ಉಡುಪಿ,ಜು.8: ವಿಶೇಷ ಸಂಪುಟ ಸಭೆಯಲ್ಲಿ ನಾನೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಹಾಗಾಗಿ ಈ ಕುರಿತು ಪದೇ ಪದೇ ಚರ್ಚೆ ಮಾಡುವುದು ಅನಗತ್ಯವಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಉಡುಪಿಯ ಬೆಳ್ಮಣ್ಣು ದೇವಸ್ಥಾನದಲ್ಲಿ ಬಳಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಯಾವುದೇ ರೀತಿಯ ಬದಲಾವಣೆಯನ್ನು ನಾವು ಬಯಸುವುದಿಲ್ಲ. ನಾನು ಹೆಚ್ಚು ರಾಜಕೀಯ ಮಾತನಾಡಲು ಹೋಗಲ್ಲ. ಗೃಹ ಖಾತೆಯನ್ನು ಮೂರನೇ ಬಾರಿಗೆ ನನಗೆ ಕೊಟ್ಟಿದ್ದಾರೆೆ. ಜವಾಬ್ದಾರಿಯಿಂದ ನಾನು ಕೆಲಸ ಮಾಡುತ್ತಿದ್ದೇನೆ ಎಂದರು.
ಶ್ರೀ ಎಂ ರಂಭಾಪುರಿ ಹೇಳಿಕೆ ವಿಚಾರ ಕುರಿತು ಸ್ಪಂದಿಸಿ ಅವರು, ಬಹಳ ಜನ ಹೇಳ್ತಾರೆ ಮುಖ್ಯಮಂತ್ರಿ ಅವರಾಗಬೇಕು, ಇವರಾಗಬೇಕೆಂದು. ಅವರಿಗೆ ಇಷ್ಟ ಬಂದತೆ ವ್ಯಾಖ್ಯಾನಗಳನ್ನು ಕೊಡುತ್ತಾರೆ. ಅದೆಲ್ಲವೂ ಸತ್ಯ ಅನ್ನೊಕ್ಕೆ ಆಗುತ್ತಾ.
ಸಿಎಂ ಮತ್ತು ಡಿಸಿಎಂ ಅಫೀಸಿಯಲ್ ಭೇಟಿಗಾಗಿ ದೆಹಲಿಗೆ ಹೊಗ್ತಾ ಇದ್ದಾರೆ. ಸಿಎಂ ಗೆ ಜ್ವರ ಕಮ್ಮಿಯಾಗಿದೆ. ಹಾಗಾಗಿ ಕಾರ್ಯನಿಮಿತ್ತ ಹೋಗ್ತಾರೆ ಅದರಲ್ಲಿ ಏನು ವಿಶೇಷವಿಲ್ಲ. ಮಾಧ್ಯಮಗಳು ಊಹೆ ಮಾಡಿದ ಹಾಗೆ ಏನೂ ಇಲ್ಲ ಎಂದರು.
