Homeಜಿಲ್ಲೆಕಸ್ತೂರಿ ರಂಗನ್ ವರದಿ ಕಸದ ಬುಟ್ಟಿಗೆ ಹಾಕಲು ಯೋಗ್ಯ

ಕಸ್ತೂರಿ ರಂಗನ್ ವರದಿ ಕಸದ ಬುಟ್ಟಿಗೆ ಹಾಕಲು ಯೋಗ್ಯ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.1

ಕಸ್ತೂರಿ ರಂಗನ್ ವರದಿ ಕಸದ ಬುಟ್ಟಿಗೆ ಹಾಕಲು ಯೋಗ್ಯವಾಗಿದೆ ಎಂದು ಮಲೆನಾಡು ರೈತ ಹೋರಾಟ ಸಮಿತಿ ಸಂಚಾಲಕ ತೀ.ನ. ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಟಿಷರ ಕಾಲದಲ್ಲಿ 1952 ರಲ್ಲಿ ಕಂದಾಯ ಇಲಾಖೆಯಿಂದ ನೀಡಿದ ಸುಮಾರು 50 ಸಾವಿರ ಎಕರೆ ಕೃಷಿ ಕಾಡನ್ನು, ಕೃಷಿಕರನ್ನು ಕಾನೂನು ಬಾಹಿರ ಮಾಡುವ ಉದ್ದೇಶದಿಂದ ಅರಣ್ಯ ಎಂದು ಘೋಷಿಸಲಾಗಿದೆ. 1840 ರಿಂದ 1930 ರವರೆಗೆ ಈ ಪ್ರದೇಶಗಳನ್ನೆಲ್ಲಾ ಅರಣ್ಯವೆಂದು ಘೋಷಿಸಿ ದಾಖಲೆ ಮಾಡಲಾಗಿದೆ ಎಂದು ತಿಳಿಸಿದರು.

ಗಮನಿಸಿ: ರಾಹುಲ್ ಗಾಂಧಿ ಮೇಲೆ ಎಫ್‌ಐಆರ್ ವಿರೋಧಿಸಿ ಶಿವಮೊಗ್ಗದಲ್ಲಿ ಕಾಂಗ್ರೆಸ್ ಪ್ರತಿಭಟನೆ

ಯತಿಬೈಲು, ಸೀತನಳ್ಳಿ, ಹುಲಿಬನ, ದೇಸಗುಡ್ಡ, ಮೂಡೂರು ಎಂದು ಈ ಹಿಂದೆ ಇಲ್ಲದ ಪ್ರದೇಶವನ್ನು ನೂತನ ಗ್ರಾಮದ ಹೆಸರುಗಳನ್ನು ಸೃಷ್ಟಿಸಿ ಅರಣ್ಯವೆಂದು ಘೋಷಿಸಲಾಗಿದೆ. ನೆಲ್ಲಿನ ಬೆಟ್ಟ, ಕಾನು, ಜಾಡಿ ಭಾಗದಲ್ಲಿ ಜನವಸತಿ ಇದ್ದರೂ ನಕಲಿ ಅರಣ್ಯವೆಂದು ಘೋಷಿಸಲಾಗಿದೆ ಎಂದು ಆರೋಪಿಸಿದರು.

2006 ರ ಅರಣ್ಯ ಹಕ್ಕು ಕಾಯಿದೆ ಜಿಲ್ಲೆಯಲ್ಲಿ ಇನ್ನೂ ಜಾರಿಯಾಗಿಲ್ಲ, 40 ಸಾವಿರ ಅರ್ಜಿಗಳು ಬಾಕಿ ಇವೆ. 78 ರ ಪೂರ್ವದ ಅರಣ್ಯ ಒತ್ತುವರಿದಾರರಿಗೆ ತಲಾ 3 ಎಕರೆ ಅರಣ್ಯ ಭೂಮಿ ಮಂಜೂರು ಮಾಡಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ 8 ಆದೇಶಗಳನ್ನು ಹೊರಡಿಸಿದ್ದರೂ ಅವಿನ್ನು ಜಾರಿಯಾಗಿಲ್ಲ ಎಂದು ಹೇಳಿದರು.

ಪಶ್ಚಿಮ ಘಟ್ಟದ ಬಗ್ಗೆ ಯಾವುದೇ ತಜ್ಞರ ಅಧ್ಯಯನವಿಲ್ಲದೆ, ವೈಜ್ಞಾನಿಕ ಆಧಾರವಿಲ್ಲದೆ ಕಸ್ತೂರಿ ರಂಗನ್ ವರದಿಯನ್ನು ಸಿದ್ಧಪಡಿಸಲಾಗಿದೆ. ಇದು ಮಲೆನಾಡಿಗರ ಮೂಲಭೂತ ಹಕ್ಕಿಗೆ ಭಂಗ ತರುವಂತಿದೆ. ಕಳೆದ 10 ವರ್ಷಗಳಿಂದ ಮಲೆನಾಡಿನಲ್ಲಿ ಏನು ನಡೆಯುತ್ತಿದೆ ಎಂಬ ಅರಿವು ಇಲ್ಲದೆ ಜನಪ್ರತಿನಿಧಿಗಳು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾರೆ. ಜಿಲ್ಲೆಯ ಶಾಸಕರು, ಸಂಸದರು, ಮಂತ್ರಿಗಳು ಈ ಬಗ್ಗೆ ತನಿಖೆ ನಡೆಸಬೇಕು ಮತ್ತು ಕಾನೂನುಬಾಹಿರ ಹಿಡಿತವನ್ನು ಕಳಚಬೇಕು ಎಂದು ಒತ್ತಾಯಿಸಿದರು.

ಸಂಸದ ಬಿ.ವೈ.ರಾಘವೇಂದ್ರ ಅವರು 4 ಬಾರಿ ಸಂಸದರಾದರು ಸದನದಲ್ಲಿ ಇಲ್ಲಿವರೆಗೂ ಕಸ್ತೂರಿ ರಂಗನ್ ವರದಿ ಸೇರಿ ಮಲ್ನಾಡಿನ ಸಮಸ್ಯೆಗಳನ್ನ ಕುರಿತು ಮಾತನಾಡಿಲ್ಲ. ಆದರೆ ಈಗ ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಜಂಟಿ ಸರ್ವೇ ಆಗಬೇಕು ಎನ್ನುತ್ತಿದ್ದಾರೆ. ಇನ್ನೊಂದೆಡೆ ಜಿಲ್ಲೆಯ ಸಚಿವರು ಹಾಗೂ ಶಾಸಕರು ಕೂಡ ವಿಧಾನ ಸಭೆ ಈ ಬಗ್ಗೆ ಮತನಾಡದೆ ಈಗ ಹೋರಾಟದ ನೆಪದಲ್ಲಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಮಾತನಾಡಬೇಕಾದ ಸ್ಥಳದಲ್ಲಿ ಮೌನ ವಹಿಸಿ ಈಗ ಜನರ ಮುಂದೆ ಹೋರಾಟದ ನಾಟಕವಾಡುತ್ತಿರುವುದು ಸರಿ ಇಲ್ಲ ಎಂದು ಕಿಡಿಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ಆಶೋಕ್ ಜಂಭಳ್ಳಿ, ಮಂಜಪ್ಪ, ಚಕ್ರಪಾಣಿ, ರವಿ ಭಟ್ಟರು, ವಿನಯ್, ಕೃಷ್ಣಪ್ಪ, ಸುಂಗAಧರಾಜ್, ದೇವೇಂದ್ರ, ದಿನೇಶ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments