Homeಅಪರಾಧಪೊಲೀಸ್ ದಾಳಿ- 1 ಕೆಜಿ 67 ಗ್ರಾಂ ತೂಕದ ಗಾಂಜಾ ವಶ

ಪೊಲೀಸ್ ದಾಳಿ- 1 ಕೆಜಿ 67 ಗ್ರಾಂ ತೂಕದ ಗಾಂಜಾ ವಶ

Spread the love

ಶಿವಮೊಗ್ಗ,ಮೇ.3: ರಾಜೀವ್ ಗಾಂಧಿ ಬಡಾವಣೆ ಕಂಟ್ರಿ ಕ್ಲಬ್ ರಸ್ತೆಯ ಕಾನೂನುಬಾಹಿರವಾಗಿ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿ ಮಾದಕ ದ್ರವ್ಯಗಳು ಮತ್ತು ಮನೋ ವಿಶ್ಲೇಷಕ ವಸ್ತುಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

2026 ಮೇ. 2 ರಂದು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ರಾಜೀವ್ ಗಾಂಧಿ ಬಡಾವಣೆ ಕಂಟ್ರಿ ಕ್ಲಬ್ ರಸ್ತೆಯ ಬಳಿ ಯಾರೋ ಇಬ್ಬರು ಕಾನೂನುಬಾಹಿರವಾಗಿ ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಉಪಾಧೀಕ್ಷಕರು ಬಾಬು ಆಂಜನಪ್ಪ ತಮ್ಮ ಅಧಿಕಾರಿ ಹಾಗೂ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿದ್ದಾರೆ.

ಗಮನಿಸಿ:ಅಣು ವಿದ್ಯುತ್ ಸ್ಥಾವರ ಸ್ಥಾಪನೆ ಕೂಡಲೇ ನಿಲ್ಲಿಸಿ

ಆರೋಪಿತರಾದ 1.ಅಶೋಕ ಪಿ 28 ವರ್ಷ 2. ರಾಕೇಶ್ 20 ವರ್ಷ ಇವರುಗಳನ್ನು ದಸ್ತಗಿರಿ ಮಾಡಿ ಸುಮಾರು 1,00,000 ರೂ ಮೌಲ್ಯದ 1 ಕೆಜಿ 67 ಗ್ರಾಂ ತೂಕದ ಗಾಂಜಾವನ್ನು ಹಾಗೂ ಕೃತ್ಯಕ್ಕೆ ಬಳಸಿದ ಕಾರನ್ನು ಹಾಗೂ ಕೃತ್ಯದಿಂದ ಬಂದ 3290/- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಸದರಿ ಆರೋಪಿತರ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ: 0097/2026 ಕಲಂ: U/s-20(b) (ii) B) NARCOTIC DRUGS & PSYCHOTROPIC SUBSTANCES ACT, ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments