Homeಜಿಲ್ಲೆವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರಯೋಗಾಲಯದ ಅನುಭವ ಸಿಗಬೇಕು: ಬಿವೈಆರ್

ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರಯೋಗಾಲಯದ ಅನುಭವ ಸಿಗಬೇಕು: ಬಿವೈಆರ್

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಜು.17

ಪ್ರಾಕ್ಟಿಕಲ್ ಆಗಿ ವಿದ್ಯಾರ್ಥಿಗಳಿಗೆ ಈ ವಿಜ್ಞಾನ ಕೇಂದ್ರದ ಪ್ರಯೋಗಾಲಯದ ಅನುಭವ ಸಿಗಬೇಕು ಎಂಬ ಉದ್ದೇಶದಿಂದ 5 ಎಕರೆ ಜಾಗದಲ್ಲಿ ವಿಜ್ಞಾನ ಕೇಂದ್ರ ಕ್ಯಾಟಗರಿ-2ನ್ನು 12 ಕೋಟಿ ರೂ.ವೆಚ್ಚದಲ್ಲಿ ಪ್ರಯೋಗಾಲಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಅವರು ಶುಕ್ರವಾರ ನಗರದ ಸಹ್ಯಾದ್ರಿ ಕಾಲೇಜಿನ ಕ್ಯಾಂಪಸ್‌ನಲ್ಲಿರುವ 5 ಎಕರೆ ಜಾಗದಲ್ಲಿ 12 ಕೋಟಿ ರೂ.ವೆಚ್ಚದಲ್ಲಿ ವಿಜ್ಞಾನ ಕೇಂದ್ರ ಕ್ಯಾಟಗರಿ-2ನ್ನು ಪ್ರಯೋಗಾಲಯ ನಿರ್ಮಿಣವಾಗುತ್ತಿದ್ದು ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ವೀಕ್ಷಿಸಿದರು.

ಈ ಕೇಂದ್ರಕ್ಕೆ 5 ಎಕರೆ ಜಾಗವನ್ನು ಕೇಳಿದ್ದೆವು. ಯೂನಿರ್ವಸಿಟಿ ಬೆಲೆಬಾಳುವ ಈ ಜಾಗವನ್ನು ವಿಜ್ಞಾನ ಕೇಂದ್ರಕ್ಕೆ ನೀಡಿದೆ. ಇದಕ್ಕಾಗಿ ನಾನು ವಿವಿ ಆಡಳಿತಕ್ಕೆ ಅಭಿನಂದಿಸುತ್ತೇನೆ.ಆಗಿನ ಕೇಂದ್ರ ಮಂತ್ರಿಗಳಾದ ಮನ್ಸೂಕ್ ಮಾಂಡವೀಯ ಅವರಿಗೆ ನಾನು ಮನವಿ ಮಾಡಿದ ಹಿನ್ನಲೆಯಲ್ಲಿ ಈ ಕೇಂದ್ರಕ್ಕೆ ಕಟ್ಟಡ ಕಾಮಗಾರಿಗೆ 10 ಕೋಟಿ ರೂ. ಹಾಗೂ ಪ್ರಯೋಗಾಲಯದ ಉಪಕರಣಗಳಿಗೆ 2 ಕೋಟಿ ರೂ. ಮಂಜೂರಾಗಿತ್ತು. ಕಟ್ಟಡ ಪೂರ್ಣಗೊಳ್ಳಲು ಇನ್ನೂ 1 ಕೋಟಿ ರೂ. ಕೊರತೆಯಿದ್ದು, ಅದನ್ನು ಹೊಂದಿಸಬೇಕಾಗಿದೆ ಎಂದರು.

ಸಾಗರದಾಳದಲ್ಲಿನ ಜೀವ ವೈವಿಧ್ಯ ಹಾಗೂ ಇನ್ನಿತರ ವೈಜ್ಞಾನಿಕ ಮಾಹಿತಿ ಪಡೆಯಲು ಈ ವಿಜ್ಞಾನ ಕೇಂದ್ರ ವಿದ್ಯಾರ್ಥಿಗಳಿಗೆ ಸಹಾಯಕವಾಗಲಿದೆ. ಇಲ್ಲಿ ಸಂಶೋಧನೆಗೂ ಅವಕಾಶವಿದೆ. ಆಸಕ್ತ ಇರುವ ವಿದ್ಯಾರ್ಥಿಗಳು ಇದರ ಲಾಭ ಪಡೆಯಬಹುದಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ 50:50ರ ಅನುಪಾತದಲ್ಲಿ ಈ ಕೇಂದ್ರಕ್ಕೆ ಅನುದಾನ ನೀಡಿದೆ. ಇನ್ನೂ 2.5 ಎಕರೆ ಜಾಗ ಉಳಿಯಲಿದ್ದು, ಇದರಲ್ಲಿ ಮುಂದಿನ ದಿನಗಳಲ್ಲಿ ಸುಸಜ್ಜಿತ ಪ್ಲಾನಿಟೋರಿಯಂ ಕೂಡ ನಿರ್ಮಿಸುತ್ತೇವೆ. ಯುವ ವಿಜ್ಞಾನಿಗಳನ್ನು ಬೆಳೆಸುವ ಕಾರ್ಯಕ್ರಮ ಇದಾಗಿದೆ. ಆಯನೂರಿನಲ್ಲಿ ಈಗಾಗಲೇ ಇರುವ ತಾರಾಲಯವನ್ನೂ ಕೂಡ ರಾಜ್ಯ ಸರ್ಕಾರದ ನೆರವಿನಿಂದ ಅಭಿವೃದ್ಧಿಪಡಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ಪ್ರಮುಖರಾದ ಸಂತೋಷ್ ಬಳ್ಳೆಕೆರೆ, ದಿವಾಕರ ಶೆಟ್ಟಿ, ರಾಜೇಶ್ ಕಾಮತ್, ಅಧಿಕಾರಿಗಳು ಸೇರಿದಂತೆ ಹಲವರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments