Homeಜಿಲ್ಲೆಮಲೆನಾಡ ಸಮಸ್ಯೆ ಬಗೆಹರಿಸಲು ಬಂಗಾರಪ್ಪನವರ ಶಿಷ್ಯ ಬಂದಿದ್ದಾರೆ

ಮಲೆನಾಡ ಸಮಸ್ಯೆ ಬಗೆಹರಿಸಲು ಬಂಗಾರಪ್ಪನವರ ಶಿಷ್ಯ ಬಂದಿದ್ದಾರೆ

Spread the love

ಶಿವಮೊಗ್ಗ ಟೆಲೆಕ್ಸ್ , ಸುದ್ದಿ, ಸೆ.19

ಕಸ್ತೂರಿ ರಂಗನ್ ವರದಿಯನ್ನು ನಾವು ಯಾವಾಗಲು ಒಪ್ಪಲ್ಲ. ಈ ಸಮಸ್ಯೆ ಬಗೆ ಹರಿಸಲು ಬಂಗಾರಪ್ಪನವರ ಶಿಷ್ಯ ಬಂದಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಅವರು ಶನಿವಾರ ತೀರ್ಥಹಳ್ಳಿಯಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ಮುಖ್ಯಮಂತ್ರಿಯೊಂದಿಗೆ ಆಯೋಜಿಸಿದ್ದ ಸಾರ್ವಜನಿಕರೊಂದಿಗಿನ ನೇರ ಸಂವಾದ ಸಭೆಯಲ್ಲಿ ಮಾತನಾಡಿದರು.

ಗಮನಿಸಿ: ವಂದೇ ಮಾತರಂ ಆಕ್ಷೇಪಣೆ, ಚನ್ನಬಸಪ್ಪರ ಮೇಲೆ ಕಾಂಗ್ರೆಸ್ ಮುಖಂಡರು ಮುತ್ತಿಗೆ

1990 ರಲ್ಲಿ ಸಿಎಂ ಆಗಿದ್ದ ಬಂಗಾರಪ್ಪನವರು ಕಾವೇರಿ ನೀರು ಬಿಡಲ್ಲ ಅಂತ ಆಧಿವೇಶನ ಕರೆದು ಚರ್ಚಿಸಿ ತಮಿಳುನಾಡಿಗೆ ನೀರು ಬಿಡಲಿಲ್ಲ. ಇವತ್ತು ಮಲೆನಾಡ ಜನರಿಗೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿ ಸಮಸ್ಯೆ ಬಗೆಹರಿಸಲು ಹಾಗೂ ಅದನ್ನು ತಿರಸ್ಕರಿಸಲು ಅವರ ಶಿಷ್ಯ ಬಂದಿದ್ದಾರೆ ಎಂದರು.

ಜಿಲ್ಲೆಯ ಶಾಸಕರು ಸಿಎಂ ಭೇಟಿ ಮಾಡಲು ಹೋಗಿದ್ದೇವು. ಈ ವರದಿ ಕುರಿತು ಮಾತನಾಡುವ ಮುಂಚೆಯೇ ಅವರೇ ಈ ವರದಿಯ ಬಗ್ಗೆ ವಿಧಾನ ಸೌಧದಲ್ಲಿ ಚರ್ಚೆಯಾಗಬೇಕು. ಅದಕ್ಕೂ ಮುಂಚೆ ರೈತರ ಮನೆ ಬಾಗಿಲಿಗೆ ಹೋಗಿ ಅವರ ಸಮಸ್ಯೆ ಕೇಳಬೇಕು. ಅವರು ಮಾತಿನಂತೆಯೇ ಇವತ್ತು ನಿಮ್ಮ ಸಮಸ್ಯೆ ಆಲಿಸಲು ಬಂದಿದ್ದಾರೆ ಎಂದರು.

ಇವತ್ತು ಮಲೆನಾಡು ಜನರು ಈ ಪರಿಸ್ಥಿತಿಗೆ ಬರಲು ಕೇಂದ್ರ ಸರ್ಕಾರವೇ ಕಾರಣ. ಅದನ್ನೇ ನಾವೆಲ್ಲ ನೂರಕ್ಕೂ ನೂರು ಧಿಕ್ಕರಿಸಬೇಕು. ಇವತ್ತು ಅಡಿಕೆಗೆ ಸಮಸ್ಯೆಯಾಗುತ್ತಿರುವುದು ಗುಟ್ಕಾದಿಂದ ಅಲ್ಲ. ಕೇಂದ್ರ ಸರ್ಕಾರದ ಸೆಲ್ಸ್ ಟ್ಯಾಕ್ಸ್ ನಿಂದ ಹಾಗಾಗಿ ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಇವುಗಳನ್ನು ಪರಿಹರಿಸಬೇಕು.  ಭಾಗದಲ್ಲಿ ಕಾಡು, ಪರಿಸರ  ಉಳಿದಿದೆ ಎಂದರೆ ಅದಕ್ಕೆ ಮಲೆನಾಡಿನ  ರೈತರೇ ಕಾರಣ ಎಂದು ಸಿಎಂಗೆ ಮನವಿ ಮಾಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments