Homeಜಿಲ್ಲೆದೀಪಕ್,ಯತಿರಾಜ್, ಗುರುಪ್ರಸಾದ್,ಬದ್ರುದ್ದೀನ್ ಗೆ ಎಸ್ಸಿ-ಎಸ್ಟಿ ದತ್ತಿ ಪ್ರಶಸ್ತಿ

ದೀಪಕ್,ಯತಿರಾಜ್, ಗುರುಪ್ರಸಾದ್,ಬದ್ರುದ್ದೀನ್ ಗೆ ಎಸ್ಸಿ-ಎಸ್ಟಿ ದತ್ತಿ ಪ್ರಶಸ್ತಿ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.2

ಕರ್ನಾಟಕ ಎಸ್ಸಿ-ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ಪ್ರತಿಷ್ಠಿತ ರಾಜ್ಯ ಮಟ್ಟದ ವಾರ್ಷಿಕ ದತ್ತಿ ಪ್ರಶಸ್ತಿ-2025 ಪ್ರಕಟವಾಗಿದ್ದು, ಈ ಪ್ರಶಸ್ತಿಗೆ ಪತ್ರಕರ್ತರುಗಳಾದ ಕೆ.ದೀಪಕ್, ಯತಿರಾಜ್ ಬ್ಯಾಲಹಳ್ಳಿ, ಬೆಂಗಳೂರು ಮಾಹಿತಿ ಆಯೋಗ ಆಯುಕ್ತರು ಹಾಗೂ ಹಿರಿಯ ಪತ್ರಕರ್ತ ಬದ್ರುದ್ದೀನ್.ಕೆ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕರು ಗುರುಪ್ರಸಾದ್ ಕೆರಗೋಡು ಭಾಜನರಾಗಿದ್ದಾರೆ.

ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಪತ್ರಿಕಾ ಸಂಪಾದಕರ ಸಂಘವು ಕಳೆದ 26 ವರ್ಷಗಳಿಂದ ರಾಜ್ಯದಲ್ಲಿ ಕರ್ನಾಟಕ ಸರ್ಕಾರದ ಮಾಧ್ಯಮ ಪಟ್ಟಿಯಲ್ಲಿನ ದಲಿತರ ಮಾಲಿಕತ್ವ ಅಥವಾ ಸಂಪಾದಕತ್ವದ ಪತ್ರಿಕೆಗಳ ಹಿತ ಕಾಯುವ ಮತ್ತು ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ದಲಿತರ ಸಹಭಾಗಿತ್ವವನ್ನು ಬಲಪಡಿಸುವಲ್ಲಿ ಹಾಗೂ ದಲಿತ ಪತ್ರಕರ್ತರ ಬೌದ್ಧಿಕ ಉನ್ನತೀಕರಣದಂತಹ ರಚನಾತ್ಮಕ ಮತ್ತು ಕ್ರಿಯಾತ್ಮಕ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದು, ಇದರ ಭಾಗವಾಗಿ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿರುವ ದಲಿತರು, ಶೋಷಿತರ ಪರವಾಗಿ ಅಹರ್ನಿಶಿ ದುಡಿದ ದಲಿತರು ಮತ್ತು ದಲಿತ ಸಂವೇದನೆಯುಳ್ಳ ದಲಿತೇತರ ಹಿರಿಯ ಮತ್ತು ಉದಯೋನ್ಮುಖ ವೃತ್ತಿಪರ ಪತ್ರಕರ್ತರನ್ನು, ಹೋರಾಟಗಾರರನ್ನು ಗುರುತಿಸಿ ಗೌರವಿಸುವ ಮತ್ತು ಪ್ರೋತ್ಸಾಹಿಸುವ ಜವಬ್ದಾರಿಯನ್ನು ನಿರ್ವಹಿಸುತ್ತಿದೆ.

ಈ ನಿಟ್ಟಿನಲ್ಲಿ ಸಂವಿಧಾನ ಶಿಲ್ಪಿ, ನಿಷ್ಪಕ್ಷಪಾತ ಪತ್ರಿಕೋದ್ಯಮದ ನೈತಿಕ ಮೌಲ್ಯವೇ ಆಗಿದ್ದ ಡಾ. ಬಾಬಾ ಸಾಹೇಬ್‌ಅಂಬೇಡ್ಕರ್, ದಲಿತ ಚಳವಳಿಯ ಕಟ್ಟಿದ ಪ್ರೊ.ಬಿ.ಕೃಷ್ಣಪ್ಪ, ದಲಿತರ ಸ್ವಾಭಿಮಾನ, ಹಕ್ಕುಗಳಿಗೆ ರಾಜಕೀಯ ಶಕ್ತಿ ಧಾರೆ ಎರೆದ ಮಾಜಿ ಸಚಿವರಾದ ಬಿ. ಬಸವಲಿಂಗಪ್ಪ, ಮಾಜಿ ಸಚಿವ ಬಿ.ರಾಚಯ್ಯ ಅವರುಗಳ ಹೆಸರಿನಲ್ಲಿ ರಾಜ್ಯಮಟ್ಟದ ದತ್ತಿನಿಧಿ ಪ್ರಶಸ್ತಿಗಳನ್ನು ಸ್ಥಾಪಿಸಲಾಗಿದೆ.

ಈ ಬಾರಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ದತ್ತಿ ಪ್ರಶಸ್ತಿಗೆ ಮೈಸೂರಿನ ವಿಜಯಕಾಲ ದಿನಪ್ರತಿಕೆ ಸಂಪಾದಕ ಹಾಗೂ ಪ್ರಗತಿಪರ ಚಿಂತಕ ಕೆ.ದೀಪಕ್, ಪ್ರೊ.ಬಿ.ಕೃಷ್ಣಪ್ಪ ದತ್ತಿ ಪ್ರಶಸ್ತಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರೆಗೋಡು, ಬಿ.ರಾಚಯ್ಯ ದತ್ತಿ ಪ್ರಶಸ್ತಿಗೆ ಬೆಂಗಳೂರು ಮಾಹಿತಿ ಆಯೋಗದ ಆಯುಕ್ತರು ಹಾಗೂ ಹಿರಿಯ ಪತ್ರಕರ್ತ ಬದ್ರುದ್ದೀನ್. ಕೆ ಹಾಗೂ ಬಿ. ಬಸವಲಿಂಗಪ್ಪ ದತ್ತಿ ಪ್ರಶಸ್ತಿಗೆ ಪತ್ರಕರ್ತ ಯತಿರಾಜ್ ಬಿ.ಸಿ ಭಾಜನರಾಗಿದ್ದಾರೆ.

ಈ ದತ್ತಿ ಪ್ರಶಸ್ತಿಗಳು ತಲಾ 10 ಸಾವಿರ ರೂ. ನಗದು, ಪ್ರಶಸ್ತಿ ಫಲಕಗಳನ್ನೊಳಗೊಂಡಿದ್ದು, ಸೆಪ್ಟಂಬರ್ 17 ರಂದು ಬೆಂಗಳೂರು ಕಬ್ಬನ್ ಪಾರ್ಕ್ ನಲ್ಲಿರುವ ಸರ್ಕಾರಿ ನೌಕರರ ಸಂಘದ ಆಡಿಟೋರಿಯಂ ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಸಂಘವು ದತ್ತಿ ಪ್ರಶಸ್ತಿಯೊಂದಿಗೆ ಎಸ್‌ಸಿ ಎಸ್‌ಟಿ ಸಂಪಾದಕರುಗಳಿಗೆ 2025 ನೇ ಸಾಲಿನ ಗೌರವ ಪ್ರಶಸ್ತಿಯನ್ನು ಘೋಷಿಸಿದ್ದು, ದಾವಣಗೆರೆಯ ‘ಕರ್ನಾಟಕ ಎಕ್ಸ್ ಪ್ರೆಸ್’ ಸಂಪಾದಕ ಚಂದ್ರಣ್ಣ, ಗುಲ್ಬರ್ಗಾದ ‘ಬುದ್ಧಲೋಕ’ ಸಂಪಾದಕ ದೇವೇಂದ್ರಪ್ಪ ಕಪ್ಪನೂರು, ದಾವಣಗೆರೆಯ ‘ಜಗಳೂರು ವಾಯ್ಸ್’ ಸಂಪಾದಕ ಬಿ.ಓ.ಕರಿಯಮ್ಮ, ಬಾಲಕೋಟೆಯ ‘ಸುದಿನ’ ಕನ್ನಡ ದಿನ ಪತ್ರಿಕೆ ಸಂಪಾದಕ ಸುಭಾಷ್ ಹೊದ್ಲೂರು, ಬಳ್ಳಾರಿಯ ’ಬಳ್ಳಾರಿ ಬೆಳಗಾಯಿತು’ ಕಾರ್ಯನಿರ್ವಾಹಕ ಸಂಪಾದಕ, ಅನೂಪ್ ಕುಮಾರ್ ಭಾಜರಾಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments