Homeರಾಜ್ಯಹಾಸ್ಟೆಲ್ ಗೆ ಅನುದಾನ, ವೇದ ವಿವಿ , ಕೊಲ್ಲೂರು ಕಾರಿಡಾರ್ ಯೋಜನೆಗೆ ಒತ್ತು: ಕೇಂದ್ರ ಸಚಿವರೊಂದಿಗೆ...

ಹಾಸ್ಟೆಲ್ ಗೆ ಅನುದಾನ, ವೇದ ವಿವಿ , ಕೊಲ್ಲೂರು ಕಾರಿಡಾರ್ ಯೋಜನೆಗೆ ಒತ್ತು: ಕೇಂದ್ರ ಸಚಿವರೊಂದಿಗೆ ಸಂಸದ ಬಿವೈ ಆರ್ ಚರ್ಚೆ

Spread the love
ನವದೆಹಲಿ, ಡಿ.11: ಇಂದು ಕೇಂದ್ರ ಶಿಕ್ಷಣ ಸಚಿವ  ಧರ್ಮೇಂದ್ರ ಪ್ರಧಾನ ಜೀ ಅವರನ್ನು ಭೇಟಿ ಮಾಡಿದ ಸಂಸದ ಬಿ.ವೈ.ರಾಘವೇಂದ್ರ ಶಿವಮೊಗ್ಗ ಮತ್ತು ರಾಜ್ಯದ ಶಿಕ್ಷಣ ಕ್ಷೇತ್ರಕ್ಕೆ ಸಂಬAಧಿಸಿದ ಹಲವು ಪ್ರಮುಖ ವಿಷಯಗಳ ಕುರಿತು ಕುರಿತು ಚರ್ಚೆ ನಡೆಸಿದರು.
ಕುವೆಂಪು ವಿಶ್ವವಿದ್ಯಾಲಯದ ಸುಮಾರು 3,೦೦೦ ಗ್ರಾಮೀಣ ಮತ್ತು ಓಬಿಸಿ ವಿದ್ಯಾರ್ಥಿಗಳಿಗೆ ಗಂಭೀರ ವಸತಿ ಸಮಸ್ಯೆ ಎದುರಾಗುತ್ತಿರುವುದರಿಂದ, ಓಬಿಸಿ ವಿದ್ಯಾರ್ಥಿಗಳ ವಸತಿ ಗೃಹ ನಿರ್ಮಾಣಕ್ಕೆ ಯುಜಿಸಿ ವಿಶೇಷ ಅನು ದಾನ ಮಂಜೂರಾತಿ, ಶಿವಮೊಗ್ಗದ ಕೇಂದ್ರ ವಿದ್ಯಾಲಯದಲ್ಲಿ ಎಲ್ಲಾ ತರಗತಿಗಳಿಗೆ ಎರಡು ಹೆಚ್ಚುವರಿ ಸೆಕ್ಷನ್‌ಗಳನ್ನು ಅನುಮೋದಿಸಲಾಗಿದೆ; ಇದಕ್ಕಾಗಿ ಶಾಶ್ವತ ಕಟ್ಟಡಗಳು ಮತ್ತು ಹೊಸ ಮೂಲಸೌಕರ್ಯ ಒದಗಿಸಲು ಸಹಕಾರ ಕೋರಿ ಮನವಿ ಮಾಡಿದರು.
ಕರ್ನಾಟಕದ ಏಕೈಕ ಸಂಸ್ಕೃತ ಭಾಷಾಭಿಮಾನಿ ಗ್ರಾಮವಾದ ಮತ್ತೂರು-ಹೊಸಳ್ಳಿಯಲ್ಲಿ ರಾಷ್ಟ್ರೀಯ ಆದರ್ಶ ವೇದ ವಿದ್ಯಾಲಯ ಸ್ಥಾಪನೆಗೆ ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಸ್ತಾವನೆಯನ್ನು ಅನುಮೋದಿಸಲು ಸಂಸದರು ಬೇಡಿಕೆಯನ್ನು ಮಂಡಿಸಿದರು.
2009 ರ ಪೂರ್ವದಲ್ಲಿ ಎಂ.ಫಿಲ್. ಪದವಿ ಪಡೆದ,  15ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರು  ಪದವಿಯನ್ನು ನೆಟ್ ಗೆ ಸಮಾನವಾಗಿ ಪರಿಗಣಿಸಲು, ಮಹಾರಾಷ್ಟ್ರ ಸರ್ಕಾರದ ಉದಾಹರಣೆಯನ್ನು ಅನುಸರಿಸಿ ಮಾನ್ಯತೆ ನೀಡುವಂತೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.
ಪಿ-ಪೋಷನ್ ಯೋಜನೆಯ ಅಡಿಯಲ್ಲಿ ಕೆಲಸ ಮಾಡುವ 25ಲಕ್ಷಕ್ಕೂ ಹೆಚ್ಚು ಕುಕ್-ಕಮ್-ಹೆಲ್ಪರ್ಸ್ಗಳಿಗೆ 2009 ರಿಂದ ಬದಲಾಗದ ಕೇವಲ 600  ರೂ ಕೇಂದ್ರದ ಹಂಚಿಕೆ ದೊರೆಯುತ್ತಿರುವುದರಿಂದ, ಸಂಭಾವನೆ ಹೆಚ್ಚಿಸುವುದು, ಆರೋಗ್ಯ ವಿಮೆ, ಸಾಮಾಜಿಕ ಭದ್ರತೆ ಮತ್ತು ಕಾನೂನುಬದ್ಧ ಹುದ್ದೆ ನೀಡುವಂತೆ, ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ಸೇವೆಯಲ್ಲಿ ಇದ್ದ ಶಿಕ್ಷಕರಿಗೆ TET ಕಡ್ಡಾಯವಾಗಿರುವುದರಿಂದ ಉಂಟಾದ ಆತಂಕಕ್ಕೆ ಪರಿಹಾರವಾಗಿ, TET ನಿಯಮ ಜಾರಿಗಿಂತ ಮೊದಲೇ ನೇಮಕಗೊಂಡ ಶಿಕ್ಷಕರಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ ಬಿ.ವೈ.ರಾಘವೆಂದ್ರ ಅವರು, ಈ ಬೇಡಿಕೆಗಳಿಗೆ ಸ್ಪಂದಿಸಿದ ಸಚಿವರುಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments