ಶಿವಮೊಗ್ಗ ಟೆಲೆಕ್ಸ್ ಸುದ್ದಿ, ಜೂ.5
ಕಾಲೇಜಿನ ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಹೊಣೆ, ಪ್ಲಾಸ್ಟಿಕ್ ಮುಕ್ತ ಕ್ಯಾಂಪಸ್ ಮಾಡಲು ಇಂದೇ ಸಂಕಲ್ಪ ತೊಡೋಣ ಎಂದು ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಸಿರಾಜ್ ಅಹಮದ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಶುಕ್ರವಾರ ಅವರು ಸಹ್ಯಾದ್ರಿ ಕಲಾ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಜೊತೆಗೂಡಿ ಪ್ಲಾಸ್ಟಿಕ್ ಹೆಕ್ಕಿ ಸ್ವಚ್ಛ ಮಾಡುವುದರ ಮೂಲಕ ವಿಶ್ವ ಪರಿಸರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಗಮನಿಸಿ: ಮೂರು ದಿನಗಳ ಕಾಲ ಎಪಿಎಂಸಿ ಮೇಳ: ರೈತರ ಬೆಳೆ ನೇರವಾಗಿ ಗ್ರಾಹಕರಿಗೆ
ವಿದ್ಯಾರ್ಥಿಗಳು ಕೈಯಲ್ಲಿ ಚೀಲ ಹಿಡಿದು ಪ್ಲಾಸ್ಟಿಕ್ ಹೆಕ್ಕಿದ್ದಾರೆ, ಈ ಕೆಲಸ ಚಿಕ್ಕದಾಗಿ ಕಾಣಬಹುದು ಆದರೆ ಇದರ ಅರ್ಥ ಬಹುದೊಡ್ಡದಿದೆ ಅಭಿವೃದ್ಧಿಯೆಂದರೆ ಕೇವಲ ಕಟ್ಟಡ ಗಳಲ್ಲ ಪರಿಸರ ಉಳಿಸುವುದು ಕೂಡ ಶಾಶ್ವತವಾದ ಅಭಿವೃದ್ಧಿಯೇ ಎಂದರು.
ಸಹ್ಯಾದ್ರಿ ಮೂರು ಕಾಲೇಜುಗಳ ಎಸ್ಟೇಟ್ ಅಧಿಕಾರಿ ಡಾ.ಕೆ.ಎನ್. ಮಂಜುನಾಥ್ ಮಾತನಾಡಿ, ನಮ್ಮ ಮಕ್ಕಳು ಪ್ಲಾಸ್ಟಿಕ್ ಮುಕ್ತ ಕಾಲೇಜ್ ಮಾಡಲು ಶ್ರಮಿಸುತ್ತಿದ್ದಾರೆ. ಈ ದಿನ ಮಾತ್ರವಲ್ಲ ಪ್ರತಿದಿನವೂ ಎಲ್ಲಿ ಸಾಧ್ಯವೋ ಅಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡುತ್ತಾರೆ ಪ್ಲಾಸ್ಟಿಕ್ ಮುಕ್ತಗೊಳಿಸುವುದು ಎಂದರೆ ನಾಳಿನ ಉಸಿರನ್ನ ಕಾಪಾಡುವುದು ಎಂದೇ ಅರ್ಥ ಎಂದರು.
ಈ ಸಂದರ್ಭದಲ್ಲಿ ಎಷ್ಟೆಟ್ ಸೂಪರ್ ವೈಜರ್ ಪ್ರಮೋದ್, ಉಪನ್ಯಾಸಕರುಗಳಾದ ಡಾ.ಶೈಲಜಾ, ಡಾ.ಎಂಹೆಚ್ ಪ್ರಹ್ಲಾದಪ್ಪ, ಸಂತೋಷ್, ಬಿ.ಜೆ.ಸಂಶೋಧನಾ ವಿದ್ಯಾರ್ಥಿಗಳಾದ ತಿಪ್ಪೇಸ್ವಾಮಿ, ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳಾದ ಚಂದ್ರು, ಕವನ ಬಾಯಿ, ಪೂರ್ಣಿಮಾ, ರಕ್ಷಿತಾ, ವಾಣಿ, ಮಂಜುಳಾ, ಶಕುಂತಲಾ, ನಾಗಮ್ಮ, ಇಂದಿರಾ, ಸೇರಿದಂತೆ ಹಲವರು ಇದ್ದರು.
