ಲೆಕ್ಸ್‌ಗಳು, ಹಾರ, ತುರಾಯಿತೋರುತ್ತಿರುವ ಅಭಿಮಾನ ಅತೀ ದೊಡ್ಡದು. ನಿಮ್ಮ ಹೋರಾಟದ ಫಲವಾಗಿ ನಾನು ಸಂಸದನಾಗಿದ್ದೇನೆನಿಮ್ಮ ಹಾರೈಕೆ ಇದ್ದರೆ ಇನ್ನಷ್ಟು ಸೇವೆ ಮಾಡುತ್ತೇನೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments