ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಆ.18
ಗೋ ಕಳ್ಳರಿಂದ ಶಿಕಾರಿಪುರದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ನಡೆದ ಹಲ್ಲೆಯ ವಿರುದ್ದ ಇದುವರೆಗೂ ಯಾವುದೇ ಕ್ರಮಗೊಂಡಿಲ್ಲ. ಹಾಗಾಗಿ ನಾಳೆ ನಡೆಯಲಿರುವ ಶಿಕಾರಿಪುರ ಬಂದ್ ಗೆ ನನ್ನ ಸಹಕಾರವಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಗಮನಿಸಿ: ನಾಗೇಂದ್ರರನ್ನು ಸಂಪುಟದಿಂದ ತೆಗೆಯುವವರೆಗೆ ಹೋರಾಟ ನಡೆಯುತ್ತದೆ
ಅವರು ಮಂಗಳವಾದ ಮಾಧ್ಯಮದೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಕೊಲೆ, ಸುಲಿಗೆ ದರೋಡೆಗಳು ಮಿತಿ ಮೀರಿದೆ. ಅದರಂತೆ ಶನಿವಾರ ಶಿಕಾರಿಪುರದಲ್ಲಿ ಗೋ ಕಳ್ಳತವಾಗಿದೆ. ಅದನ್ನು ಬೆನ್ನಟ್ಟಿ ಬಜರಂಗದಳ ಕಾರ್ಯಕರ್ತರಿಗೆ ಗೋ ಕಳ್ಳರು ಹಲ್ಲೆ ಮಾಡಿದ್ದಾರೆ. ರಾಜ್ಯದಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದರು ಸರ್ಕಾರ ಹಾಗೂ ಗೃಹ ಇಲಾಖೆ ಮಾತ್ರ ಕಂಡು ಕಾಣದಂತೆ ಕುಳಿತ್ತಿದೆ ಎಂದರು.
ಶಿಕಾರಿಪುರ ಘಟನೆ ಸಂಬAಧಿಸಿದAತೆ ಗೋ ಕಳ್ಳರ ಬಗ್ಗೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಸಾಕ್ಷಿ ಸಮೇತ ಮಾಹಿತಿ ನೀಡಿದ್ದೇವೆ. ಆದರೂ ಗೋ ಹಂತಕರ ವಿರುದ್ಧ ಯಾವುದೇ ಕ್ರಮವಾಗಿಲ್ಲ ಎಂದರು.
