Homeಜಿಲ್ಲೆಕಾಂಗ್ರೆಸ್ ಕಟ್ಟಾಳುವಿಗೆ ಸೂಡಾ ಪಟ್ಟ

ಕಾಂಗ್ರೆಸ್ ಕಟ್ಟಾಳುವಿಗೆ ಸೂಡಾ ಪಟ್ಟ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಅ.1

ಶಿವಮೊಗ್ಗ–ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಸಿ.ಜಿ ಮಧುಸೂದನ್ ನೇಮಕ ಮಾಡಿ ನಗರಾಭಿವೃದ್ದಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ವಿದ್ಯಾರ್ಥಿ ದಿಸೆಯಿಂದಲೂ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ದುಡಿಯುತ್ತಾ ಬಂದಿರುವ ಮಧುಸೂದನ್ ಅವರ ಪಕ್ಷ ನಿಷ್ಠೆಗೆ ಹಾಗೂ ಹೋರಾಟಕ್ಕೆ  ಸಿಕ್ಕ ಪ್ರತಿಫಲ ಇದಾಗಿದೆ.

ಹಿಂದುಳಿದ ಸಮುದಾಯದ ಮಧುಸೂದನ್ ಅವರನ್ನು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸುವ ಮೂಲಕ ಕಾಂಗ್ರೆಸ್ ಸಾಮಾಜಿಕ ನ್ಯಾಯದ ಬದ್ಧತೆಯನ್ನು ತೋರಿದೆ.

ಪ್ರಾಧಿಕಾರದ ಅಧ್ಯಕ್ಷರಾದವರಲ್ಲಿ ಅತ್ಯಂತ ಕಿರಿಯ ಅಧ್ಯಕ್ಷ ಎನ್ನುವ ಹೆಗ್ಗಳಿಕೆ ಮಧುಸೂದನ್ ಅವರದ್ದಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments