Homeದೇಶದೇಶಭಕ್ತಿಯ ಗುತ್ತಿಗೆ ಪಡೆದವರೇ, ನಿಮ್ಮ ವರಸೆ ಬದಲಾಗಿದೆಯೇ?

ದೇಶಭಕ್ತಿಯ ಗುತ್ತಿಗೆ ಪಡೆದವರೇ, ನಿಮ್ಮ ವರಸೆ ಬದಲಾಗಿದೆಯೇ?

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.10

ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ‘ಪಾಕಿಸ್ತಾನಿಯರು ಭಾತರದ ಶತೃಗಳಲ್ಲ’ ಎಂಬ ಹೇಳಿಕೆ ದೇಶದೆಲ್ಲೆಡೆ ವ್ಯಾಪಾಕ ಟೀಕೆಗೆ ಗುರಿಯಾಗುತ್ತಿದೆ. ಆರ್‌ಎಸ್‌ಎಸ್ ಶಿಶುಗಳಾದ ಬಿಜೆಪಿ, ಎಬಿವಿಪಿ, ವಿಶ್ವ ಹಿಂದೂ ಪರಿಷತ್ ಸಂಘಟನೆ ಇದರ ವಿರುದ್ದ ತುಟಿ ಬಿಚ್ಚದೆ ಮೋಹನ್ ಭಾಗವತ್ ಹೇಳಿಕೆಯನ್ನು ಮೌನದಿಂದಲೆ ಸಮ್ಮತಿಸಿದ್ದಾರೆ.

ಮೋಹನ್ ಭಾಗವತ್ ಹೇಳಿಕೆ ಬಿಜೆಪಿ ನಾಯಕರಿಗೆ ಬಿಸಿ ತುಪ್ಪವಾಗಿದೆ. ವಿರೋಧ ಪಕ್ಷಗಳು ಇಡೀ ಬಿಜೆಪಿ ಪಕ್ಷವನ್ನು ಪ್ರಶ್ನಿಸುತ್ತಿದ್ದಾರೆ. ಅದರಂತೆ ಸೋಮವಾರ ಕೆಪಿಸಿಸಿ ರಾಜ್ಯಾಧ್ಯಕ್ಷ ಬಿ.ಕೆ.ಹರಿಪ್ರಸಾದ್ ಆರ್‌ಎಸ್‌ಎಸ್ ಮತ್ತು ಬಿಜೆಪಿಯನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪ್ರಶ್ನಿಸುವ ಮೂಲಕ ಪಕ್ಷ ಮತ್ತು ಸಂಘಟನೆಯ ಮೇಲೆ ಮುಗಿಬಿದ್ದಿದ್ದಾರೆ.

“ಪುಲ್ವಾಮ ದಾಳಿಯ ತನಿಖೆಯ ಬಗ್ಗೆ ಪ್ರಧಾನಿ Narendra Modi ನೇತೃತ್ವದ ಬಿಜೆಪಿ ಸರ್ಕಾರವು ಇನ್ನೂ ತುಟಿ ಬಿಚ್ಚದಿರಲು ಕಾರಣ ಆರ್‌ಎಸ್‌ಎಸ್ ಎಂಬುದು ಈಗ ಬಟಾಬಯಲಾಗಿದೆ. ಮೋಹನ್ ಭಾಗವತ್ ಎರಡನೇ ಬಾರಿ ಪಾಕಿಸ್ತಾನದ ಪರ ಮಾತನಾಡಿದ್ದಾರೆ. “ಪಾಕಿಸ್ತಾನಿಯರೆಲ್ಲರೂ ಶತ್ರುಗಳಲ್ಲ” ಎಂದು Rashtriya Swayamsevak Sangh (RSS) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದು, ಆರ್‌ಎಸ್‌ಎಸ್ ಗೂ ಪಾಕಿಸ್ತಾನಕ್ಕೂ ಇರುವ ಲಿಂಕ್ ಬಗ್ಗೆ ತನಿಖೆಯಾಗಬೇಕಿದೆ.

ಈ ಹಿಂದೆ ಪಾಕಿಸ್ತಾನದ ಐಎಸ್‌ಐ ಉಗ್ರಗಾಮಿ ಸಂಘಟನೆಗಳೊಂದಿಗೆ ಆರ್ ಎಸ್ ಎಸ್ ಪ್ರಮುಖರು ರಹಸ್ಯ ಸಭೆಗಳನ್ನು ನಡೆಸಿದ್ದರು. ಈಗ ಮೋಹನ್ ಭಾಗವತ್ “ಪಾಕಿಸ್ತಾನಿಯರೆಲ್ಲರೂ ನಮ್ಮ ಶತ್ರುಗಳಲ್ಲ” ಎಂದು ಹೇಳುವ ಮೂಲಕ ಎಲ್ಲವೂ ಪೂರ್ವನಿಯೋಜಿತ ಎಂಬುದನ್ನು ಬಯಲು ಮಾಡಿದೆ.

ಗಮನಿಸಿ: ಮೋದಿ ಪ್ರಚಾರಕ್ಕೆ ಪ್ರಿಯಾಂಕ್ ಖರ್ಗೆ ಕಿಡಿ- ‘ಎಕ್ಸ್’ ನಲ್ಲಿ ಪೋಸ್ಟ್!?

2026ರ ಫೆಬ್ರವರಿ 6 ರಂದು ಮೋದಿ ಸರ್ಕಾರದ ವಿದೇಶಾಂಗ ಸಚಿವಾಲಯವೇ ಸಂಸತ್ತಿಗೆ ನೀಡಿದ ಅಧಿಕೃತ ಉತ್ತರದಲ್ಲಿ ಪಾಕಿಸ್ತಾನವನ್ನು ಭಾರತದ “neighbouring countries”  ಪಟ್ಟಿಯಲ್ಲಿ ಸೇರಿಸಿದೆ. ಹಾಗಿದ್ದರೆ, ವಿಧಾನ ಪರಿಷತ್ತಿನಲ್ಲಿ ನಾನು ಹೇಳಿದ “ಪಾಕಿಸ್ತಾನ ನಮ್ಮ ನೆರೆಯ ರಾಷ್ಟ್ರ ” ಎಂಬ ಮಾತಿಗೆ ಗಟಾರದಲ್ಲಿ ಬಿದ್ದು ಹೊರಳಾಡಿದಂತೆ ನಟಿಸಿದ್ದ ನಕಲಿ ದೇಶಪ್ರೇಮಿಗಳು ಈಗ ಎಲ್ಲಿದ್ದಾರೆ? ಆಗ ನನ್ನ ಮೇಲೆ ಹರಿಹಾಯ್ದಿದ್ದ ಬಾಡಿಗೆ ದೇಶಭಕ್ತರ ನಾಲಿಗೆಗೆ ಈಗ ನಾಗಪುರದಿಂದ ಬೀಗ ಬಿದ್ದಿದೆಯೇ ?

ಚುನಾವಣೆಯ ಸಂದರ್ಭದಲ್ಲಿ ಪಾಕಿಸ್ತಾನದ ವಿರುದ್ಧ ಉಗ್ರ ಭಾಷಣಗಳನ್ನು ಮಾಡುವ Bharatiya Janata Party (BJP) ಹಾಗೂ ಸಂಘಪರಿವಾರದ ನಾಯಕರ ಪಾಕಿಸ್ತಾನದ ಕುರಿತ ವರಸೆ ಈಗ ಬದಲಾಗಿದೆಯೇ? ಅಥವಾ ತಮ್ಮ ಪೂರ್ವಜರ ‘ಪಾಕ್’ ಪ್ರೇಮದ ಪರಂಪರೆಯನ್ನೇ ಮುಂದುವರಿಸುತ್ತಿದ್ದಾರೆಯೇ?

ಭಾರತವನ್ನು ವಿಭಜಿಸಿದ ಮಹಮ್ಮದ್ ಅಲಿ ಜಿನ್ನಾ ಅವರೊಂದಿಗೆ ಸೇರಿ ಬಂಗಾಳದಲ್ಲಿ ಮುಸ್ಲಿಂ ಲೀಗ್‌ನೊಂದಿಗೆ ಸರ್ಕಾರ ನಡೆಸಿದ ಜನಸಂಘದ ಶ್ಯಾಮಪ್ರಸಾದ್ ಮುಖರ್ಜಿಯಿಂದ ಹಿಡಿದು, ಜಿನ್ನಾ ಅವರ ಸಮಾಧಿಗೆ ಭೇಟಿ ನೀಡಿ ಅವರನ್ನು “ಜಾತ್ಯತೀತ ನಾಯಕ” ಎಂದು ಹೊಗಳಿದ ಅಡ್ವಾಣಿಯವರೆಗೆ, ಪಾಕಿಸ್ತಾನದ ಪ್ರಧಾನಿಯ ಮನೆಗೆ ಆಹ್ವಾನವಿಲ್ಲದಿದ್ದರೂ ಅಚ್ಚರಿಯ ರೀತಿಯಲ್ಲಿ ಬಿರಿಯಾನಿ ಸವಿದ ನರೇಂದ್ರ ಮೋದಿಯವರೆಗೆ ಬಿಜೆಪಿ ಹಾಗೂ ಅದರ ಪೂರ್ವಜರ ‘ಪಾಕ್’ ಪ್ರೇಮದ ಪರಂಪರೆ ಮುಂದುವರಿಯುತ್ತಲೇ ಇದೆ ಎಂಬ ಆರೋಪಗಳಿಗೆ ಈ ಬೆಳವಣಿಗೆಗಳು ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿವೆ.

ಒಂದು ಕಡೆ ಚುನಾವಣಾ ರಾಜಕಾರಣಕ್ಕಾಗಿ ಪಾಕಿಸ್ತಾನವನ್ನು ಶತ್ರು ರಾಷ್ಟ್ರವೆಂದು ಬಿಂಬಿಸುವುದು. ಮತ್ತೊಂದು ಕಡೆ ಅಧಿಕಾರದಲ್ಲಿರುವಾಗ ಪಾಕಿಸ್ತಾನದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಮುಂದುವರಿಸುವುದು ಇದು ಬಿಜೆಪಿ/ಆರ್ ಎಸ್‌ಎಸ್ ಯ ದ್ವಂದ್ವ ನೀತಿಯಲ್ಲವೇ?

ಗಡಿಯಲ್ಲಿ ನಮ್ಮ ವೀರ ಯೋಧರು ಪ್ರಾಣ ಕಳೆದುಕೊಳ್ಳುತ್ತಿರುವಾಗ, ಪುಲ್ವಾಮಾ ಮತ್ತು ಪಹಲ್ಗಾಮ್‌ನಂತಹ ಭೀಕರ ದಾಳಿಗಳಲ್ಲಿ ಅಮಾಯಕ ನಾಗರಿಕರು ಹಾಗೂ ಭದ್ರತಾ ಸಿಬ್ಬಂದಿ ಬಲಿಯಾಗುತ್ತಿರುವಾಗ, “ಪಾಕಿಸ್ತಾನಿಯರೆಲ್ಲರೂ ನಮ್ಮ ಶತ್ರುಗಳಲ್ಲ” ಎಂದು ಹೇಳುವ ಮೋಹನ್ ಭಾಗವತ್ ಅವರ ಮಾತಿನ ಅರ್ಥವೇನು?

ಪಾಕಿಸ್ತಾನದ ಭಯವನ್ನು ಚುನಾವಣಾ ಭಾಷಣಗಳಲ್ಲಿ ರಾಜಕೀಯ ಅಸ್ತ್ರವನ್ನಾಗಿ ಬಳಸುವ ಬಿಜೆಪಿ ನಾಯಕರು, ಈಗ ತಮ್ಮದೇ ಸರಸಂಘಚಾಲಕರ ಹೇಳಿಕೆಯ ಬಗ್ಗೆ ಮೌನವಾಗಿರುವುದೇಕೆ?

ದೇಶಭಕ್ತಿಯ ಗುತ್ತಿಗೆ ಪಡೆದವರೇ, ನಿಮ್ಮ ವರಸೆ ಬದಲಾಗಿದೆಯೇ? ಅಥವಾ ನಾಗಪುರದಿಂದ ಬಂದ ಹೊಸ ನಿರ್ದೇಶನದ ನಿರೀಕ್ಷೆಯಲ್ಲಿದ್ದೀರಾ?  ಎಂದು ‘ಎಕ್ಸ್’ ಮೂಲಕ ಪ್ರಶ್ನಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments