ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.18
ಶ್ರೀಗಂಧ ಸಾಂಸ್ಕೃತಿ ಸಂಸ್ಥೆ, ಬ್ರಾಹ್ಮಿನ್ ಆರ್ಗನೈಸೇಶನ್ ಆಫ್ ಇಂಡಿಯಾ ಇವರ ಸಂಯುಕ್ತಾಶ್ರದಲ್ಲಿ ಆ.22 ರಂದು ಸಂಜೆ 5 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಯಕ್ಷಗಾನ ಭೀಷ್ಮ ಪರ್ವ ಮತ್ತು ಗಧಾಯುದ್ದ ಪ್ರದರ್ಶನವನ್ನು ಏರ್ಪಡಿಸಲಾಗಿದೆ ಎಂದು ಶ್ರೀಗಂಧ ಸಂಸ್ಥೆಯ ಸಂಚಾಲಕ ಉಮೇಶ್ ಆರಾಧ್ಯ ಹೇಳಿದರು.
ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭೀಷ್ಮಪರ್ವ ಮತ್ತು ಗಧಾಯುದ್ದ ಯಕ್ಷಗಾನ ಪ್ರಸಂಗಗಳನ್ನು ಕುಮುಟ ತಾಲ್ಲೂಕಿನ ಯಾಜಿ ಯಕ್ಷಮಿತ್ರ ಮಂಡಳಿ, ಅತಿಥಿ ಕಲಾವಿದರ ಕೂಡುವಿಕೆಯಿಂದ ನಡೆಯುತ್ತದೆ ಎಂದರು.
ಗಮನಿಸಿ: ನಾಳೆ ಶಿಕಾರಿಪುರ ಬಂದ್‌ಗೆ ನನ್ನ ಸಹಕಾರವಿದೆ: ಬಿವೈಆರ್
ಸಭಾ ಕಾರ್ಯಕ್ರಮದಲ್ಲಿ ಶ್ರೀಗಂಧ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಕೋಶಾಧ್ಯಕ್ಷ ಕೆ.ಈ.ಕಾಂತೇಶ್, ಪ್ರಮುಖರಾದ ವೆಂಕಟೇಶ್ ರಾವ್.ಕೆ, ಎಂ.ಎಸ್.ಸೂರ್ಯನಾರಾಯಣ, ಛಾಯಪತಿ ಹೆಚ್.ಎನ್, ಸಂತೋಷ್ ಕುಮಾರ್.ಹೆಚ್.ಆರ್ ಉಪಸ್ಥಿತರಿರುವರು. ಇದೇ ಸಂದರ್ಭದಲ್ಲಿ ಯಕ್ಷ ಸಾಧಕರುಗಳಾದ ಪ್ರಸಿದ್ದ ಭಾಗವತರಾದ ಕೇಶವ ಹೆಗ್ಗಡೆ ಕೊಳಲಿ, ಯಕ್ಷಗಾನ ಕಲಾವಿದರುಗಳಾದ ಬಳ್ಕೂರು ಕೃಷ್ಣಯಾಜಿ, ಆನಂದ ಶೆಟ್ಟಿ, ಕಿರಣ ಪೈ ಅವರುಗಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀಗಂಧ ಸಂಸ್ಥೆಯ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಕೋಶಾಧ್ಯಕ್ಷ ಕೆ.ಈ.ಕಾಂತೇಶ್, ಬಿಒಐ ಸಮಿತಿಯ ಜಿಲ್ಲಾಧ್ಯಕ್ಷ ವೆಂಕಟೇಶ್ ರಾವ್.ಕೆ, ಕಾರ್ಯಕ್ರಮ ಸಂಚಾಲಕ ಎಂ.ಎಸ್.ಸೂರ್ಯನಾರಾಯಣ, ಪ್ರಮುಖರಾದ ಇ. ವಿಶ್ವಾಸ್, ಮೋಹನ್ ಜಾಧವ್, ಶ್ರೀಕಾಂತ್, ಯಜ್ಞ ನಾರಾಯಣ್, ಸತ್ಯನಾರಾಯಣ್, ಸಂತೋಷ್ ಸೇರಿದಂತೆ ಹಲವರು ಇದ್ದರು.
