Homeಜಿಲ್ಲೆಬಿಜೆಪಿ ನ್ಯಾಯದ ಪರವಾಗಿದೆ ಎಂದು ಕಾಣುತ್ತಿಲ್ಲ: ನಟ ಚೇತನ್

ಬಿಜೆಪಿ ನ್ಯಾಯದ ಪರವಾಗಿದೆ ಎಂದು ಕಾಣುತ್ತಿಲ್ಲ: ನಟ ಚೇತನ್

Spread the love

ತೀರ್ಥಹಳ್ಳಿ, ಆ.18: ಬಿಜೆಪಿಯವರು ತಮ್ಮ ಅಸ್ತಿತ್ವವನ್ನು ಬೆಳೆಸಿಕೊಳ್ಳುವುದಕ್ಕಾಗಿ ಪಾದಯಾತ್ರೆ  ಮಾಡುತ್ತಿದ್ದು, ಅವರು ನ್ಯಾಯದ ಪರವಾಗಿ ಇದ್ದೀರಾ ಎಂಬುದು ಕಾಣುತ್ತಿಲ್ಲ ಎಂದು ನಟ ಚೇತನ್ ಟೀಕಿಸಿದರು.

ಸೋಮವಾರ  ತೀರ್ಥಹಳ್ಳಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಏಳಿಗೆಗೋಸ್ಕರ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಸಲುವಾಗಿ ಅನ್ಯಾಯದ ವಿರುದ್ಧ ಸಮ ಸಮಾಜ ಕಟ್ಟಲು ಇಲ್ಲಿರುವ ಸಮಾಜಮುಖಿ ಚಿಂತಕರು, ಹೋರಾಟಗಾರರು ಹಾಗೂ  ಸಮಾನಮನಸ್ಕಾರರನ್ನು ಸೇರಿಸಿ ಸಭೆ ನಡೆಸಿ ಹೋರಾಟವನ್ನು ರೂಪಿಸಲಾಗಿದೆ. ಈ ಹೋರಾಟ ಕಾಗೋಡು ಚಳುವಳಿ ಆರಂಭವಾದ ಶಿವಮೊಗ್ಗ ಜಿಲ್ಲೆಯಿಂದ ಪ್ರಾರಂಭವಾಗುತ್ತದೆ. ನಂತರ  ಸಾಗರ ಸೊರಬ ಶಿಕಾರಪುರದಲ್ಲೂ ಕೂಡ ಸಭೆ ನಡೆಸಲಿದ್ದೇವೆ ಎಂದರು.

ಧರ್ಮಸ್ಥಳದ ವಿಚಾರದಲ್ಲಿ ಬಹಳ ದೊಡ್ಡ ನ್ಯಾಯ ಸಿಗಬೇಕು. ದೂರುದಾರರ ಗುರುತಿಸಿ ಪಾಯಿಂಟ್ ನಿಂದ ಮಾತ್ರವಲ್ಲದೆ ಬೇರೆ ಬೇರೆ ದೂರುದಾರರಿಂದಲೂ ಮಾಹಿತಿ ಸಿಕ್ತಾ ಇದೆ. ಇದಲ್ಲದೆ 2000 ರಿಂದ 2018 ರ ಇಸವಿಯವರೆಗೂ ಪೊಲೀಸ್ ನವರು ಎಷ್ಟೊಂದು ಅನ್ ಐಡೆಂಟಿಫೈ ಡೆಡ್ ಬಾಡಿಗಳನ್ನು ದಾಖಲಾತಿಗಳನ್ನು ಅಳಿಸಿ ಹಾಕಿದ್ದಾರೆ ಎಂಬುದು ಮಾಹಿತಿ ತಿಳಿದು ಬರುತ್ತಿದ್ದು, ಹಿನ್ನೆಲೆಯಲ್ಲಿ ನಡೆಯಬಾರದು ನಡೆದಿದೆ ಎನ್ನುವುದು ಕಾಣಿಸುತ್ತಿದೆ ಎಂದರು.

ನಾವು ಯಾವ ದೇವಸ್ಥಾನದ ವಿರುದ್ಧವೂ ಅಲ್ಲ ಧರ್ಮದ ವಿರುದ್ಧವೂ ಅಲ್ಲ. ಎಲ್ಲಾ ಧರ್ಮದವರು ಹಾಗೂ ಎಲ್ಲಾ ಧರ್ಮದ ಮೇಲೆ ನಂಬಿಕೆ ಇರುವವರು ನಮ್ಮ ಜೊತೆ ಸೇರಿದ್ದಾರೆ. ಧರ್ಮಸ್ಥಳ ಎಂಬ ಊರಿನಲ್ಲಿ ಆಗಿರುವ ಆಸಹಜ ಸಾವಿಗೆ ನ್ಯಾಯ ಸಿಗಬೇಕು ಎಸ್ಐಟಿ ತನಿಖೆ ಮುಂದುವರಿಸಬೇಕು.

ಇದು ಕೇವಲ ಒಂದು ಧರ್ಮದ ಒಂದು ಸಿದ್ಧಾಂತಕ್ಕೆ ಸಿಮೀತನಾಗಿ ಹೋರಾಟ ಮಾಡುತ್ತಿಲ್ಲ. ಕರ್ನಾಟಕ ರಾಜ್ಯಾದ್ಯಂತ ನಾಯಕನಾಗಿ ಹೋರಾಟ ಮಾಡುತ್ತಿದ್ದೇವೆ. ಎಸ್ ಐ ಟಿ ರವರು ಈ ತನಿಖೆಯಲ್ಲಿ ಉತ್ತಮವಾಗಿ ಕೆಲಸ ಮಾಡಬೇಕು ಎಂದರು.

ಬಿಜೆಪಿಯವರು ಈ ಬಗ್ಗೆ ಹೋರಾಟ ಮಾಡುತ್ತಿದ್ದಾರೆ, ಮಾಡಲಿ. ಬಿಜೆಪಿಯವರು ಹೇಳಿದ ತಕ್ಷಣ ಯಾವುದು ಸತ್ಯವಲ್ಲ. ಬಿಜೆಪಿಯವರು ತಮ್ಮ ಅಸ್ತಿತ್ವವನ್ನು ಬೆಳೆಸಿಕೊಳ್ಳುವುದಕ್ಕಾಗಿ ಮತ್ತು ತಮ್ಮ ನಾಯಕತ್ವದ ಅಸ್ತಿತ್ವಕ್ಕಾಗಿ ಹೋರಾಟ ಮಾಡುತ್ತಿರಬಹುದು. ಅವರು ಪಾದಯಾತ್ರೆ  ಮಾಡಲಿ ಅದಕ್ಕೆ ಪ್ರತಿಯೊಬ್ಬರಿಗೂ ಹಕ್ಕು ಇದೆ. ಆದರೆ ಅವರು ನ್ಯಾಯದ ಪರವಾಗಿ ಇದ್ದೀರಾ ಎಂಬುದು ಕಾಣುತ್ತಿಲ್ಲ ಎಂದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments