ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.20
ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಆಗಿದ್ದು, ಸ್ಥಳದಲ್ಲಿ ಬೈಕ್ ಸವಾರನು ಮೃತ ಪಟ್ಟಿರುವ ಘಟನೆ ಬುಧವಾರ ರಾತ್ರಿ ಸಾಗರ ತಾಲ್ಲೂಕಿನ ಬಳಸಗೋಡು ಸಮೀಪದಲ್ಲಿ ನಡೆದಿದೆ.
ಮೃತರನ್ನು ಚಿಪ್ಳಿ ಗ್ರಾಮದ ವೆಂಕಟೇಶ್ ಅವರ ಪುತ್ರ ಅರ್ಜುನ್ (19) ಎಂದು ಗುರುತಿಸಲಾಗಿದ್ದು, ರಾತ್ರಿ 10.45 ಕ್ಕೆ ಈ ದುರ್ಘಟನೆ ಸಂಭವಿಸಿದೆ.
ಗಮನಿಸಿ: ಅರಸು ಕಾಲ ಅನಾಥ ಜನಜಾತಿಯ ಪಾಲಿಗೆ ಸುವರ್ಣ ಯುಗ- ಎನ್.ರವಿಕುಮಾರ್ ಬರಹ
ಅರ್ಜುನ್ ಸಾಗರದಿಂದ ಆನಂದಪುರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಿಂದ ಬೈಕ್‌ನಲ್ಲಿ ತೆರಳುತ್ತಿದ್ದ. ಈ ವೇಳೆ ಶಿವಮೊಗ್ಗ ಕಡೆಯಿಂದ ಸಾಗರದತ್ತ ಬರುತ್ತಿದ್ದ ಎಸ್.ಎನ್.ನಗರ ಮೂಲದ ಕಾರು ಬಳಸಗೋಡು ಸಮೀಪದಲ್ಲಿ ಆತನ ಬೈಕ್‌ಗೆ ಎದುರಾಗಿ ಮುಖಾಮುಖಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಅರ್ಜುನ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆ ಮುಂದುವರಿದಿದೆ.
