Homeಕ್ರೀಡೆನಮ್ಮ ಶಿವಮೊಗ್ಗ ಸ್ಕೇಟಿಂಗ್ ಸಂಸ್ಥೆಯ ಇಬ್ಬರು ಮಕ್ಕಳು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

ನಮ್ಮ ಶಿವಮೊಗ್ಗ ಸ್ಕೇಟಿಂಗ್ ಸಂಸ್ಥೆಯ ಇಬ್ಬರು ಮಕ್ಕಳು ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ

Spread the love

ಶಿವಮೊಗ್ಗ,ಅ.31: ರಾಜ್ಯಮಟ್ಟದ ಸ್ಕೇಟಿಂಗ್ ಕ್ರೀಡಾಕೂಟದಲ್ಲಿ ನಮ್ಮ ಶಿವಮೊಗ್ಗ ಸ್ಕೇಟಿಂಗ್ ತಂಡದ ಹಾಗೂ ಕೋಟೆಗಂಗೂರಿನ ಲಕ್ಷ್ಯ ಸ್ಕೂಲ್ ನ ವಿದ್ಯಾರ್ಥಿ  ಸೈಯದ್ ಪೈಜಲ್ ಹಾಗೂ ವಿಕಾಸ ಶಾಲೆಯ ನಿಖಿತಾ ಎನ್. ಉಪಾಧ್ಯ ಆಯ್ಕೆಯಾಗಿದ್ದಾರೆ.

ಬೆಳಗಾವಿಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಉಪ ನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆಸಿದ ಈ ಪಂದ್ಯದಲ್ಲಿ 14 ರಿಂದ 17 ವರ್ಷ ವಯೋಮಿತಿ ವಿಭಾಗದಲ್ಲಿ ಸೈಯದ್ಪೈಜಲ್ ಎರಡು  ಚಿನ್ನ ಹಾಗೂ ಒಂದು ಬೆಳ್ಳಿ ಪದಕವನ್ನು ಗೆಲ್ಲುವ ಮೂಲಕ ರೋಡ್ ಮತ್ತು ರಿಂಕ್ ರೇಸ್ನಲ್ಲಿ ರಾಷ್ಟ್ರಮಟ್ಟದ ಪ್ರಥಮ ಕ್ರೀಡಾಪಟುವಾಗಿ ಆಯ್ಕೆಯಾಗಿದ್ದಾನೆ.

ಇನ್ನೂ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ವಿಕಾಸ ಶಾಲೆಯ ವಿದ್ಯಾರ್ಥಿನಿ ನಿಖಿತಾ ಎನ್. ಉಪಾಧ್ಯ ಬೆಳ್ಳಿಪದಕವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದು, ಈ ಇಬ್ಬರು ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಸ್ಕೆಟಿಂಗ್ ತರಬೇತಿ ಪಡೆಯುತ್ತಿದ್ದಾರೆ.

ವಿಜಯಶಾಲಿ ಕ್ರೀಡಾಪಟುಗಳಿಗೆ ಶಿವಮೊಗ್ಗ ಗೋಪಾಳದ ಕ್ರೀಡಾಸಂಕೀರ್ಣದಲ್ಲಿ ಸಂಸ್ಥೆಯ ತರಬೇತುದಾರರಾದ ವಿಶ್ವಾಸ್ ಹಾಗೂ ಅತಿಶ್ ಅವರು ತರಬೇತಿ ನೀಡಿದ್ದಾರೆ.

ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಹಾಗೂ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಶಿವಮೊಗ್ಗದ ಕೀರ್ತಿಪತಾಕೆಯನ್ನು ಹಾರಿಸಿದ ನಮ್ಮ ಶಿವಮೊಗ್ಗ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ಕ್ರೀಡಾಪಟುಗಳಿಗೆ ಸ್ಕೇಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಮೋಹನ್ ಕುಮಾರ್, ಉಪಾಧ್ಯಕ್ಷ ಗಜೇಂದ್ರಸ್ವಾಮಿ, ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಸ್ಕೇಟಿಂಗ್ ಸಮಿತಿಯ ಸಹಕಾರ್ಯದರ್ಶಿ ಎಂ. ರವಿ ಹಾಗೂ ಎಲ್ಲಾ ಪದಾಧಿಕಾರಿಗಳು, ಮಾಜಿ ಕಾರ್ಪೂರೇಟರ್ ಈ. ವಿಶ್ವಾಸ್ , ಶಿವಮೊಗ್ಗ ಕ್ರೀಡಾ ಮತ್ತು ಯುವಜನ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ರೇಖ್ಯಾನಾಯ್ಕ್, ಹಾಗೂ ಶಿವಮೊಗ್ಗ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು, ದೈಹಿಕ ಶಿಕ್ಷಣ ವಿಭಾಗದ ಅಧಿಕಾರಿಗಳು, ಅನುದಾನರಹಿತ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ರಾ.ಹ. ತಿಮ್ಮೇನಹಳ್ಳಿ ಹಾಗೂ ಪದಾಧಿಕಾರಿಗಳು  ಅಭಿನಂದಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments