Homeಜಿಲ್ಲೆರಾಜೀನಾಮೆಯಿಂದ ಯೂಟರ್ನ್- ಬೇಳೂರು ಹೇಳಿದ್ದೇನು!?

ರಾಜೀನಾಮೆಯಿಂದ ಯೂಟರ್ನ್- ಬೇಳೂರು ಹೇಳಿದ್ದೇನು!?

Spread the love

ಶಿವಮೊಗ್ಗ ಟೆಲೆಕ್ಸ್ ಸುದಿ, ಆ.4

ಪಕ್ಷ ಮತ್ತು ಮುಂದಿನ ಚುನಾವಣೆಗೋಸ್ಕರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರಿಗೆ ಬೆಂಬಲವಾಗಿ ನಿಲ್ಲಲ್ಲು ನಾನು ರಾಜೀನಾಮೆ ನೀಡದೆ ಪಕ್ಷದಲ್ಲಿ ಉಳಿದು ನಿಷ್ಠೆಯಿಂದ ಕೆಲಸ ಮಾಡುತ್ತೇನೆ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

ಸಚಿವ ಸಂಪುಟ ವಿಸ್ತರಣೆಯಿಂದ ಅಸಮಾಧಾನ ಹೊರಹಾಕಿದ್ದ ಶಾಸಕ ಬೇಳೂರು ಗೋಪಾಕೃಷ್ಣ ಅವರು ರಾಜೀನಾಮೆ ನೀಡಲು ತೀರ್ಮಾನಿಸಿದ್ದರು. ಆದರೆ ಮಂಗಳವಾರ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸುವ ಮೂಲಕ ತನ್ನ ರಾಜೀನಾಮೆಯ ಪ್ರಸಂಗಕ್ಕೆ ಅಂತ್ಯ ಹಾಡಿದ್ದಾರೆ.

ಸಚಿವ ಸಂಪುಟ ವಿಸ್ತರಣೆಯಿಂದ ನನಗೆ ಬಹಳ ನೋವಾಗಿದೆ. ಸಚಿವ ಸ್ಥಾನದ ನಿರೀಕ್ಷೆಯಲ್ಲಿದೆ. ಆದರೆ ಅದು ಹುಸಿಯಾಗಿ. ನನ್ನ ಕ್ಷೇತ್ರದ ಕಾರ್ಯಕರ್ತರು ಕಣ್ಣಿರಾಕ್ಕಿದ್ದಾರೆ. ಇದರಿಂದ ನೊಂದು ರಾಜೀನಾಮೆ ನೀಡಲು ನಿರ್ಧರಿಸಿದ್ದೆ. ಆದರೆ ನೆನ್ನೆ ರಾತ್ರಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ಮಾಡಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡ ಎಂದಿದ್ದಾರೆ. ಅವರ ಮಾತಿಗೆ ಗೌರವ ಕೊಟ್ಟು ರಾಜೀನಾಮೆ ನೀಡುವ ನಿರ್ಧಾರವನ್ನು ಕೈಬಿಟ್ಟಿದ್ದೇನೆ ಎಂದು ತಿಳಿಸಿದರು.

ಡಿ.ಕೆ.ಶಿವಕುಮಾರ್‌ಗೆ ಬೆಂಬಲವಾಗಿ ನಿಲ್ಲುತ್ತೇನೆ:

ಮುಂಬರುವ ಚುನಾವಣಾಗೋಸ್ಕರ ಪಕ್ಷದಲ್ಲಿ ಯಾವುದೇ ಗೊಂದಲ ಆಗಬಾರದೆಂಬ ಆಲೋಚನೆಯಿಂದ ಅಧಿಕಾರ ಇಲ್ಲದೆ ಹೋದರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬೆಂಬಲವಾಗಿ ನಿಲ್ಲಲ್ಲು ನಿರ್ಧಾರ ಮಾಡಿದ್ದೇನೆ.

ಈ ಹಿಂದೆ ನನಗೆ ಚುನಾವಣೆ ಸ್ಪರ್ಧಿಸಲು ಕಾಂಗ್ರೆಸ್ ನಿಂದ ಟಿಕೆಟ್ ಕೊಟ್ಟಿದ್ದು ಡಿ.ಕೆ.ಶಿವಕುಮಾರ್. ಅವರ ಮೇಲಿನ ಪ್ರೀತಿಯಿಂದ ಮುಖ್ಯಮಂತ್ರಿಯ ಮಾತಿಗೆ ಬೆಲೆ ಕೊಡುತ್ತಿದ್ದೇನೆ. ಇನ್ನೂ ಮುಂದೆ ಪಕ್ಷದ ಏಳಿಗೆಗಾಗಿ ನಿಮ್ಮ ಜೊತೆ ಇರುತ್ತೇನೆ ಎಂದು ಅವರಿಗೆ ತಿಳಿಸಿದ್ದೇನೆ ಎಂದರು.

ಸಿದ್ದರಾಮಯ್ಯನವರನ್ನು ಕೇಳಿದ್ದೆ:

ಎಲ್ಲಾವು ಚರ್ಚೆ ಆಗಿತ್ತು. ಎರಡುವರೆ ವರ್ಷದ ನಂತರ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಅವೆಲ್ಲಾ ನಿರಾಸೆಯಾಗಿದೆ. ಸಾಮಾನ್ಯ ವರ್ಗದಿಂದ ಬಂದ ನನಗೆ ಅಷ್ಟು ದೊಡ್ಡ ಮಟ್ಟದಲ್ಲಿ ಯಾರನ್ನು ಭೇಟಿಯಾಗಲು ಆಗಲಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬಳಿ ಕೇಳಿದ್ದೆ. ಆದರೆ ಅವರು, ಅವರ ಕಡೆಯವರನ್ನು ಆಧಾರವಾಗಿ ಇಟ್ಟುಕೊಂಡು ಸಚಿವ ಸ್ಥಾನ ಕೇಳಿದ್ದಾರೆ ಎಂದು ಅಸಮಾಧಾನ ತೊಡಿಕೊಂಡರು.

ಕಾರ್ಯಕರ್ತರು ರಾಜೀನಾಮೆ ಕೊಡಬೇಡಿ:

ಪಕ್ಷದ ಕಾರ್ಯಕರ್ತರು ಯಾರು ರಾಜೀನಾಮೆ ಕೊಡಬೇಡಿ. ನಾವು ಮುಖ್ಯಮಂತ್ರಿಗೋಸ್ಕರ ಹಾಗೂ ಪಕ್ಷಕೊಸ್ಕರ ನಿಷ್ಠವಂತ ಕಾರ್ಯಕರ್ತರಾಗಿ ದುಡಿಯೋಣ.

ನಾನು ಮೂರು ವರ್ಷದಲ್ಲಿ ಯಾವುದೇ ಕಾಂಟ್ರುವರ್ಸಿ ಮಾಡಿಲ್ಲ. ಪಕ್ಷದೊಳಗೆ ಭಿನ್ನ ಮತ ಸೃಷ್ಟಿಸಿಲ್ಲ. ದೇಶವಿರೋಧಿ ಚಟುವಟಿಕೆ ಮಾಡಿಲ್ಲ. ಆದರು ನನಗೆ ಸಚಿವ ಸ್ಥಾನ ದೊರಕಿಲ್ಲ. ನಾಲ್ಕು ಬಾರಿ ಗೆದ್ದವರಲ್ಲು ಕೂಡ ಇಂತಹ ಪ್ರಶ್ನೆಗಳು ಹುಟ್ಟಿಕೊಳ್ಳುವುದು ಸಹಜವಾಗಿದೆ. ಆದರೆ ಸಾಮಾಜಿಕ ನ್ಯಾಯ ಎನ್ನುವ ಪಕ್ಷದಲ್ಲಿ ಸಚಿವ ಸ್ಥಾನ ಹಂಚಿಕೆಯಲ್ಲಿ ಎಲ್ಲಾವು ಬುಡಮೇಲಾಗಿದೆ. ಎಲ್ಲಾ ಗೊತ್ತಿದ್ದು ಕೊನೆಯಲ್ಲಿ ಸ್ಥಾನ ಕೈತಪ್ಪಿದೆ. ಇದಕ್ಕೆ ನಾನು ಹೈಕಮಾಂಡ್‌ನ್ನಾಗಲಿ ಅಥವಾ ಇನ್ಯಾರನ್ನಾಗಲಿ ದೂರವುದಿಲ್ಲ. ನಾನು ಮುಖ್ಯಮಂತ್ರಿ ಡಿ.ಕೆ.ಶಿಕುಮಾರ್‌ಗೋಸ್ಕರ ಪಕ್ಷದಲ್ಲಿ ಇರುತ್ತೇನೆ. ಕಾರ್ಯಕರ್ತನಾಗಿ ಪಕ್ಷದಲ್ಲಿ ಕೆಲಸ ಮಾಡುತ್ತೇನೆ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments