Homeಜಿಲ್ಲೆಕಾಂಗ್ರೆಸ್ ಶುದ್ದೀಕರಣವಾಗಬೇಕು: ಹೆಚ್.ಎಸ್.ಸುಂದರೇಶ್

ಕಾಂಗ್ರೆಸ್ ಶುದ್ದೀಕರಣವಾಗಬೇಕು: ಹೆಚ್.ಎಸ್.ಸುಂದರೇಶ್

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.23

ಕಾಂಗ್ರೆಸ್ ಪಕ್ಷದಲ್ಲಿ ಶುದ್ದೀಕರಣವಾಗಬೇಕಾಗಿದೆ ಎಂದು ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಅಭಿಪ್ರಾಯಪಟ್ಟಿದ್ದಾರೆ.

ಖಾಸಗಿ ಹೋಟೆಲ್‌ವೊಂದರಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಇಳಿಮುಖವಾಗುತ್ತಿದೆ. ನಿಜವಾದ ಕಾಂಗ್ರೆಸಿಗರಿಗೆ ಬೆಲೆಯೇ ಇಲ್ಲವಾಗಿದೆ. ಯ್ಯರ‍್ಯಾರಿಗೋ ನಿಗಮ ಮಂಡಳಿಯಂತಹ ಹುದ್ದೆಗಳನ್ನ ನೀಡುತ್ತಿದ್ದಾರೆ. ಸಚಿವರು ಕೂಡ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಅವರ ಪರವಾಗಿ ಇರುವ ಕೆಲವರು ಹಣ ಬೇಡಿಕೆಗಳನ್ನು ಇಡುತ್ತಿದ್ದಾರೆ ಎಂದು ಆರೋಪಿಸಿದರು.

ಗಮನಿಸಿ: ಎನ್.ಹೇಮಂತ್ ವರ್ಗಾವಣೆ: ಶಿವಮೊಗ್ಗಕ್ಕೆ ನೂತನ ಸಿಇಓ!

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ನೇಮಕವು ಕೂಡ ಸರಿಯಾದ ರೀತಿಯಲ್ಲಿ ನಡೆದಿಲ್ಲ. ಪಕ್ಷದ ಕಾರ್ಯಕರ್ತರ ಅಭಿಪ್ರಾಯದಲ್ಲಿ ನನ್ನ ಬಗ್ಗೆಯೆ ಹೆಚ್ಚು ಒಲವಿತ್ತು. ಆದರೆ ಅದನ್ನು ಬಿಟ್ಟು ಬೇರೆಯವರಿಗೆ ನೀಡಲಾಗಿದೆ. ಪಕ್ಷಕ್ಕಾಗಿ ದುಡಿದವರಿಗೆ ಇಲ್ಲಿ ಅವಕಾಶವೇ ಇಲ್ಲದಂತಾಗಿದೆ. ನಾನು 40 ವರ್ಷಗಳಿಂದ ಪಕ್ಷಕ್ಕಾಗಿ ದುಡಿದ್ದೇನೆ. ಆದರೂ ಕೂಡ ಈಗ ನಮ್ಮನ್ನೇ ಕಡೆಗಣಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಾಯಕರ ಹಲವು ಹೆಸರುಗಳನ್ನು ಪ್ರಸ್ತಾಪಿಸಿ ಟೀಕೆ ಮಾಡಿದ ಸುಂದರೇಶ್, ಗೋಪಾಲಕೃಷ್ಣ ಬೇಳೂರು ಮತ್ತು ದಿನೇಶ್ ಗುಂಡೂರಾವ್ ಅವರಿಗೆ ಸಚಿವ ಸ್ಥಾನ ನೀಡಬೇಕು. ಸಚಿವ ಸಂಪುಟವು ಕೂಡ ಮತ್ತೊಮ್ಮೆ ಬದಲಾವಣೆಯಾಗಬೇಕು ಎಂದರು.

ಸೂಡಾದಿಂದ ಹಲವು ಅಭಿವೃದ್ದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸುಮಾರು 500 ಕೋಟಿ ರೂ ವೆಚ್ಚದಲ್ಲಿ ಅರ್ಪಾಮೆಂಟ್ ನಿರ್ಮಸಲಾಗುವುದು, ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಶಾಶ್ವತವಾಗಿ ಆದಾಯ ಬರುವಂತೆ ಮಾಡಲಾಗುವುದು. ಸುಮಾರು 1,500 ಅರ್ಪಾಮೆಂಟ್‌ಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. ಎರಡು ಮಾಲ್‌ಗಳನ್ನು ಕೂಡ ನಿರ್ಮಿಸಲಾಗುವುದು, ಕೆರೆಗಳ ನಿರ್ಮಾಣಕ್ಕೆ ಅದ್ಯತೆ ನೀಡಲಾಗುವುದು, ಹಸಿರಿಗೆ ಆದ್ಯತೆ ನೀಡಿ ಉದ್ಯಾನವನಗಳನ್ನು ನಿರ್ಮಾಣ ಮಾಡಲಾಗುವುದು. ಭದ್ರಾವತಿಯಲ್ಲೂ ಕೂಡ ಕೂಡಲಸಂಗಮದ ಮಾದರಿಯಲ್ಲಿ ಅನುಭವ ಮಂಟಪದ ನಿರ್ಮಿಸಲಾಗುವುದು. ಎಲ್ಲಾ ವರ್ಗದವರಿಗೆ ನಿವೇಶನ ಹಂಚಿಕೆ ಮಾಡಲಾಗುವುದು ಎಂದರು.

ಜಿಲ್ಲೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭೇಟಿ ಕೊಟ್ಟಿದ್ದು, ಸ್ವಾಗತದ ವಿಷಯವಾಗಿದೆ. ಮಂಗಳೂರು, ಶಿವಮೊಗ್ಗ, ಚಿಕ್ಕಮಗಳೂರಿಗೆ ಭೇಟಿ ಕೊಟ್ಟು ಅಲ್ಲಿ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದಾರೆ. ತುಳು ಭಾಷೆಗೆ ಆದ್ಯತೆ ನೀಡಿದ್ದಾರೆ. ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಚರ್ಚೆಯಲ್ಲದೆ ಅಧಿವೇಶವನ್ನು ಕರೆದು ಉತ್ತಮ ತಿರ್ಮಾನ ಕೈಗೊಳ್ಳುತ್ತಿದ್ದಾರೆ. ಇದು ಅತ್ಯಂತ ಹೆಮ್ಮೆಯ ವಿಷಯವಾಗಿದೆ ಎಂದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ಹಲವು ಮುಖಂಡರ ಅವಾಂತರಗಳನ್ನು, ಅವರ ತಪ್ಪುಗಳನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹತ್ತಿರವೇ ನೇರವಾಗಿ ಹೇಳುತ್ತೇನೆ. ಕಾಂಗ್ರೆಸ್ ಪಕ್ಷದ ಶುದ್ದೀಕರಣಕ್ಕಾಗಿ ಒತ್ತಾಯಿಸುತ್ತೇನೆ. ಇನ್ನೆರಡು ದಿನಗಳಲ್ಲಿ ಅವರನ್ನು ಭೇಟಿ ಮಾಡುತ್ತೇನೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments