ಶಿವಮೊಗ್ಗ,ಜ.9: ಶಿವಮೊಗ್ಗ ದೈವಜ್ಞ ಬ್ರಾಹ್ಮಣ ಶ್ರೀ ವಾದಿರಾಜ ಶಿಷ್ಯ ವೃಂದದ ವತಿಯಿಂದ ಜ.10 ಮತ್ತು 11 ರಂದು ಶ್ರೀ ಸೋದೆ ವಾದಿರಾಜ ಮಠಾಧೀಶರಾದ ಶ್ರೀ ವಿಶ್ವವಲ್ಲಭ ತೀರ್ಥರ ಉಪಸ್ಥಿತಿಯೊಂದಿಗೆ ಧಾರ್ಮಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಶಿಷ್ಯವೃಂದದ ಮುಖ್ಯಸ್ಥ ಓಂ ಗಣೇಶ್ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.10 ರಂದು ಸಂಜೆ 4 ಗಂಟೆಗೆ ನಗರದ ರಾಮಣ್ಣಶ್ರೇಸ್ಟಿ ಪಾರ್ಕ್ನಿಂದ ತಿಲಕ ನಗರದ ರಾಘವೇಂದ್ರ ಸ್ವಾಮಿ ಮಠದವರೆಗೆ ಪೂರ್ಣಕುಂಬಾ ಸಮೇತಾ ಚಂಡೆವಾದ್ಯಗಳೊಂದಿಗೆ ಗುರುಗಳು ಮೆರವಣಿಗೆ ಮಾಡಲಿದ್ದು, ಸಂಜೆ 7 ಗಂಟೆಗೆ ಲಘು ಉಪಹಾರ ವ್ಯವಸ್ಥೆಕಲ್ಪಿಸಲಾಗಿದೆ ಎಂದರು.
ಜ.11 ರಂದು ಬೆಳಿಗ್ಗೆ ಗಂಟೆಗೆ ಶ್ರೀ ವಿಶ್ವವಲ್ಲಭ ಗುರುಗಳಿಂದ ರಾಘವೇಂದ್ರ ಸ್ವಾಮಿ ಮಠದಲ್ಲಿ ಪೂಜೆನಡೆಯಲಿದ್ದು, ಬೆಳಿಗ್ಗೆ 10 ಗಂಟೆಗೆ ದೈವಜ್ಞ ಬ್ರಾಹ್ಮಣ ಸಮಾಜದ ಕಲ್ಯಾಣ ಮಂದಿರದಲ್ಲಿ ಗುರುಗಳಿಗೆ ಸದ್ಭಕ್ತರಿಂದ ಸಾಮೂಹಿಕ ಪಾದಪೂಜೆ ಹಾಗೂ ಫಲ ಮಂತ್ರಾಕ್ಷತೆ ಕಾರ್ಯಕ್ರಮದ ಆಯೋಜಿಸಲಾಗಿದೆಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ವಾದಿರಾಜ ಶಿಷ್ಯ ವೃಂದದ ಪ್ರಮುಖರು ಹಾಜರಿದ್ದರು.
