Homeಜಿಲ್ಲೆಗರ್ಭಕಂಠ ಕ್ಯಾನ್ಸರ್ ಬಗ್ಗೆ ಆತಂಕ ಬೇಡ ತಡೆಗಟ್ಟಬಹುದು: ಡಾ. ಚಿನ್ಮಯಿ

ಗರ್ಭಕಂಠ ಕ್ಯಾನ್ಸರ್ ಬಗ್ಗೆ ಆತಂಕ ಬೇಡ ತಡೆಗಟ್ಟಬಹುದು: ಡಾ. ಚಿನ್ಮಯಿ

Spread the love

ಶಿವಮೊಗ್ಗ ಟೆಲೆಕ್ಸ್ ಸುದ್ದಿ,ಸೆ.22

ಸಹ್ಯಾದ್ರಿ ಕಲಾ ಕಾಲೇಜಿನ ಸಮಾಜ ಕಾರ್ಯ ವಿಭಾಗ ಹಾಗೂ ಭಾರತೀಯ ಕುಟುಂಬ ಯೋಜನಾ ಸಂಘ ಶಿವಮೊಗ್ಗ ಶಾಖೆ ಇವರ ಸಹಯೋಗದಲ್ಲಿ ಗರ್ಭಕಂಠ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಸೋಮವಾರ ಕಾಲೇಜಿನ ಜಿ-05 ಸಭಾಂಗಣದಲ್ಲಿ ನಡೆಯಿತು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಸಿರಾಜ್ ಅಹಮದ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, “ಸಮಸ್ಯೆ ಬರುವುದಕ್ಕಿಂತ ಮೊದಲೇ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಬೇಕು. ಆರೋಗ್ಯದ ಬಗ್ಗೆ ಕಾಳಜಿ ಅತ್ಯಂತ ಅಗತ್ಯ. ವಿದ್ಯಾರ್ಥಿಗಳು ಆರೋಗ್ಯವಂತರಾಗಬೇಕು, ಅದರಲ್ಲೂ ವಿದ್ಯಾರ್ಥಿನಿಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು” ಎಂದು ಹೇಳಿದರು.

ಗಮನಿಸಿ: ಮ್ಯಾಪಿಂಗ್ ಇಲ್ಲದ/ದೋಷವಿರುವ ಮತದಾರರ ದಾಖಲೆಯನ್ನು ಸರಿಪಡಿಸಿ

ಪ್ರೊ. ಚಂದ್ರಶೇಖರ್ ಅವರು ಭಾರತೀಯ ಕುಟುಂಬ ಯೋಜನಾ ಸಂಘದ ಬಗ್ಗೆ ಮಾಹಿತಿ ನೀಡಿ, “ಸಂಸ್ಥೆಯು 1949 ರಿಂದಲೂ ಕುಟುಂಬ ಯೋಜನೆ, ಮಹಿಳೆಯರ ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣೆ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಶಿವಮೊಗ್ಗ ಶಾಖೆಯಲ್ಲಿ ಕಡಿಮೆ ವೆಚ್ಚದಲ್ಲಿ ಸಮಾಲೋಚನೆ ಮತ್ತು ತಪಾಸಣೆ ಸೌಲಭ್ಯವಿದೆ” ಎಂದು ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾದ ಎಫ್‌ಪಿಎ ಇಂಡಿಯಾದ ಆರೋಗ್ಯಾಧಿಕಾರಿ ಡಾ. ಚಿನ್ಮಯಿ ಎಸ್.ಎಲ್ ಪ್ರಾತ್ಯಕ್ಷತೆಯ ಮೂಲಕ ಗರ್ಭಕಂಠ ಕ್ಯಾನ್ಸರ್ ಬಗ್ಗೆ ಮಾತನಾಡಿ, “ಇದು ಸಂಪೂರ್ಣವಾಗಿ ತಡೆಗಟ್ಟಬಹುದಾದ ಕ್ಯಾನ್ಸರ್ ಆಗಿದೆ. ಇದು ಹೆಚ್‌ಪಿವಿ ವೈರಸ್‌ನಿಂದ ಬರುತ್ತದೆ. ಮಹಿಳೆಯರಿಗೆ ಮಾತ್ರವಲ್ಲ, ಗಂಡಸರಿಗೂ ಬರಬಹುದು. ಆದ್ದರಿಂದ ಲೈಂಗಿಕ ಶಿಕ್ಷಣ ಅತ್ಯಂತ ಅವಶ್ಯಕ ಮತ್ತು ಇದರ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಇದು ಬೇಗ ಕಾಣಿಸಿಕೊಳ್ಳುತ್ತದೆ. ಸರಿಯಾದ ಸಮಯದಲ್ಲಿ ವ್ಯಾಕ್ಸಿನೇಷನ್ ಪಡೆಯುವುದರಿಂದ ಇದನ್ನು ತಡೆಗಟ್ಟಬಹುದು. 21 ವರ್ಷ ಮೇಲ್ಪಟ್ಟ ಮಹಿಳೆಯರು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಈಗ ವ್ಯಾಕ್ಸಿನೇಷನ್ ಲಭ್ಯವಿದ್ದು, ಬಾಲಕಿಯರಿಗೆ 9 ನೇ ವರ್ಷದಿಂದ 14 ನೇ ವರ್ಷದೊಳಗೆ ಎರಡು ಬಾರಿ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳಬೇಕು. ಇದರಿಂದ ಶೇ.99 ರಷ್ಟು ಗರ್ಭಕಂಠದ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದು ಹಾಗೇಯೆ 16 ರಿಂದ 25 ನೇ ವರ್ಷದೊಳಗಡೆ 3 ಬಾರಿ ವ್ಯಾಕ್ಸಿನೇಷನ್ ತೆಗೆದುಕೊಳ್ಳಬೇಕಾಗಿದೆ. ಲೈಂಗಿಕ ಸುರಕ್ಷತೆಯು ಬಹಳ ಮುಖ್ಯ ಎಂದರು.

ಅಧ್ಯಕ್ಷತೆಯನ್ನು ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಹಾಲಮ್ಮ.ಎಂ ವಹಿಸಿ ಮಾತನಾಡಿ, ಕ್ಯಾನ್ಸರ್ ಕಾಯಿಲೆ ಬಗ್ಗೆ ಕೇವಲ ಹೆಣ್ಣು ಮಕ್ಕಳು ಮಾತ್ರವಲ್ಲ ಗಂಡು ಮಕ್ಕಳು ಕೂಡ ತಿಳಿದುಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಸಮಾಜದ ಸ್ವಾಸ್ಥ್ಯಕ್ಕಾಗಿ ಹೆಣ್ಣು ಗಂಡು ಬೇಧವಿಲ್ಲದಂತೆ ಆರೋಗ್ಯದ ಬಗ್ಗೆ ಅರಿವಿಗಾಗಿ ಕಾಲೇಜಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಮಂಜುನಾಥ್ ಕೆ.ಎನ್, Iಕಿಂಅ ಸಂಯೋಜಕ ಪ್ರೊ. ಮಂಜುನಾಥ್ ಹೆಚ್.ಪಿ ಉಪಸ್ಥಿತರಿದ್ದರು. ಉಪನ್ಯಾಸಕರಾದ ಶ್ರಿಂಚನ ಹೆಚ್.ಎಸ್, ಕುಮಾರಸ್ವಾಮಿ ಎಸ್.ಎಸ್, ಗೌರಿಶಂಕರ್ ಬಿ.ಆರ್, ರಮ್ಯ, ಎಫ್‌ಪಿಎಐನ ನಿರ್ದೇಶಕರಾದ ಭಾರತಿ ಚಂದ್ರಶೇಖರ್, ಡಾ. ವರುಣ್ ಸೇರಿದಂತೆ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಉಪನ್ಯಾಸಕ ರವಿ ಎಂ.ಡಿ ಪ್ರಸ್ತಾವಿಕವಾಗಿ ಮಾತನಾಡಿದರು. ಕಾಲೇಜಿಗೆ ಭೇಟಿ ನೀಡಿದ್ದ ಕುವೆಂಪು ವಿವಿ ಕುಲಪತಿಗಳಾದ ಪ್ರೊ. ಶರತ್ ಅನಂತಮೂರ್ತಿ ಅವರು ಕಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಒಂದು ಸಾವಿರ ಮಾಸ್ಕ್ ಗಳನ್ನು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕೆಲವು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಮಾಸ್ಕ್ ವಿತರಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments