ಶಿವಮೊಗ್ಗ, ಮೇ.6 : ನನ್ನ ವೈಚಾರಿಕ ಪ್ರಜ್ಞೆಯನ್ನು ಹೆಚ್ಚಿಸಿದಂತಹ ಬುದ್ದ, ಬಸವ, ಅಂಬೇಡ್ಕರ್, ಪೆರಿಯಾರ್ ಗೆ ಈ ಸ್ವರ್ಣ ಪದಕಗಳನ್ನು ಅರ್ಪಿಸುತ್ತೇನೆ.
ಕುವೆಂಪು ವಿಶ್ವವಿದ್ಯಾಲಯದ 35 ನೇ ಘಟಿಕೋತ್ಸದಲ್ಲಿ 10 ಸ್ವರ್ಣ ಪದಕಗಳಿಸಿದ ಕನ್ನಡ ವಿಭಾಗದ ಚಿಕ್ಕಮಗಳೂರಿನ ಅಜ್ಜಂಪುರದ ಹರೇಕಾನುವಂಗಲದ ಅಭಿಷೇಕ್ ಹೇಳಿದ ಮಾತಿದು.
ಈ ಕ್ಷಣ ನನಗೆ ಸಂತಸ ತಂದಿದೆ. ನನ್ನ ಈ ಸಾಧನೆಗೆ ಬುದ್ದ, ಬಸವ, ಅಂಬೇಡ್ಕರ್ , ಪೆರಿಯಾರ್ ಚಿಂತನೆಗಳು ಹೆಚ್ಚಾಗಿ ಪ್ರಭಾವ ಬೀರಿದೆ.
ಅಭಿಷೇಕ್ ಸಾಹಿತ್ಯದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದು, ಕುವೆಂಪು ಅವರಿಂದ ಪ್ರಭಾವಿತರಾಗಿದ್ದರೆ. ಇದಲ್ಲದೇ ತನ್ನ ಗುರುಗಳ ಉಪನ್ಯಾಸ, ಸಾಹಿತ್ಯ ಮೇಲಿನ ಅಸಕ್ತಿಯಿಂದ ಈ ಹಾದಿ ತುಳಿದ್ದೇನೆ ಎನ್ನುತ್ತಾರೆ.

ಅಭಿಷೇಕ್ ತಂದೆ ಕೂಲಿ ಕಾರ್ಮಿಕರಾಗಿದ್ದರೂ ಡಿಎಸ್ ಎಸ್ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ತಾಯಿ ಆಶಾ ಕಾರ್ಯಕರ್ತೆ ಯಾಗಿದ್ದು, ಇಡೀ ಕುಟುಂಬದಲ್ಲಿ ಉನ್ನತ ಶಿಕ್ಷಣ ಪಡೆದ ಮೊದಲಿಗರಾಗಿದ್ದಾರೆ.
ಉತ್ತಮ ಉಪನ್ಯಾಸಕ ಆಗಬೇಕು ಕನಸಿದೆ. ಅದರಂತೆ ಭವಿಷ್ಯತ್ತಿನಲ್ಲಿ ಇನ್ನಷ್ಟು ವೈಚಾರಿಕ ಪ್ರಜ್ಞೆಗೆನನ್ನನ್ನು ನಾನು ಒಪ್ಪಿಸಿಕೊಳ್ತೆನೆ. ಆ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಕೆಲಸ ಮಾಡುವ ಯೋಚನೆ ಹೊಂದಿದ್ದೇನೆ. ಸಾಧನೆ ಸಹಕಾರಿಯಾಗಿದ್ದ ನನ್ನ ಗುರುಗಳು, ಪೋಷಕರು, ಸ್ನೇಹಿತರಿಗೆ ಧನ್ಯವಾದಗಳು ತಿಳಿಸುತ್ತೇನೆ ಎಂದು ಹರ್ಷ ವ್ಯಕ್ತ ಪಡಿಸಿದರು.
