ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.2
ವಾಲ್ಮೀಕಿ ನಿಗಮ ಹರಣ ಸೇರಿದಂತೆ ಕಾಂಗ್ರೆಸ್ ಸರ್ಕಾರ ಆಡಳಿತ ವೈಫಲ್ಯ ಕುರಿತು ರಾಯಚೂರಿನಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಮಂಗಳವಾರ ‘ಬಳ್ಳಾರಿ ಚಲೋ’ ಪಾದಯಾತ್ರೆಗೆ ಚಾಲನೆ ದೊರಕಿದ್ದು, ಈ ವೇಳೆ ಸಮಾವೇಶದಲ್ಲಿ ವಿರೋಧ ಪಕ್ಷ ನಾಯಕ ಆರ್.ಅಶೋಕ್ ಕೆಪಿಎಸ್‌ಸಿ ಹಗರಣ ಕುರಿತಂತೆ ಮೂರೇ ತಿಂಗಳಲ್ಲಿ ಡಿಕೆಶಿ ಸಂಪುಟದಲ್ಲಿ ಒಂದು ವಿಕೆಟ್ ಪತನವಾಗಲಿದೆ. ಮರಿ ಖರ್ಗೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಗಮನಿಸಿ: ದೀಪಕ್,ಯತಿರಾಜ್, ಗುರುಪ್ರಸಾದ್,ಬದ್ರುದ್ದೀನ್ ಗೆ ಎಸ್ಸಿ-ಎಸ್ಟಿ ದತ್ತಿ ಪ್ರಶಸ್ತಿ
ಆರ್.ಆಶೋಕ್‌ನ ಅವರ ಹೇಳಿಕೆಗೆ ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ತಮ್ಮ ‘ಎಕ್ಸ್’ ಖಾತೆಯ ಮೂಲಕ ತಿರುಗೇಟು ನೀಡಿದ್ದು. ಬಿಜೆಪಿ ಹಾಗೂ ಕೆಪಿಎಸ್‌ಸಿ ಹಗರಣದಲ್ಲಿ ಪಾಲುದಾರರ ಬಗ್ಗೆ ಪ್ರಶ್ನೆಯ ಮಳೆ ಸುರಿಗೈದಿದ್ದಾರೆ.

ಅಶೋಕ್ ಅಣ್ಣಾ, ಆರ್‌ಎಸ್‌ಎಸ್ ಕುರಿತು ಮರಿ ಖರ್ಗೆ ಪ್ರಶ್ನೆ ಮಾಡಿದ್ದರ ಬಗ್ಗೆ ನೀವು ತುಂಬಾ ಚಿಂತೆಗೀಡಾಗಿದ್ದೀರಿ..!
ಆದರೆ,
ನೀವು ಉತ್ತರಿಸಬೇಕಾದ ನಿಜವಾದ ಪ್ರಶ್ನೆಗಳಿವೆ,
ಮರಿ ಅಶೋಕ್ ಏಕೆ ‘ಗಣವೇಶ’ ಧರಿಸಿಲ್ಲ?
ಮರಿ ಅಶೋಕ್ ಏಕೆ ಗೋಶಾಲೆಯಲ್ಲಿ ಗೋಮೂತ್ರ ಸೇವಿಸುತ್ತಿಲ್ಲ?
ಮರಿ ಅಶೋಕ್ ಇನ್ನೂ ‘ಧರ್ಮರಕ್ಷಕ’ ನಾಗಿ ಏಕೆ ಆಗಿಲ್ಲ?
ಹಿರಿ ಅಶೋಕ್ ಅವರು ಈ ಪ್ರಶ್ನೆಗಳಿಗೆ ಯಾವಾಗ ಉತ್ತರಿಸುತ್ತಾರೆ?
ಬಹಳ ಮುಖ್ಯವಾಗಿ, ಶಿವಶಂಕರಪ್ಪ ಸಾಹುಕಾರ್ ಬಗ್ಗೆ ಯಾವಾಗ ಮಾತನಾಡುತ್ತೀರಿ?
ಬಸವರಾಜ ಕನ್ನಾಳೆ ಬಗ್ಗೆ ಯಾವಾಗ ಮಾತನಾಡುತ್ತೀರಿ?
ಕೆಪಿಎಸ್‌ಸಿ ಸದಸ್ಯರು ಮತ್ತು ಅಧ್ಯಕ್ಷರನ್ನು ನೇಮಿಸಲು ಬಿಜೆಪಿ ನಾಯಕರಿಗೆ ಎಷ್ಟು ಹಣ ಸಂದಾಯವಾಗಿದೆ ಎಂಬುದರ ಬಗ್ಗೆ ಯಾವಾಗ ಮಾತನಾಡುತ್ತೀರಿ?
ನಿಮ್ಮ ಪಕ್ಷಕ್ಕೆ ಸೇರಿದವರ ಚಿತ್ರಗಳ ಬಗ್ಗೆ ನೀವು ಯಾವಾಗ ಮಾತನಾಡುತ್ತೀರಿ?
