Homeರಾಜ್ಯಮುಖ್ಯಮಂತ್ರಿಯಾಗಿ ಅರಸು ದಾಖಲೆ ಮುರಿದ ಸಿದ್ದರಾಮಯ್ಯ: ಅಭಿಮಾನಿ ಬಳಗದಿಂದ  ಬಿರಿಯಾನಿ, ಲಡ್ಡು ಹಂಚಿ ಸಂಭ್ರಮ  "ಅಂದು...

ಮುಖ್ಯಮಂತ್ರಿಯಾಗಿ ಅರಸು ದಾಖಲೆ ಮುರಿದ ಸಿದ್ದರಾಮಯ್ಯ: ಅಭಿಮಾನಿ ಬಳಗದಿಂದ  ಬಿರಿಯಾನಿ, ಲಡ್ಡು ಹಂಚಿ ಸಂಭ್ರಮ  “ಅಂದು ಅರಸು ಇಂದು ಸಿದ್ದರಾಮಯ್ಯ “

Spread the love

ಮುಖ್ಯಮಂತ್ರಿಯಾಗಿ ಅರಸು ದಾಖಲೆ ಮುರಿದ ಸಿದ್ದರಾಮಯ್ಯ: ಅಭಿಮಾನಿ ಬಳಗದಿಂದ  ಬಿರಿಯಾನಿ, ಲಡ್ಡು ಹಂಚಿ ಸಂಭ್ರಮ 

“ಅಂದು ಅರಸು ಇಂದು ಸಿದ್ದರಾಮಯ್ಯ “

ಶಿವಮೊಗ್ಗ: ಮುಖ್ಯಮಂತ್ರಿ, ಅಹಿಂದ ನಾಯಕ ಸಿದ್ಧರಾಮಯ್ಯ ಅವರು 2792 ದಿನ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದು, ಮಾಜಿ ಸಿಎಂ ದೇವರಾಜ ಅರಸು ಅವರ ದಾಖಲೆ ಸರಿಗಟ್ಟಿದ ಸಂಭ್ರಮದ ಅಂಗವಾಗಿ ಸಿದ್ಧರಾಮಯ್ಯ ಅಭಿಮಾನಿಗಳಿಂದ ಇಂದು ಅಶೋಕ ವೃತ್ತ, ಮೆಗ್ಗಾನ್ ಆಸ್ಪತ್ರೆ ಮತ್ತು ವಿವಿಧೆಡೆ ನಾಟಿ ಕೋಳಿ ಬಿರಿಯಾನಿ ಮತ್ತು ಸಿಹಿಯನ್ನು ಸಾರ್ವಜನಿಕರಿಗೆ ಹಂಚಲಾಯಿತು.
ಕಾಂಗ್ರೆಸ್ ಹಿರಿಯ ಮುಖಂಡ, ಡಿಸಿ ಸಿ ಬ್ಯಾಂಕ್ ನಿರ್ದೇಶಕರಾದ ಎಂ. ಶ್ರೀಕಾಂತ್ ನೇತೃತ್ವದ ಸಿದ್ದರಾಮಯ್ಯ ಅಭಿಮಾನ ಬಳಗದ ವತಿಯಿಂದ  ಬಿರಿಯಾನಿ, ಲಡ್ಡು ಹಂಚಲಾಯಿತು.
ಈ  ಸಂದರ್ಭದಲ್ಲಿ ಮಾತನಾಡಿದ ಎಂ. ಶ್ರೀಕಾಂತ್  ಅವರು, ಅಂದು ಅರಸು ಇಂದು ಸಿದ್ಧರಾಮಯ್ಯ ಬಡವರಿಗೆ ನೆಮ್ಮದಿ ಕೊಟ್ಟವರು. ಅವರ ಗ್ಯಾರಂಟಿ ಯೋಜನೆ ಎಲ್ಲರ ಮನೆಗೂ ಈಗಾಗಲೇ ತಲುಪಿದೆ. ನಮ್ಮ ಕಾರ್ಯಕರ್ತರು ಪ್ರತಿ ಮನೆಗೂ ಭೇಟಿ ನೀಡಿ ಆ ಯೋಜನೆಯ ಪ್ರಾಮುಖ್ಯತೆಯನ್ನು ವಿವರಿಸುವ ಕೆಲಸ ಮಾಡಬೇಕು ಎಂದರು.
 ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್. ಪ್ರಸನ್ನಕುಮಾರ್  ಮಾತನಾಡಿ, ಸಿದ್ಧರಾಮಯ್ಯ ನವರು ಎಲ್ಲಾ ಮುಖ್ಯಮಂತ್ರಿಗಳಿಗಿಂತ ಹೆಚ್ಚಿನ ಅವಧಿ ಯಶಸ್ವಿಯಾಗಿ ಮುಖ್ಯಮಂತ್ರಿಗಳಾಗಿ ಇದೀಗ 17 ನೇ ಬಾರಿ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಿದ್ದಾರೆ.. ಅವರಿಗೆ ರಾಜ್ಯದ ಜನರ ಆಶೀರ್ವಾದವಿದೆ. ಉಚಿತ ಅಕ್ಕಿ, ಶಕ್ತಿ ಯೋಜನೆ, ಯುವನಿಧಿ, ಗೃಹಜ್ಯೋತಿ, ಗೃಹಲಕ್ಷ್ಮಿ 5 ಗ್ಯಾರಂಟಿಗಳನ್ನು ನಿರಂತರವಾಗಿ ನೀಡಿ ಯಶಸ್ವಿಯಾಗಿದ್ದಾರೆ. ಶಕ್ತಿ ಯೋಜನೆಯಡಿ ಉಚಿತವಾಗಿ ಬಸ್ ನಲ್ಲಿ ಪ್ರಯಾಣಿಸಿದ ತಾಯಂದಿರು ಮನಪೂರ್ವಕವಾಗಿ ಅವರನ್ನು ಹರಸಿದ್ದಾರೆ. ಕೊಟ್ಟ ಮಾತು ಉಳಿಸಿದ ಏಕೈಕ ಮುಖ್ಯಮಂತ್ರಿ ಅವರು. 96 ಸಾವಿರ ಕೋಟಿ ರೂ.ಗಳ ಗ್ಯಾರಂಟಿ ಯೋಜನೆಯಲ್ಲಿ ಯಾರಿಗೂ ನಯಾಪೈಸೆ ಕಮಿಷನ್ ಇಲ್ಲದೇ ನೇರವಾಗಿ ಫಲಾನುಭವಿಗಳಿಗೆ ಸಿಗುವ ಹಾಗೆ ಮಾಡಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ಮುಖಂಡ ಕೆ. ರಂಗನಾಥ್, ಮಾಜಿ ಮೇಯರ್ ನಾಗರಾಜ್ ಕಂಕಾರಿ, ಮಾಜಿ ಉಪಮೇಯರ್ ಪಾಲಾಕ್ಷಿ, ಕಲೀಂ ಪಾಷಾ,, ಹೆಚ್.ಪಿ. ಗಿರೀಶ್, ಸುವರ್ಣಾ ನಾಗರಾಜ್,, ಶರತ್ ಮರಿಯಪ್ಪ, ದರ್ಶನ್, ಅಜೀಜ್ ಅಹಮ್ಮದ್, ಸಂತೋಷ್, ಚಿದಾನಂದ್, ಲೋಕೇಶ್, ಆರೀಫ್, ರೇಖಾ ರಂಗನಾಥ್, ಕುಮರೇಶ್, ಪವನ್, ರಾಕೇಶ್, ಮತ್ತಿತರರು ಇದ್ದರು.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments