ಶಿವಮೊಗ್ಗ, ಮಾ.17: ಜಮೀನು ಗಲಾಟೆ ಸಂಬಂಧಿತ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಅರೋಪಿಗಳನ್ನು ಘನ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಿ ಅಪರಾಧ ಸಾಬೀತ್ತಾಗಿದ್ದು, ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಲು ಆದೇಶಿಸಿದೆ.
ಶಿವಮೊಗ್ಗದ ಬೆಳಲಕಟ್ಟೆ ಗ್ರಾಮದ ಮಹೇಶಪ್ಪ ಮತ್ತು ಆರೋಪಿತರಾದ ಕುಮಾರ್ (57 ), ಕಾರ್ತಿಕ್ (28) ಇವರು ಈ ಹಿಂದೆ ಜಮೀನಿನ ವಿಚಾರದಲ್ಲಿ ಗಲಾಟೆಗಳಾಗುತ್ತಿದ್ದು, ದಿ:3-12-23 ರಂದು ಆರೋಪಿತರುಮಹೇಶಪ್ಪನನ್ನು ಸಾಯಿಸುವ ಉದ್ದೇಶದಿಂದ, ಮತ್ತೋಡು ಹನಸವಾಡಿ ಸರ್ಕಲ್ ಬಳಿ ಹೊಂಚು ಹಾಕಿಮಹೇಶಪ್ಪನು ಸ್ಕೂಟಿಯಲ್ಲಿ ಬರುವಾಗ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಮಾಡಿರುತ್ತಾರೆ.
ಅಪರಾಧಿ- ಕುಮಾರ್
ಅಪರಾಧಿ- ಕಾರ್ತಿಕ್
ಈ ಬಗ್ಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ನಂ: 383/2023 ಕಲಂ:120(ಬಿ), 341, 435, 302 ಸಹಿತ 34 ಐಪಿಸಿ ಕಾಯಿದೆ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ಆಗಿನ ತನಿಖಾಧಿಕಾರಿಗಳಾದ ಸತ್ಯ ನಾರಾಯಣ ವೈ ರವರು ಪ್ರಕರಣದ ತನಿಖೆ ಪೂರೈಸಿ, ಘನನ್ಯಾಯಾಲಯಕ್ಕೆ ಆರೋಪಿತರ ವಿರುದ್ಧ ದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.
ಘನ ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಅಭಿಯೋಜಕರಾದ ಮಮತಾ ಬಿ.ಎಸ್ ವಾದಮಂಡಿಸಿದ್ದು, ಘನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದವಿಚಾರಣೆ ನಡೆದು, ಆರೋಪಿತರ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದಅಭಯ್ ಧನಪಾಲ್ ಚೌಗಲ ರವರು ಜೀವಾವಧಿ ಶಿಕ್ಷೆ ಮತ್ತು ಒಟ್ಟು 57,000/- ರೂ ದಂಡವನ್ನು ವಿಧಿಸಿಆದೇಶಿಸಿರುತ್ತಾರೆ.
