ಶಿವಮೊಗ್ಗ,ಜ.6: ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್ 266 ಮತ್ತು ರಾಯಲ್ ಇಂದ್ರಪ್ರಸ್ಥ ಬಿಲ್ಡರ್ಸ್ಇವರ ಸಹಯೋದೊಂದಿಗೆ ನಂಜಪ್ಪ ಆಸ್ಪತ್ರೆ ಮತ್ತು ರಾಯಲ್ ಇಂದ್ರಪ್ರಸ್ಥ ಬಿಲ್ಡರ್ಸ್, ಪಾನಕ ಗೋಲಿಸೋಡಾ, ಒನೆಲ್, ಎಸೆನ್ಸಿ ದಿ ಬೆಕಲ್ ಲಾಬ್, ಟಿವಿಎಸ್ ಆರ್ಯಾ ಮೋಟಾರ್ಸ್, ಶಲೋಕ್ ಗ್ಯಾಸ್ ಏಜೆನ್ಸಿಮತ್ತು ಲಕ್ಷ್ಯ ಸ್ಕೂಲ್ ಇವುಗಳ ಪ್ರಾಯೋಜಕತ್ವದಲ್ಲಿ “ನಂಜಪ್ಪ ಮೈಲ್ಸ್ ಆಫ್ ಹೋಪ್–ರೈಡ್ ರನ್, ರೀಚೆಲೈವ್ಸ್” ಎಂಬ ಹೆಸರಿನಲ್ಲಿ ಜ.11 ರಂದು ಬೆಳಿಗ್ಗೆ 6 ಗಂಟೆಗೆ ನಗರ ನಂಜಪ್ಪ ಲೈಫ್ ಕೇರ್ ಗಾಡಿಕೊಪ್ಪ ಸಾಗರರಸ್ತೆ ಇಲ್ಲಿ ಮ್ಯಾರಥಾನ್ ಮತ್ತು ಸೈಕ್ಲಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಮುಖ್ಯಸ್ಥರಾದ ರಘುನಂದನ್ ಮಾಹಿತಿ ನೀಡಿ, ನಂಜಪ್ಪಮೈಲ್ಸ್ ಆಫ್ ಹೋಪ್–ರೈಡ್ ರನ್.ರೀಚೆ ಲೈವ್ಸ್ ಕಾರ್ಯಕ್ರಮವು ಸಮುದಾಯ ಆರೋಗ್ಯ ಜಾಗೃತಿ ಮತ್ತುಸಾಮಾಜಿಕ ಸೇವೆಯ ಉದ್ದೇಶವನ್ನು ಹೊಂದಿದ್ದು, ಈ ಕಾರ್ಯಕ್ರಮದಿಂದ ಬರುವ ಸಂಪೂರ್ಣ ಧನಸಹಾಯವನ್ನು ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಕೊಠಡಿ ಹಾಗೂ ಶೌಚಾಲಯವನ್ನು ನಿರ್ಮಿಸಲುಬಳಸಲಾಗುತ್ತದೆ.
ನಮ್ಮ ಸಂಸ್ಥೆ ಸಾಮಾಜಿಕ ಕಳಕಳಿಯುಳ್ಳ ಯುವ ವೃತ್ತಿಪರರ ಸಂಸ್ಥೆಯಾಗಿದ್ದು, ಈ ಸಂಸ್ಥೆಯ ಪ್ರಮುಖಸಾಮಾಜಿಕ ಧ್ಯೇಯವಾದ “ ಫ್ರೀಡಂ ಥ್ರೂ ಎಜುಕೇಷನ್” ಮುಖಾಂತರ ಭಾರತದೆಲ್ಲೆಡೆ 7500 ಕ್ಕೂ ಹೆಚ್ಚುತರಗತಿಗಳು ನಿರ್ಮಾಣ ಮಾಡಲಾಗಿದೆ. ಜ.11 ರಂದು ಆಯೋಜಿಸಿರುವ ಸ್ಪರ್ಧೆಯಿಂದ ಬರುವ ಧನಸಹಾಯವನ್ನು ಕೆ.ಆರ್ ಪುರಂನ ಸರ್ಕಾರಿ ಶಾಲೆಯಲ್ಲಿ ಎರಡು ಕೊಠಡಿಯನ್ನು ನಿರ್ಮಿಸಲುಬಳಸಲಾಗುವುದು.
ಸ್ಪರ್ಧೆಯ ವಿವರ: 7 ರಿಂದ 15 ವರ್ಷದೊಳಗಿನ ಮಕ್ಕಳಿಗೆ 3 ಕಿಮೀ ಓಟದ ಸ್ಪರ್ಧೆ, 15 ವರ್ಷ ಮೆಲ್ಪಟ್ಟವರಿಗೆ6 ಕಿಮೀ ಹಾಗೂ 12 ಕಿಮೀ ಓಟದ ಸ್ಪರ್ಧೆ, 14 ವರ್ಷ ಮೇಲ್ಪಟ್ಟರಿಗೆ 13 ಕಿಮೀ ಸ್ಲೆöÊಕಿಂಗ್ ಸ್ಪರ್ಧೆಆಯೊಜಿಸಲಾಗಿದೆ. ಸ್ಪರ್ಧೆಗೆ ಭಾಗವಹಿಸಲು ಯಾವುದೇ ಶುಲ್ಕ ಇಲ್ಲ ಹಾಗೂ ನಗದು ಬಹುಮಾನಒಳಗೊಂಡಿದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: ಆದರ್ಶ-9663385544, ಸ್ಕಂದ-9844200300 ಗೆಸಂಪರ್ಕಿಸಬಹುದು.
ಪ್ರತಿಕಾಗೋಷ್ಠಿಯಲ್ಲಿ ಶಿವಮೊಗ್ಗ ಮಲ್ನಾಡ್ ರೌಂಡ್ ಟೇಬಲ್ 266 ನ ಸ್ಕಂದ, ಸುಕೃತ್, ಹರೀಶ್, ಹಾಜರಿದ್ದರು.
