ಬೆಂಗಳೂರು, ಜು.21: ಧರ್ಮಸ್ಥಳದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ಎಸ್ ಐಟಿ ರಚನೆ ಆಗಿದ್ದು, ಸರ್ಕಾರ ನಿಸ್ಪಪಕ್ಷಪಾತವಾಗಿ ತನಿಖೆ ನಡೆಸಲಿ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಸೋಮವಾರ ಮಾಧ್ಯಮಗಾರರಿಗೆ ಪ್ರತಿಕ್ರಿಯಿಸಿದ ಅವರು, ಧರ್ಮಸ್ಥಳದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸರ್ಕಾರ ಎಸ್ಐಟಿ ರಚನೆ ಮಾಡಿದ್ದು, ಎಲ್ರೂ ಸ್ವಾಗತ ಮಾಡಿದ್ದಾರೆ. ಧರ್ಮಸ್ಥಳ ಧರ್ಮದರ್ಶಿ ವಕ್ತಾರರೂ ಕೂಡ ಸ್ವಾಗತ ಮಾಡಿದ್ದಾರೆ. ನಾವೂ ಕೂಡ ಸ್ವಾಗತ ಮಾಡ್ತೇವೆ.
ಹೆಣ ಹೂಳಿರುವ ವ್ಯಕ್ತಿ ಅವಶೇಷಗಳನ್ನು ಹೊರ ತೆಗೆಯುತ್ತೆನೆ ಎಂದು ಬಂದಿದ್ದಾನೆ. ಆ ಹೆಣಗಳ ಹೂಳಲು ಯಾರ ಒತ್ತಡ ಇತ್ತು, ಯಾರು ಹೇಳಿದ್ರು ಅಂತ ಮೊದಲು ಹೇಳಬೇಕು.
ಅಲ್ಲಿ ನಡೆದಿರುವ ಪ್ರಕರಣ, ಅನಾಮಧೇಯನ ಹೇಳಿಕೆ ಈ ವಿಚಾರದಲ್ಲಿ ಕ್ರಮ ಕೈಗೊಳ್ಳಲೇಬೇಕು ಎಂದರು
