Homeರಾಜಕೀಯಸ್ಟಿಂಗ್ ಆಪರೇಷನ್ ಸುಳ್ಳಾಗಿದ್ದರೆ ಸಿದ್ದರಾಮಯ್ಯ ಮತ್ತೆ ಸಿಎಂ ಯಾಕಾಗಬಾರದು?!

ಸ್ಟಿಂಗ್ ಆಪರೇಷನ್ ಸುಳ್ಳಾಗಿದ್ದರೆ ಸಿದ್ದರಾಮಯ್ಯ ಮತ್ತೆ ಸಿಎಂ ಯಾಕಾಗಬಾರದು?!

Spread the love

ಶಿವಮೊಗ್ಗ,ಅ.28: ಸ್ಟಿಂಗ್ ಆಪರೇಷನ್ ಸುಳ್ಳು ಎಂದು ಸರ್ಕಾರ ಹೇಳುತ್ತಿದೆ. ಹಾಗಾದರೆ ಸಿದ್ದರಾಮಯ್ಯ ಅವರನ್ನು ಮತ್ತೆ ಸಿಎಂ ಸ್ಥಾನಕ್ಕೆ ಕೂರಿಸಬೇಕು. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸಿದ್ಧವಿದೆಯೇ ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಪ್ರಶ್ನಿಸಿಸಿದ್ದಾರೆ.

ಅವರು ಬುಧವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳೇ ನಡೆಯುತ್ತಿಲ್ಲ, ಹಗರಣಗಳ ಬಗ್ಗೆ ಚರ್ಚೆಯಾಗಬೇಕು. ಆದರೆ ಜನರ, ಮಾಧ್ಯಮಗಳ ಗಮನವನ್ನು ಬೇರೆಡೆಗೆ ತಿರುಗಿಸಲು ಈ ರೀತಿಯ ಸ್ಟಿಂಗ್ ಆಪರೇಷನ್ ಕುತಂತ್ರ ನಡೆಸಲಾಗುತ್ತಿದೆ. ಇದು ಎಂದಿಗೂ ನಡೆಯಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಅವರ ಮೊದಲ ಐದು ವರ್ಷದ ಆಡಳಿತದಲ್ಲಿ ನಾನು ಶಾಸಕನಾಗಿದ್ದೆ. ಹಿಂದುಳಿದ ವರ್ಗಗಳ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಎಲ್ಲಾ ಜಾತಿ, ವರ್ಗ, ಧರ್ಮದವರನ್ನು ಸಮಾನವಾಗಿ ಕಂಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಸಾಕಷ್ಟು ಅನುದಾನ ಅವರಿಂದ ಪಡೆದಿದ್ದೇನೆ. ಅಂತಹ ನಾಯಕರನ್ನು ಸ್ಟಿಂಗ್ ಆಪರೇಷನ್ ಮೂಲಕ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲಾಯಿತು ಎಂಬುದಾದರೆ ಇದು ಖಂಡನೀಯ,

ಈಗ ಸರ್ಕಾರದಲ್ಲಿ ಮುಖ್ಯಮಂತ್ರಿಗಳು ಬದಲಾಗುತ್ತಾರಾ? ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡುತ್ತಾ? ಎಂಬ ಪರಿಸ್ಥಿತಿ ಬಂದಿದೆ. ಈ ಹಿನ್ನೆಲೆಯಲ್ಲಿ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿವೆಯೇ ಎಂಬ ಅನುಮಾನ ಬರುತ್ತಿದೆ. ಇದರ ಬಗ್ಗೆಯೂ ಸರಿಯಾದ ರೀತಿಯಲ್ಲಿ ತನಿಖೆ ಆಗಬೇಕು” ಎಂದು ಹೇಳಿದರು.

ಈ ಪ್ರಕರಣದಲ್ಲಿ ನಮ್ಮ ನಾಯಕರಾದ ಕುಮಾರಣ್ಣನವರು ಮೊದಲೇ ಸಿಬಿಐ ತನಿಖೆಗೆ ಒತ್ತಾಯ ಮಾಡಿದ್ದರು. ಕೊನೆಗೆ ಗೃಹಮಂತ್ರಿಗಳು ಸಿಬಿಐಗೆ ಪೊಲೀಸರನ್ನೇ ನಾವೇ ಕೊಡುತ್ತೇವೆ ಎಂದರು. ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಾದರೂ ತನಿಖೆ ಮಾಡಿ ಎಂದು ನಾವು ಒತ್ತಾಯಿಸಿದ್ದೆವು. ಆದರೆ ಇಲ್ಲಿಯವರೆಗೂ ತನಿಖೆ ಪ್ರಾರಂಭವಾದ ಲಕ್ಷಣವೇ ಕಾಣುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಇವತ್ತು ದಿನನಿತ್ಯ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ನೈಸ್ ಹಗರಣ ಇರಬಹುದು, ಬಿಡದಿ ವಿಚಾರ ಇರಬಹುದು, ರೈತರ ಸಮಸ್ಯೆಗಳು ಇರಬಹುದು – ಇವೆಲ್ಲವೂ ಸೈಡ್‌ಲೈನ್ ಆಗುತ್ತಿದೆ. ಜನತೆಗೆ, ರೈತರಿಗೆ ಸಂಬಂಧಿಸಿದ ನಿಜವಾದ ಸಮಸ್ಯೆಗಳ ಬಗ್ಗೆ ಪ್ರಶ್ನೆ ಎತ್ತಿದಾಗ, ಜನರ ಮತ್ತು ಮಾಧ್ಯಮ ಪ್ರತಿನಿಧಿಗಳ ದಿಕ್ಕನ್ನು ಬೇರೆಡೆಗೆ ತಿರುಗಿಸುವ ಈ ರೀತಿಯ ಕುಕೃತ್ಯ ಯಾವತ್ತೂ ನಡೆಯಬಾರದು” ಎಂದು ಅವರು ಕಿಡಿಕಾರಿದರು.

ಸುದ್ಧಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ, ಪ್ರಮುಖರಾ ದೀಪಕ್ ಸಿಂಗ್, ವಾಜೀದ್, ನರಸಿಂಹ, ನಿಖಿಲ್, ಸಂಗಯ್ಯ, ಗೀತಾ ಸತೀಶ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments