ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.3
ಜೆಪಿ ನಡ್ಡಾ ಅವರಿಗೆ ಪತ್ರವನ್ನು ಬರೆಯುವ ಮೂಲಕ ಹಲ್ದ್ವಾನಿಯಲ್ಲಿ ನಡೆದ ‘ಶುದ್ದೀಕರಣ’ ಘಟನೆಯು ನನ್ನ ವೈಯಕ್ತಿಕ ವಿಚಾರ ಅಥವಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ಹುದ್ದೆಯನ್ನು ಮೀರಿದಂತದ್ದು ಎಂದು ರಾಜ್ಯ ಸಭಾ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಉತ್ತರಾಖಂಡದ ಹಲ್ದ್ವಾನಿಯ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ ನಂತರ ಅವರ ಸ್ಥಳವನ್ನು ಶುದ್ದೀಕರಣ ಮಾಡಿದ್ದರು. ಈ ಘಟನೆಯೂ ದೇಶದೆಲ್ಲೆಡೆ ಆಕ್ರೋಶಕ್ಕೂ ಕಾರಣವಾಗಿತ್ತು. ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರೇ ಪಕ್ಷದವರ ಈ ಘಟನೆಯ ಪರವಾಗಿ ನಿಂತಿಲ್ಲ ಎಂದು ಭಾವನ್ಮಾಕ ಹೇಳಿಕೆಯನ್ನು ಸಹ ನೀಡಿದ್ದರು.
ಗಮನಿಸಿ: ಕಸ್ತೂರಿ ರಂಗನ್ ಹೋರಾಟ-ಬಿಜೆಪಿ ಜೊತೆ ಕೈ ಜೋಡಿಸಲ್ಲ
ಈ ಘಟನೆಯ ಸಂಬಂಧಿಸಿದಂತೆ ರಾಜ್ಯಸಭಾದಲ್ಲಿ ಖರ್ಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯಸಭೆಯ ಸದನ ನಾಯಕ ಈ ಘಟನೆ ಕುರಿತು ತನಿಖೆ ಹಾಗೂ ಎಫ್ಐಆರ್ ದಾಖಲಿಸುವುದಾಗಿ ಭರಸವೆ ನೀಡಿದ್ದರು. ಇದಕ್ಕೆ ಸಂಬಂಧಪಟ್ಟಂತೆ ಗುರುವಾರ ಉತ್ತರ ಪಡೆಯಲು ಜೆಪಿ ನಡ್ಡಾ ಅವರಿಗೆ ಪತ್ರ ಬರೆದ್ದಿದ್ದು, ಅದನ್ನು ತಮ್ಮ ‘ಎಕ್ಸ್’ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಎಫ್ಐಆರ್ ಖಚಿತ ಪಡಿಸುವಂತೆ ಒತ್ತಾಯಿಸಿದ್ದಾರೆ.
“ಹಲ್ದ್ವಾನಿಯಲ್ಲಿ ನಡೆದ ನನ್ನ ಸಾರ್ವಜನಿಕ ಸಭೆಯ ನಂತರ ರಾಮ್ಲೀಲಾ ಮೈದಾನದಲ್ಲಿ ನಡೆಸಲಾದ ‘ಶುದ್ಧೀಕರಣ’ದ ಗಂಭೀರ ಘಟನೆಯ ಕುರಿತು ಸದನದಲ್ಲಿ ನೀಡಿದ್ದ ಭರವಸೆಯನ್ನು ನೆನಪಿಸುತ್ತಾ, ನಾನು ರಾಜ್ಯಸಭೆಯ ಸದನ ನಾಯಕರಾದ ಜೆಪಿ ನಡ್ಡಾ ಅವರಿಗೆ ಪತ್ರ ಬರೆದಿದ್ದೇನೆ ಮತ್ತು ಈ ವಿಷಯದಲ್ಲಿ ತಕ್ಷಣದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇನೆ.

24 ದಿನಗಳು ಕಳೆದರೂ, ಈ ಹೀನಾಯ ಘಟನೆಗೆ ಕಾರಣರಾದ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕನಿಷ್ಠ ಎಫ್ಐಆರ್ ಕೂಡ ದಾಖಲಾಗಿಲ್ಲ.
ಆ ಪತ್ರದಲ್ಲಿ ನಾನು ಸ್ಪಷ್ಟವಾಗಿ ಹೀಗೆ ಹೇಳಿದ್ದೇನೆ:
“ಈ ವಿಷಯವು ನನ್ನ ವೈಯಕ್ತಿಕ ವಿಚಾರವನ್ನಾಗಲಿ ಅಥವಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರ ಹುದ್ದೆಯನ್ನಾಗಲಿ ಮೀರಿದಂತದ್ದು; ಇದು ಪ್ರತಿದಿನವೂ ಕಠಿಣ ವಾಸ್ತವವನ್ನು ಎದುರಿಸುವ ಲಕ್ಷಾಂತರ ಜನರ ಭಾವನೆಗಳೊಂದಿಗೆ ಆಳವಾಗಿ ಬೆಸೆದುಕೊಂಡಿದೆ. ಇಂತಹ ತಪ್ಪು ಮಾಡುವವರಿಗೆ ಪಾಠ ಕಲಿಸುವುದು ಅತ್ಯಗತ್ಯ.”

ನನ್ನ ಬೇಡಿಕೆ ಸ್ಪಷ್ಟವಾಗಿದೆ:
“ಈ ಸಂಗತಿಗಳು ಮತ್ತು ರಾಜ್ಯಸಭೆಯಲ್ಲಿ ನೀಡಲಾದ ಭರವಸೆಯ ಹಿನ್ನೆಲೆಯಲ್ಲಿ, ಹಲ್ದ್ವಾನಿಯಲ್ಲಿ ನಡೆದ ನನ್ನ ಸಾರ್ವಜನಿಕ ಸಭೆಯ ನಂತರ ರಾಮ್ಲೀಲಾ ಮೈದಾನದಲ್ಲಿ ‘ಶುದ್ಧೀಕರಣ’ ವಿಧಿ ವಿಧಾನವನ್ನು ನಡೆಸಿದ ಘಟನೆಯಲ್ಲಿ ಭಾಗಿಯಾದ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು ಎಫ್ಐಆರ್ ದಾಖಲಿಸುವುದನ್ನು ಖಚಿತಪಡಿಸುವಂತೆ ದಯವಿಟ್ಟು ಉತ್ತರಾಖಂಡದ ಮುಖ್ಯಮಂತ್ರಿಗೆ ನಿರ್ದೇಶನ ನೀಡಿ” ಎಂದು ಜೆಪಿ ನಡ್ಡಾ ಅವರಿಗೆ ಬರೆದ ಪತ್ರವನ್ನು ಹಂಚಿಕೊಂಡಿದ್ದಾರೆ.
