ಬೆಂಗಳೂರು,ಜು.10; ರಾಜಣ್ಣ ಸೆಪ್ಟೆಂಬರ್ ನಲ್ಲಿ ಕ್ರಾಂತಿ ಎಂದು ಹೇಳಿದ್ರು. ಸಿದ್ದರಾಮಯ್ಯ ಇವತ್ತು ಎಲ್ಲರಿಗೂ ಒಂದೇ ಉತ್ತರ ಕೊಟ್ಟಿದ್ದಾರೆ. ಐದು ವರ್ಷಗಳ ನಾನೇ ಎಂದು, ಅದು ಹೇಳಿರೋದು ದೆಹಲಿಯಲ್ಲಿ ಇವರ ಹೈಕಮಾಂಡ್ ಬದುಕಿದೆಯಾ ಎಂದು ಮೇಲ್ಮನೆ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಟೀಕಿಸಿದ್ದಾರೆ.
ಕಾಂಗ್ರೆಸ್ ಹೈಕಮಾಂಡ್ ಯಾರು ಅಂದರೆ ಸಿದ್ದರಾಮಯ್ಯ ಅಂತಾರೆ, ಬಹಳ ಜನರು ಸಿದ್ದರಾಮಯ್ಯ ಹೇಳಿದ್ದನ್ನು ಕೇಳಬೇಕು ಇಲ್ಲವಾದಲ್ಲಿ ಕಾಂಗ್ರೆಸ್ ಗೆ ಉಳಿಗಾವೇ ಇಲ್ಲವೆಂಬಂತೆ ಆಗಿದೆ. .
ಇಲ್ಲಿ ಸಿದ್ದರಾಮಯ್ಯ ರನ್ನು ಟಚ್ ಮಾಡಿದ್ರೆ ಕಾಂಗ್ರೆಸ್ ಉಳಿಯಲ್ಲ ಇಲ್ಲವೆಂದೂ ಹೈಕಮಾಂಡ್ ಗೂ ಗೊತ್ತಿದೆ. ಸಿದ್ದರಾಮಯ್ಯ ರ ಈ ಹೇಳಿಕೆ ಸಣ್ಣ ಹೇಳಿಕೆ ಅಲ್ಲ. ಅವರ ವಿರುದ್ಧ ಯಾರು ಮಾತಾಡ್ತಿದ್ರೋ ಅವರಿಗೆಲ್ಲ ಇದು ಥ್ರೆಟ್. ಕಾಂಗ್ರೆಸ್ ಶಾಸಕರಿಗೆ ಇವಾಗ ತಾಕತ್ ಇದ್ದರೆ ಇವಾಗ ಸಿದ್ದರಾಮಯ್ಯ ಇಳಿಸುವ ಮಾತಾಡಲಿ ಎಂದು ಹೇಳಿದರು.
ಅಧಿಕಾರ ಹಂಚಿಕೆ ಬಗ್ಗೆ ಡಿಕೆ ಶಿವಕುಮಾರ್ ರೇ ಹೇಳಿದ್ದಾರೆ. ಪಾಪ ಹೈಕಮಾಂಡ್ ಬಾಯಿ ಬಿಡೋಕೆ ಆಗ್ತಿಲ್ಲ. ಸಿದ್ದರಾಮಯ್ಯ ಬಗ್ಗೆ ಏನಾದರೂ ಮಾತಾಡಿದ್ರೆ ಹೈಕಮಾಂಡ್ ಕಥೆ ಮುಗಿದಂತೆ. ಸಿದ್ದರಾಮಯ್ಯಗೆ ಹೇಳುವ ತಾಕತ್ ಕಾಂಗ್ರೆಸ್ ಹೈಕಮಾಂಡ್ ಗೆ ಗಿಲ್ಲ
ಇವಾಗ ಇರೋದ ತಾಕತ್ ಕಾಂಗ್ರೆಸ್ ಶಾಸಕರಿಗೆ ಮಾತ್ರ ಎಂದರು.
