ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.18
ಪ್ರವರ ಪ್ರಶಸ್ತಿ ಪುರಸ್ಕೃತರಾದ, ಪ್ರತಿಭಾವಂತ ರಂಗ ಕರ್ಮಿ, ರಂಗ ನಿರ್ದೇಶಕ ಹಾಗೂ ಹಿರಿಯ ಪತ್ರಕರ್ತ ಆರ್. ಎಸ್. ಹಾಲಸ್ವಾಮಿ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆ ಅಭಿನಂದಿಸಿದೆ.
ಆರ್. ಎಸ್. ಹಾಲಸ್ವಾಮಿ ಅವರ ಸುದೀರ್ಘ ರಂಗ ಸೇವೆಯನ್ನು ಗುರುತಿಸಿ, ಬೆಂಗಳೂರಿನ ಪ್ರವರ ಥೀಯೇಟರ್ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಕೊಡ ಮಾಡಿರುವುದು ಪ್ರತಿಭೆಗೆ ಸಂದ ಅರ್ಹ ಗೌರವವಾಗಿದೆ.
ಗಮನಿಸಿ: ಆ.22 ರಂದು ಭೀಷ್ಮ ಪರ್ವ-ಗಧಾಯುದ್ದ ಪ್ರಸಂಗ
ಪ್ರಶಸ್ತಿ ಪುರಸ್ಕೃತ ಆರ್. ಎಸ್. ಹಾಲಸ್ವಾಮಿ ಅವರು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ಪ್ರಧಾನ ಕಾರ್ಯದರ್ಶಿಗಳು ಎಂಬುದು ಹೆಮ್ಮೆಯ ಸಂಗತಿಯಾಗಿದ್ದು, ಅವರ ಸಾಧನೆಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಅವಕಾಶಗಳು, ಗೌರವ, ಸನ್ಮಾನಗಳು ಲಭಿಸಲಿ ಎಂದು ಸಂಘದ ಅಧ್ಯಕ್ಷ ವೈದ್ಯನಾಥ್ ಹೆಚ್. ಯು., ರಾಜ್ಯ ಸಮಿತಿ ನಿರ್ದೇಶಕರಾದ ಕೆ. ವಿ. ಶಿವಕುಮಾರ್, ಎನ್. ರವಿಕುಮಾರ್ ಮತ್ತು ಪದಾಧಿಕಾರಿಗಳು ಹಾರೈಸಿದ್ದಾರೆ.
