Homeರಾಜಕೀಯಮಧು ಬಂಗಾರಪ್ಪ ಬೆಂಬಲಿಗರಿಂದ ಹಣ ವಸೂಲಿ! ಸ್ವಪಕ್ಷೀಯ ನಾಯಕರ ವಿರುದ್ದವೇ ಸುಂದರೇಶ್ ವಾಗ್ದಾಳಿ

ಮಧು ಬಂಗಾರಪ್ಪ ಬೆಂಬಲಿಗರಿಂದ ಹಣ ವಸೂಲಿ! ಸ್ವಪಕ್ಷೀಯ ನಾಯಕರ ವಿರುದ್ದವೇ ಸುಂದರೇಶ್ ವಾಗ್ದಾಳಿ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.23

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬೆಂಬಲಿಗರಾದ ಜಿ.ಡಿ ಮಂಜುನಾಥ್ ಮತ್ತು ಕಲಕೋಡು ರತ್ನಾಕರ್ ಅವರಗಳು ಸರ್ಕಾರಿ ಅಧಿಕಾರಿಗಳಿಂದ ಲಕ್ಷಾಂತರ ರೂ ಹಣ ವಸೂಲಿ ಮಾಡುತ್ತಿದ್ದಾರೆ. ಪಕ್ಷದ ಹೆಸರು ಕೆಡಿಸುತ್ತಿದ್ದಾರೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಸ್ಫೋಟಕ ಅರೋಪ ಮಾಡಿದ್ದಾರೆ.

ಹೆಚ್.ಎಸ್.ಸುಂದರೇಶ್ ಮಾಡಿರುವ ಗಂಭೀರ ಆರೋಪಗಳು ಜಿಲ್ಲಾ ಕಾಂಗ್ರೆಸ್‌ನಲ್ಲಿ ಸಂಚಲನ ಉಂಟು ಮಾಡಿದೆ.

ಖಾಸಗಿ ಹೊಟೇಲ್‌ನಲ್ಲಿ ಬುಧವಾರ ಸುದ್ದಿಗೋಷ್ಟಿ ನಡೆಸಿದ ಹೆಚ್.ಎಸ್.ಸುಂದರೇಶ್ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ , ವಿಧಾನಪರಿಷತ್ ಸದಸ್ಯರಾದ ಬಲ್ಕೀಶ್ ಬಾನು, ಮಂಜುನಾಥ್ ಭಂಡಾರಿ, ಸೇವಾದಳ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಸೇರಿದಂತೆ ಸ್ವಪಕ್ಷೀಯರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಹೆಚ್ ಸಿ ಯೋಗೀಶ್ ಜಿಲ್ಲಾ ಅಧ್ಯಕ್ಷರಾಗಲು ಅರ್ಹರಲ್ಲ ಎಂದು ದೂರಿದರು.

ಗಮನಿಸಿ: ಕಾಂಗ್ರೆಸ್ ಶುದ್ದೀಕರಣವಾಗಬೇಕು: ಹೆಚ್.ಎಸ್.ಸುಂದರೇಶ್

ಜಿಲ್ಲಾ ಮಂತ್ರಿ ಮಧು ಬಂಗಾರಪ್ಪ ಪಕ್ಷದ ವಿಚಾರದಲ್ಲಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದು, ಅವರಿಗೆ ಕಾಂಗ್ರೆಸ್‌ನ ಗಂಧಗಾಳಿ ಗೊತ್ತಿಲ್ಲ. ಅವರ ಜೊತೆಯಲ್ಲಿರುವ ಎರಡು ಮೂರು ಜನ ಅವರನ್ನು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಪಕ್ಷ ಬಹಳ ಕೆಳಮಟ್ಟಕ್ಕೆ ಹೋಗುತ್ತಿದೆ. ಕಲಗೋಡು ರತ್ನಾಕರ್ ವರ್ಗಾವಣೆ ವಿಷಯಗಳಲ್ಲಿ ಸರ್ಕಾರಿ ಅಧಿಕಾರಿಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಸಚಿವರ ಹಿಂಬಾಲಕ ಜಿ.ಡಿ ಮಂಜುನಾಥ್ ಸೂಡಾ ಕಚೇರಿಗೆ ಬಂದು 25 ಲಕ್ಷ ರೂ. ಕೊಡುವಂತೆ ಆಯುಕ್ತರನ್ನು ಕೇಳಿದ್ದರು ಎಂದು ಗಂಭೀರ ಆರೋಪ ಮಾಡಿದರು.

ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಬಂದು ಸಚಿವರಾಗಿರುವ ಮಧು ಬಂಗಾರಪ್ಪ ನಮ್ಮನ್ನು ಟಾರ್ಗೇಟ್ ಮಾಡಿದರೆ ನಾವ್ಯಾಕೆ ಪಕ್ಷದಲ್ಲಿರಬೇಕು? ಎರಡೂ ಮೂರು ಜನರು ಹೇಳಿದಂತೆ ಮಧು ಬಂಗಾರಪ್ಪ ಕೇಳುತ್ತಿದ್ದಾರೆ. ಇದರಿಂದ ಪಕ್ಷ ಕೆಳಮಟ್ಟಕ್ಕೆ ಹೋಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಸೊರಬ ಕ್ಷೇತ್ರಕ್ಕೂ ಕ್ಯಾಂಡಿಡೇಟ್‌ನ್ನು ರೆಡಿ ಮಾಡಿದ್ದೇವೆ. ಎಂ.ಪಿ ಎಲೆಕ್ಷನ್ ಗೂ ಅಭ್ಯರ್ಥಿ ರೆಡಿ ಆಗಿದ್ದಾರೆ. ಯಾರೂ ಎಂಬುದನ್ನು ಈಗಲೆ ಹೇಳುವುದಿಲ್ಲ. ತೀರ್ಥಹಳ್ಳಿ ಕ್ಷೇತ್ರಕ್ಕೆ ಮಂಜುನಾಥ್ ಗೌಡರಿಗೆ, ಸಾಗರದಲ್ಲಿ ಬೇಳೂರು ಗೋಪಾಲಕೃಷ್ಣ ಅವರಿಗೆ ಮತ್ತು ಶಿವಮೊಗ್ಗದಲ್ಲಿ ತಮಗೆ ಟಿಕೆಟ್ ನೀಡಬೇಕು ಎಂದ ಸುಂದರೇಶ್ ಪಕ್ಷದಲ್ಲಿ ನಾಯಕರಿಗೆ ಕೂಲಿ ಬೇಕು. ಕಾರ್ಯಕರ್ತರಿಗೆ ಕೂಲಿ ಬೇಡ, ಅಧಿಕಾರ ಹಂಚಿಕೆಯಲ್ಲಿ ಕಾರ್ಯಕರ್ತರಿಗೆ ಅನ್ಯಾಯವಾಗಿದೆ. ನನಗೆ 18 ತಿಂಗಳ ಕಾಡಾ ಮತ್ತು ಕಿತ್ತೋದ ಸೂಡಾ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ನಾನು ಪಕ್ಷದ ನಿಷ್ಟಾವಂತ. ಜಿಲ್ಲೆಯ ವಿಚಾರಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವ ಶ್ರೀನಿವಾಸ್ (ಸೇವಾದಳ ರಾಷ್ಟ್ರೀಯ ಅಧ್ಯಕ್ಷ) ಅವರನ್ನು ಜಿಲ್ಲೆಯಿಂದ ಓಡಿಸುತ್ತೇವೆ ಎಂದರು.

ಜಿಲ್ಲೆಯ ಗೋಪಾಲಕೃಷ್ಣ ಮತ್ತು ಭದ್ರಾವತಿಯ ಸಂಗಮೇಶ್ ಅವರನ್ನು ಸಚಿವರನ್ನಾಗಿ ಮಾಡಬೇಕು. ಅದೇ ರೀತಿ ಪಕ್ಷಕ್ಕಾಗಿ ದುಡಿದ ದಿನೇಶ್ ಗುಂಡೂರಾವ್ ಅವರನ್ನು ಸಚಿವರನ್ನಾಗಿ ಮಾಡಬೇಕು. ಇದರಿಂದ ಪಕ್ಷಕ್ಕೆ ಬಲ ಬರುತ್ತದೆ. ಜಿಲ್ಲೆಯಲ್ಲಿ ಪಕ್ಷದ ಬೆಳವಣಿಗೆ ಕುರಿತು ಎಲ್ಲಾ ಕಾರ್ಯಕ್ರಮಗಳನ್ನು ಸಿದ್ದಪಡಿಸಲಾಗುತ್ತಿದೆ. ಜಿಲ್ಲೆಯ ವಿದ್ಯಮಾನಗಳನ್ನು ಮುಖ್ಯಮಂತ್ರಿಗಳಿಗೆ, ರಾಜ್ಯಾಧ್ಯಕ್ಷರ ಗಮನಕ್ಕೆ ತರಲಾಗುವುದು. ರಾಜ್ಯ ನಾಯಕರು ಗಮನ ಹರಿಸದಿದ್ದರೆ. ರಾಹುಲ್ ಗಾಂಧಿ ಅವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಟಿಯುದ್ದಕ್ಕೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಸ್ಥಳಿಯ ಅವರ ಬೆಂಬಲಿಗರ ಮೇಲೆ ವಾಗ್ದಾಳಿ ನಡೆಸಿದ ಸೂಡಾ ಅಧ್ಯಕ್ಷ ಸುಂದರೇಶ್ ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರುಗಳನ್ನು ಬೈದವರಿಗೆಲ್ಲಾ ಅಧಿಕಾರ ಕೊಡುವುದಾದರೆ ನಾವ್ಯಾಕೆ ಪಕ್ಷದಲ್ಲಿರಬೇಕು. ಎಲ್ಲದಕ್ಕೂ ಸಿದ್ದನಿದ್ದೇವೆ. ನನ್ನ ಜೊತೆ ಮಂಜುನಾಥ್ ಗೌಡರು, ಗೋಪಾಲಕೃಷ್ಣ ಬೇಳೂರು. ಬಿ.ಕೆ ಸಂಗಮೇಶ್ ಅವರುಗಳು ಬರಲಿದ್ದಾರೆ ಎಂದು ಘೋಷಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments