Homeಅಪರಾಧಪಡಿತರ ಅಕ್ಕಿ ಅಕ್ರಮ ದಂಧೆ, ೨೦ ಕ್ವಿಂಟಾಲ್ ಅಕ್ಕಿ ಜಪ್ತಿ

ಪಡಿತರ ಅಕ್ಕಿ ಅಕ್ರಮ ದಂಧೆ, ೨೦ ಕ್ವಿಂಟಾಲ್ ಅಕ್ಕಿ ಜಪ್ತಿ

Spread the love

ರಾಯಚೂರು,ಜು.8: ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆದಿರುವ ಪಡಿತರ ಅಕ್ಕಿ ಅಕ್ರಮ ದಂಧೆಯ ಮೇಲೆ ರಾಯಚೂರು ತಾಲೂಕಿನ ಪತ್ತೆಪೂರದಲ್ಲಿ ಆಹಾರ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳಿಂದ ದಾಳಿ ನಡೆಸಿದ್ದು, 20 ಕ್ವಿಂಟಾಲ್ ಅಕ್ರಮ ಪಡಿತರ ಅಕ್ಕಿ ಜಪ್ತಿ ಮಾಡಿದ್ದಾರೆ.
ದೇವದುರ್ಗದ ಜಾಲಹಳ್ಳಿಯಿಂದ ರಾಯಚೂರು ನಗರಕ್ಕೆ ಅಕ್ರಮವಾಗಿ ಅಕ್ಕಿ ಸಾಗಣೆ ಮಾಡಲಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಪಡಿತರ ಅಕ್ಕಿ ಕಡಿಮೆ ಬೆಲೆಗೆ ಕೊಂಡು ರೈಸ್ ಮಿಲ್‌ಗಳಿಗೆ ಮಾರಾಟ ಮಾಡುವ ದಂಧೆ ನಡೆಯುತ್ತಿತ್ತು. ಈ ವೇಳೆ ಯಾರಾದ್ರೂ ತಡೆದರೆ ದಾಳಿ ಮಾಡಲು ರಾಡು, ಕಾರದಪುಡಿ ಬಳಕೆ ಮಾಡುತ್ತಿದ್ದರು.
ಗ್ರಾಮಸ್ಥರ ಈ ಮಾಹಿತಿ ಮೇರಗೆ ರಾಯಚೂರು ತಾಲೂಕಿನ ಪತ್ತೆಪೂರದಲ್ಲಿ ಆಹಾರ ನಿರೀಕ್ಷಕ ಖಲೀಲ್ ನೇತೃತ್ವದಲ್ಲಿ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳಿಂದ ದಾಳಿ ನಡೆಸಿದ್ದು, ಬುಲೆರೋ ಪಿಕ್ ಅಪ್ ವಾಹನದಲ್ಲಿ ಸಾಗಿಸುತ್ತಿದ್ದ 20 ಕ್ವಿಂಟಾಲ್ ಅಕ್ರಮ ಪಡಿತರ ಅಕ್ಕಿ ಜಪ್ತಿ ಮಾಡಿದ್ದಾರೆ. ಈ ವೇಳೆ ವಾಹನ ಬಿಟ್ಟು ಚಾಲಕ ಸ್ಥಳದಿಂದ ಪರಾರಿಯಾಗಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments