Homeರಾಜ್ಯ’ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಬಿಜೆಪಿ ಸದಸ್ಯತ್ವ ಪಡೆಯಲಿ’ :ಕಾಂಗ್ರೇಸ್ ಮುಖಂಡ ಯೋಗೀಶ್ ...

’ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಬಿಜೆಪಿ ಸದಸ್ಯತ್ವ ಪಡೆಯಲಿ’ :ಕಾಂಗ್ರೇಸ್ ಮುಖಂಡ ಯೋಗೀಶ್ – ‘ಯೋಗೀಶ್ ಸಣ್ಣತನ ಬಿಡಲಿ, ಅವರಿಂದ ನಾನು ರಾಜಕಾರಣ ಕಲಿಯಬೇಕಿಲ್ಲ’: ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ

Spread the love

’ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಬಿಜೆಪಿ ಸದಸ್ಯತ್ವ ಪಡೆಯಲಿ’
:ಕಾಂಗ್ರೇಸ್ ಮುಖಂಡ ಯೋಗೀಶ್

‘ಯೋಗೀಶ್ ಸಣ್ಣತನ ಬಿಡಲಿ, ಅವರಿಂದ ನಾನು ರಾಜಕಾರಣ ಕಲಿಯಬೇಕಿಲ್ಲ’:ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ

ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್ ಷಡಾಕ್ಷರಿ ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೇಸ್ ಮುಖಂಡ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದ ಪರಾಜಿತ ಕಾಂಗ್ರೇಸ್ ಅಭ್ಯರ್ಥಿ ಹೆಚ್. ಸಿ ಯೋಗೀಶ್ ಆರೋಪಿಸಿದ್ದಾರೆ.

ಸುದ್ದಿಗೋಷ್ಟಿಯಲ್ಲಿಂದು ಮಾತನಾಡಿದ ಅವರು, ಇತ್ತೀಚೆಗೆ ಸರ್ಕಾರಿ ನೌಕರರ ವಿಕಾಸ ಕೇಂದ್ರದಲ್ಲಿ ಸಂಸದ ಬಿ.ವೈ ರಾಘವೇಂದ್ರ ಅವರ ಹುಟ್ಟು ಹಬ್ಬ ಆಚರಣೆ ಸಮಾರಂಭದಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾಗಿ ಷಡಾಕ್ಷರಿ ಅವರು ಭಾಗವಹಿಸಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಷಡಾಕ್ಷರಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗುವ ಮುಂಚೆ ಯಡಿಯೂರಪ್ಪ, .ಬಿ ವೈ ರಾಘವೇಂದ್ರ ಅವರ ಪಿ.ಎ( ಆಪ್ತ ಸಹಾಯಕ) ಆಗಿ ಕೆಲಸ ಮಾಡಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಈಗ ಸರ್ಕಾರಿ ನೌಕರರ ಸಂಘದ ರಾಜ್ಯ ಅಧ್ಯಕ್ಷರಾಗಿ ಬಿಜೆಪಿ ಪಕ್ಷದ ಕಾರ್ಯಕರ್ತರಂತೆ ವರ್ತಿಸುವುದು ಸರಿಯಲ್ಲ. ಇದು ನೌಕರ ವಲಯದಲ್ಲಿ ಗೊಂದಲಕ್ಕೆ ಕಾರಣವಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷರು ಷಡಾಕ್ಷರಿ ಅವರಿಗೆ ಬಿಜೆಪಿ ಸದಸ್ಯತ್ವ ಕೊಟ್ಟು ಪಕ್ಷಕ್ಕೆ ಸೇರಿಸಿಕೊಳ್ಳಲಿ ಎಂದು ಯೋಗೀಶ್ ಆಗ್ರಹಿಸಿದರು.

ಷಡಾಕ್ಷರಿ ಅವರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಇದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಯೋಗೀಶ್ ಬಿಜೆಪಿ. ಆರ್ ಎಸ್ ಎಸ್ ನವರಿಗೆ ಕಾಂಗ್ರೆಸ್ ನಲ್ಲಿ ಜಾಗವಿಲ್ಲ . ನಾನು ವಿಧಾನಸಭಾ ಚುನಾವಣೆಗೆ ಟಿಕೆಟ್ ಗೆ ಅರ್ಜಿ ಹಾಕಿದ್ದಾಗ ಅರ್ಜಿ ಹಾಕಿದ ಇತರರು ಮೂಲ ಕಾಂಗ್ರೇಸ್ಸಿಗರೇ ಆಗಿದ್ದರು. ಕಾಂಗ್ರೆಸ್ ಪಕ್ಷದ ನಿಷ್ಠಾವಂತರಿಗೆ ಮಾತ್ರ ಮಣೆ ಹಾಕುತ್ತದೆ ಎಂದರು.

ಯೋಗೀಶ್ ಸಣ್ಣತನ ಬಿಡಲಿ, ಅವರಿಂದ ನಾನು ರಾಜಕಾರಣ ಕಲಿಯಬೇಕಿಲ್ಲ’: ಷಡಾಕ್ಷರಿ

ಶಿವಮೊಗ್ಗ: ರಾಜಕಾರಣಕ್ಕೆ ಬರುವುದು ಹೇಗೆಂದು ನನಗೆ ಗೊತ್ತಿದೆ. ಅದನ್ನು ಯೋಗೀಶ್ ಅವರಿಂದ ಕಲಿಯಬೇಕಿಲ್ಲ. ಸದ್ಯ ನಾನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷನಾಗಿದ್ದು ನನಗೆ ಅದರ ಇತಿ ಮಿತಿಗಳ ಅರಿವಿದೆ ಎಂದು ಸಿ.ಎಸ್ ಷಡಾಕ್ಷರಿ ಕಾಂಗ್ರೆಸ್ ಮುಖಂಡ ಹೆಚ್.ಸಿ ಯೋಗೀಶ್‌ಗೆ ತಿರುಗೇಟು ನೀಡಿದ್ದಾರೆ.

ಸಂಸದ ಬಿ.ವೈ ರಾಘವೇಂದ್ರ ಅವರ ಹುಟ್ಟುಹಬ್ಬ ಸಮಾರಂಭದಲ್ಲಿ ಭಾಗವಹಿಸಿ ಬಿಜೆಪಿ ಪರವಾಗಿದ್ದಾರೆ ಎಂದು ಯೋಗೀಶ್ ಅವರು ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿರುವ ಷಡಾಕ್ಷರಿ ಅವರು ಸಿದ್ದಗಂಗಾಮಠಕ್ಕೆ ಅಕ್ಕಿ ಸಂಗ್ರಹಣೆ ಉದ್ದೇಶದಿಂದ ನಡೆದ ಸಭೆಯಲ್ಲಿ ನಾನು ಭಾಗವಹಿಸಿದ್ದು, ಅದನ್ನು ತಿರುಚಿ ಹೇಳಿಕೆ ನೀಡುತ್ತಿರುವ ಯೋಗೀಶ್ ಅವರದ್ದು ಸಣ್ಣತನ, ನಾನು ರಾಜಕಾರಣದ ಬಗ್ಗೆ ಯೋಚಿಸಿಲ್ಲ. ಆದರೆ ರಾಜಕಾರಣಕ್ಕೆ ಬರುವುದಾದರೆ ಅದು ನನಗೆ ಗೊತ್ತಿದೆ. ಅದನ್ನು ಯೋಗೀಶ್ ಅವರಿಂದ ಕಲಿಯಬೇಕಿಲ್ಲ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments