ಶಿವಮೊಗ್ಗ, ಏ.14: ಡಾ.ಬಿ.ಆರ್. ಅಂಬೇಡ್ಕರ್ ಗೆ ಮಾತ್ರ ಜಗತ್ತಿಗೆ ತಾಯ್ತನ ಕೊಟ್ಟು ಕಾಪಾಡಲು ಸಾಧ್ಯ. ಅದರಂತೆ ಒಂದು ತೊಟ್ಟಿನ ನೀರಿಗಾಗಿ ಬೇಡಿದ ಅವರ ಕೈ ,ಇಂದು ಈ ದೇಶದ ಹಣೆಬರಹ ಬದಲಿಸಿದೆ ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ನಾಗೇಶ್ ಬಿದರುಗೋಡು ಹೇಳಿದರು.
ಜಿಲ್ಲಾಡಳಿ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿದೆ ಮಂಗಳವಾರ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಡಾ.ಬಿ.ಆರ್ ಅಂಬೇಡ್ಕರ್ ಅವರ 135 ನೇ ಜನ್ಮ ದಿನಾಚರಣೆಯಲ್ಲಿ ಉಪನ್ಯಾಸ ನೀಡಿದರು.
ಅಂಬೇಡ್ಕರ್ ರನ್ನು ಆರಾಧಿಸುವುದಕ್ಕಿಂತ ಅಧ್ಯಯನ ಮಾಡುವುದು ಮುಖ್ಯವಾಗಿದ್ದು, ನಾವೆಲ್ಲಾ ಅಂಬೇಡ್ಕರ್ರನ್ನು ಆಚರಣೆ, ವಿಭೃಂಜಣೆ ಮಾಡುತ್ತಾ ಹೋದಷ್ಟು ಅವರು ಹಿಂದೆ ಉಳಿಯುತ್ತಾರೆ. ಹಾಗಾಗಿ ನಾವೆಲ್ಲಾ ಅಂಬೇಡ್ಕರ್ರನ್ನು ಅಧ್ಯಯನ ಮಾಡುವ ಪ್ರಜ್ಞೆಯನ್ನು ಮೂಡಿಸಿಕೊಳ್ಳಬೇಕು ಎಂದರು.
ಗಮನಿಸಿ: 🌸 ವಿಶೇಷ ಲೇಖನ 🌸 ಜಾತಿಯತೆಯನ್ನೇ ಕಾರುವ ಪತ್ರಕರ್ತರು ಅಂಬೇಡ್ಕರ್ ನ ನೆನೆಯುತ್ತಿದ್ದಾರೆ!?
ಅಂಬೇಡ್ಕರ್ರನ್ನು ಅಳೆಯಲು ಈ ಭೂ ಮಂಡಲದ ಯಾವ ಮಾನದಂಡವು ಇಲ್ಲ. ಅಂಬೇಡ್ಕರ್ ಸಂವಿಧಾನ ಕೊಟ್ಟು ತುಂಬಾ ವರ್ಷ ಆಗಿದೆ. ಇತ್ತೀಚೆಗೆ ಪತ್ರಿಕೆಗಳು, ಸೊಷಿಯಲ್ ಮೀಡಿಯಾ ಗಳು ಯುದ್ದದ ನಿಗಿ ನಿಗಿ ಕೆಂಡದಲ್ಲಿ ಮುಳುಗಿವೆ. ನಾವು ಮನುಷ್ಯರಾಗರು ತುಂಬಾ ಹಿಂದುಳಿದ್ದೇವೆ. ಆದರೆ ಅಂಬೇಡ್ಕರ್ ಹೇಳಿದಂತೆ ನಾವುಗಳು ಇನ್ನು ಮನುಷ್ಯರಾಗಿ ಪಕ್ವವಾಗಬೇಕಿದೆ.
ಅಂಬೇಡ್ಕರ್ ರನ್ನು ಎದೆಯಾಳಕ್ಕೆ ಇಳಿಸಿಕೊಳ್ಳದೆ ಕೇವಲ ಅನುಯಾಯಿ ಆದರೆ ಯಾವುದೇ ಉಪಯೋಗವಿಲ್ಲ. ಅಂಬೇಡ್ಕರ್ ಅಂದುಕೊಂಡಂತೆ ನಾವೆಲ್ಲಾ ಅವರ ಹಾದಿಯಲ್ಲಿ ನಡೆಯಬೇಕು. ಅವರು ಈ ಸಮಾಜದಲ್ಲಿ ಯಾವುದನ್ನು ತಿದ್ದಬೇಕು ಎಂದು ಹೇಳಿದ್ದಾರೊ ಅದನ್ನು ನಾವು ಸರಿಯಾದ ಕ್ರಮದಲ್ಲಿ ಮಾಡುತ್ತಿದ್ದೇವಾ ಎಂದು ಪ್ರಶ್ನಿಸಿಕೊಳ್ಳಬೇಕಾಗಿದೆ ಎಂದರು.
ಅಂಬೇಡ್ಕರ್ ಮಹಾರ್ ಕೆರೆ ಚಳುವಳಿ ಕೇವಲ ಚಳುವಳಿಯಾಗಿರಲಿಲ್ಲ. ಅದು ನಾವೆಲ್ಲಾ ನಿಮ್ಮಂತೆ ಸಮಾನರು ಎಂಬ ಭಾವನೆ ಮೂಡಿಸುವಂತಾಗಿತ್ತು. ಈ ಸಮಾಜಕ್ಕೆ ಅಗತ್ಯ ಇಲ್ಲದನ್ನು ಸುಟ್ಟಿ ಹಾಕಿ ಆಗತ್ಯವಾದದನ್ನು ಹುಟ್ಟು ಹಾಕಿದರು. ಅಂಬೇಡ್ಕರ್ ಅವರದ್ದು ಸಂಘರ್ಷ ಮಾದರಿ ಆಗಿರಲ್ಲಿ ಸಂಧಾನ ಮಾರ್ಗ ಅಗಿತ್ತು. ಶಿಕ್ಷಣ ಪಡೆಯಿರಿ, ಸಂಘಟಿತರಾಗಿ ಹೋರಾಡಿ ಎಂದು ಸಂದೇಶ ಸಾರಿದರು. ಈ ದೇಶದ ದಲಿತರು, ಶೋಷಿತರು, ಮಹಿಳೆಯ ಕಾಳಜಿ ಹೊಂದಿದ್ದರು. ಮುಟ್ಟಿನ ರಜೆ ಬಗ್ಗೆ ಅಂಬೇಡ್ಕರ್ ಅವರು ಆಗಲೇ ಚರ್ಚಿಸಿದ್ದರು. ಈ ದೇಶದ ಅಭಿವೃದ್ದಿಗೆ ಮಹಿಳೆಯರನ್ನೆ ಮಾನದಂಡ ಮಾಡಿದ್ದರು ಎಂದರು.
