Homeಜಿಲ್ಲೆಭೂ ವಿನ್ಯಾಸ ಪುಷ್ಪಕೃಷಿಯ ಕುರಿತು ಅಧ್ಯಯನ ಅವಶ್ಯಕ : ಡಾ.ಎಸ್.ಕೆ.ಮಲ್ಹೋತ್ರಾ

ಭೂ ವಿನ್ಯಾಸ ಪುಷ್ಪಕೃಷಿಯ ಕುರಿತು ಅಧ್ಯಯನ ಅವಶ್ಯಕ : ಡಾ.ಎಸ್.ಕೆ.ಮಲ್ಹೋತ್ರಾ

Spread the love

ಶಿವಮೊಗ್ಗ.ಮಾ.23: ಅತ್ಯುತ್ತಮ ಪರಿಸರ ಸೇವೆ ನೀಡುತ್ತಿರುವ ಅಲಂಕಾರಿಕ ತೋಟಗಾರಿಕೆ ಮತ್ತುಪುಷ್ಪಕೃಷಿಯನ್ನು ಚಾಂಪಿಯನ್ ಸೇವಾ ವಲಯಗಳಲ್ಲಿ ಒಂದು ಎಂದು ಸರ್ಕಾರ ಗುರುತಿಸಿದ್ದು, ವಲಯದ ಕುರಿತು ಹೆಚ್ಚಿನ ಚರ್ಚೆ, ಅಧ್ಯಯನ ನಡೆಸಿ, ಕಾರ್ಯರೂಪಕ್ಕೆ ತರುವ ಕೆಲಸ ಆಗಬೇಕೆಂದುಐಎಸ್‌ಓಹೆಚ್ ಅಧ್ಯಕ್ಷರು ಹಾಗೂ ಹರಿಯಾಣದ ಎಂಹೆಚ್‌ಯು ಕುಲಪತಿಗಳಾದಡಾ.ಎಸ್.ಕೆ.ಮಲ್ಹೋತ್ರಾ ತಿಳಿಸಿದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಭಾರತೀಯಅಲಂಕಾರಿಕ ತೋಟಗಾರಿಕೆ ಸಂಘ, ಐಸಿಎಆರ್ಐಎಆರ್‌ಐ ನವದೆಹಲಿ, ಐಸಿಎಆರ್ಪುಷ್ಪ ಕೃಷಿಸಂಶೋಧನಾ ನಿರ್ದೇಶನಾಲಯ ಪುಣೆ, ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂಐಸಿಎಆರ್ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರು ಸಂಸ್ಥೆಗಳಸಹಯೋಗದೊಂದಿಗೆ ಮಾರ್ಚ್ 23 ರಿಂದ 25 ರವರೆಗೆ ಶಿವಮೊಗ್ಗದ ನವಿಲೆ ಕೃಷಿ ಮಹಾವಿದ್ಯಾಲದಆವರಣದಲ್ಲಿ ಮೂರು ದಿನಗಳ ಕಾಲ ಏರ್ಪಡಿಸಲಾಗಿರುವ ವಿಕಸಿತ ಭಾರತ@2047 ಪುಷ್ಪ ಕೃಷಿ ಮತ್ತುಭೂದೃಶ್ಯ ಕುರಿತ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

2047 ಹೊತ್ತಿಗೆ ನಮ್ಮ ದೇಶ ಆಹಾರ ವ್ಯವಸ್ಥೆಯಲ್ಲಿ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುವ ನೋಟಹೊಂದಿದೆ. ಆದರೆ ಇದನ್ನು ಸಾಧಿಸಲು ಹವಾಮಾನ ಬದಲಾವಣೆಯಂತಹ ಹಲವಾರು ಸವಾಲುಗಳಿವೆ. ಮಣ್ಣಿನಲ್ಲಿನ ಇಂಗಾಲದ ಡೈ ಕ್ಸೈಡ್ ಪ್ರಮಾಣ, ಹಸಿರು ಮನೆ ಅನಿಲಗಳ ಪ್ರಮಾಣವನ್ನು ತಗ್ಗಿಸುವುದುಹೇಗೆಂದು ಚಿಂತಿಸಬೇಕಿದೆ. ಹಸಿರುಮನೆ ಅನಿಲಗಳನ್ನು ಶೇ.15 ರಿಂದ ಶೇ.5 ಕ್ಕೆ ಇಳಿಸಬೇಕಿದೆ. ಸುಸ್ಥಿರಕೃಷಿ ಪದ್ದತಿಗಳನ್ನು ಅಳವಡಿಸಿಕೊಂಡು ಪರಿಣಾಮಗಳನ್ನೆಲ್ಲ ತಗ್ಗಿಸಬೇಕಿದೆ. ಮಣ್ಣಿನ ಫಲವತ್ತತೆಯನ್ನುಹೆಚ್ಚಿಸಲು ಶ್ರಮಿಸಬೇಕಿದೆ. ಕೃಷಿಯಲ್ಲಿ ಆಧುನಿಕತೆ, ಎಐ ಬಳಕೆ ಮತ್ತು ಯಂತ್ರೋಪಕರಣಗಳನ್ನುಹೆಚ್ಚಿಸಬೇಕಿದೆ ಎಂದರು.

ರಸ್ತೆಗಳಲ್ಲಿ, ಅವೆನ್ಯು, ಬ್ಯಾಕ್‌ಯಾರ್ಡ್ಗಳಲ್ಲಿ ಬೆಳೆಯಲಾಗುತ್ತಿರುವ ಪುಷ್ಪಗಳು, ಅಲಂಕಾರಿಕ ಸಸ್ಯಗಳುವಾತಾವರಣದಲ್ಲಿನ ಕಾರ್ಬನ್ ಡೈ ಕ್ಸೈಡ್ ಅನ್ನು ಕಡಿಮೆ ಮಾಡುವ ಶಕ್ತಿ ಹೊಂದಿದ್ದು ಇದನ್ನುಗುರುತಿಸಲಾಗುತ್ತಿಲ್ಲ. ಇದನ್ನು ಗುರುತಿಸಿ ಕುರಿತು ಅಧ್ಯಯನ ಮಾಡಬೇಕಿದೆ. ನಾವು ಸಮ್ಮೇಳನದಲ್ಲಿಇಂತಹ ವಿಷಯಗಳನ್ನು ಚರ್ಚಿಸಿ, ಅದನ್ನು ಕಾರ್ಯಗತಗೊಳಿಸುವ ಕೆಲಸವನ್ನು ಮಾಡುತ್ತೇವೆ. ಇಂತಹಸಮ್ಮೇಳನದ ಮೂಲಕವೇ ಅನೇಕ ಮಾರ್ಗಸೂಚಿಗಳನ್ನು ರಚಿಸಲಾಗಿದೆ.

ವರ್ಟಿಕಲ್ ಗಾರ್ಡನಿಂಗ್, ಹೈಡ್ರೋಫೋನಿಕ್ಸ್ಗಳನ್ನು ಮಾರ್ಗಸೂಚಿಗಳಲ್ಲಿ ಸೇರ್ಪಡೆಗೊಳಿಸಲಾಗಿದೆಎಂದರು.

1919 ರಲ್ಲಿ ಇಂಡಿಯನ್ ಸೊಸೈಟಿ ಆಫ್ ಆರ್ನಮೆಂಟಲ್ ಹಾರ್ಟಿಕಲ್ಚರ್ ರಚನೆಯಾಗಿದ್ದು, ಅಲಂಕಾರಿಕಸಸ್ಯಗಳು ಮತ್ತು ಪುಷ್ಪಕೃಷಿ ಕುರಿತು ಭಾಗೀದಾರರಲ್ಲಿ ಅರಿವು ಮೂಡಿಸುವುದು ಇದರ ಉದ್ದೇಶವಾಗಿದೆ. ಅರ್ಬನ್, ಪೆರಿ ಅರ್ಬನ್ ತೋಟಗಾರಿಕೆ, ಗ್ರಾಮೀಣ ತೋಟಗಾರಿಕೆ, ಬಲ್ಬಸ್ ಹೂವು ಬೆಳೆ, ಬಯೋಡೈವರ್ಸಿಟಿ ಸೇರಿದಂತೆ ಹಲವಾರು ತೋಟಗಾರಿಕಾ ವಿಷಯಗಳಿಗೆ ಸಂಬಂಧಿಸಿದಂತೆ ಬೇರೆ ಬೇರೆನಗರಗಳಲ್ಲಿ ಸಮ್ಮೇಳನಗಳನ್ನು ನಡೆಸಲಾಗಿದ್ದು, ಪುಷ್ಪಕೃಷಿ ಮತ್ತು ಭೂದೃಶ್ಯ ಕುರಿತು ಇಲ್ಲಿ ಸಮ್ಮೇಳನನಡೆಸಲು ನಿರ್ಧರಿಸಿ, ಅತ್ಯುತ್ತಮವಾಗಿ ಸಮ್ಮೇಳನ ಆಯೋಜಿಸಲಾಗಿದೆ ಎಂದರು.

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ವೈಎಸ್ ಆರ್ ತೋಟಗಾರಿಕಾ ವಿಶ್ವವಿದ್ಯಾಲಯದನಿಕಟಪೂರ್ವ ಕುಲಪತಿಗಳಾದ ಡಾ.ಟಿ.ಜಾನಕಿರಾಮ್ ಮಾತನಾಡಿ, ದೇಶದಲ್ಲಿ 371 ಮಿಲಿಯನ್ ಟನ್ತೋಟಗಾರಿಕಾ ಉತ್ಪನ್ನಗಳನ್ನು ಬೆಳೆಯಲಾಗುತ್ತಿದೆ. ತಂತ್ರಜ್ಞಾನ ಅಭಿವೃದ್ದಿ, ಸರ್ಕಾರದ ನಿಯಮಗಳು, ರೈತರ ಭಾಗವಹಿಸುವಿಕೆ, ರೈತ ಕೇಂದ್ರಗಳು ಇವರೆಲ್ಲರ ಸಹಕಾರದಿಂದ ಅಭಿವೃದ್ದಿ ಸಾಧಿಸಲಾಗಿದೆ.

ಪುಷ್ಪ ಕೃಷಿಯು ಕೃಷಿ ವಿದ್ಯಾರ್ಥಿಗಳ ದೃಷ್ಟಿಯಿಂದ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಕೌಶಲ್ಯಅಭಿವೃದ್ಧಿಗೆ, ಹೊಸ ಸ್ಟಾರ್ಟ್ ಅಪ್‌ಗಳ ಆರಂಭಕ್ಕೆ ಅನುಕೂಲಕರವಾಗಿದೆ. ಸ್ವಂತ ಉದ್ಯಮ ಒದಗಿಸುವಜೊತೆ ಇತರರಿಗೂ ಉದ್ಯೋಗ ನೀಡುತ್ತಿದೆ. ಪುಷ್ಪಕೃಷಿಯಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಕೃತಕ ಬುದ್ದಿಮತ್ತೆಬಳಕೆ ಕೂಡ ಬಹಳ ಮುಖ್ಯವಾಗಿದ್ದು, ಇದರಿಂದ ಪುಷ್ಪ ಕೃಷಿ ಮತ್ತು ಉದ್ಯಮವನ್ನು ಇನ್ನೂ ಹೆಚ್ಚಿನರೀತಿಯಲ್ಲಿ ಅಭಿವೃದ್ದಿಪಡಿಸಬಹುದು ಎಂದರು.

ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವು ಅನೇಕ ಹೊಸ ಪ್ರಯೋಗಗಳನ್ನುಮಾಡಿ ಯಶಸ್ಸು ಸಾಧಿಸುತ್ತಿದೆ. ವಿಶ್ವವಿದ್ಯಾಲಯ ಅಭಿವೃದ್ದಿಪಡಿಸಿರುವ ಸಹ್ಯಾದ್ರಿ ಕೆಂಪುಮುಕ್ತಿ ಅಕ್ಕಿ ತಳಿಬಹಳ ಪ್ರಸಿದ್ದಿಯಾಗಿದ್ದು ಸುಮಾರು 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಇದನ್ನು ಬೆಳೆಯುತ್ತಿರುವುದು ಹೆಮ್ಮೆಯವಿಷಯ ಎಂದು ಶ್ಲಾಘಿಸಿದರು.

ಸಮ್ಮೇಳನದ ಸಂಘಟನಾ ಕಾರ್ಯದರ್ಶಿ ಹಾಗೂ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕಾವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕರಾದ ಡಾ.ಬಿ. ಹೇಮ್ಲಾ ನಾಯ್ಕ್ ಪ್ರಾಸ್ತಾವಿಕವಾಗಿ ಮಾತನಾಡಿ, ಪುಷ್ಪಕೃಷಿಯು ಜಾಗತಿಕವಾಗಿ ಮಲ್ಟಿ ಬಿಲಿಯನ್ ಡಾಲರ್ ಉದ್ಯಮವಾಗಿ ಹೊರಹೊಮ್ಮಿದ್ದು, ಇದರಿಂದ55 ಬಿಲಿಯನ್ ಡಾಲರ್ ಆದಾಯ ಬರುತ್ತಿದೆ. 10 ಮಿಲಿಯನ್ ಜನರಿಗೆ ಉದ್ಯೋಗ ಒದಗಿದೆ. ಭಾರತ ದೇಶಪುಷ್ಪಕೃಷಿಯಲ್ಲಿ ಚೀನಾದ ನಂತರ ಎರಡನೇ ದೊಡ್ಡ ದೇಶವಾಗಿದೆ. 2.97 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿಪುಷ್ಪಕೃಷಿ ಮಾಡಲಾಗುತ್ತಿದೆ.

ಹಲವಾರು ಕಮರ್ಷಿಯಲ್ ಪ್ಲಾಂಟ್‌ಗಳನ್ನು ಬೆಳೆಯಲಾಗುತ್ತಿದ್ದು ಪುಷ್ಪಕೃಷಿಯಲ್ಲಿ ದೇಶವು ಸುಮಾರುರೂ. 2000 ಕೋಟಿ ವಹಿವಾಟು ನಡೆಸುತ್ತಿದೆ. ರಾಜ್ಯದ ಹಲವು ಜಿಲ್ಲೆಗಳು ತಮ್ಮದೇ ಆದ ವಿಶೇಷ ಪುಷ್ಪಕೃಷಿವಲಯಗಳನ್ನು ಅಭಿವೃದ್ದಿಪಡಿಸಿವೆ. ಮಲ್ಲಿಗೆ ಕೃಷಿ ಹಲವರಿಗೆ ಉದ್ಯೋಗ ನೀಡಿದ್ದು ಹೂವಿನ ಹಡಗಲಿಮಲ್ಲಿಗೆ ಮೈಸೂರು, ಉಡುಪಿ, ಮಧುರೈ ಮಲ್ಲಿಗೆ ಸೇರಿದಂತೆ ಹಲವು ಮಲ್ಲಿಗೆ ಬೆಳೆಗಳು ಜಿಐ ಟ್ಯಾಗ್ಪಡೆದಿವೆ. ಕರ್ನಾಟಕವು ಭಾರತದ ವಾಣಿಜ್ಯ ಪುಷ್ಪ ಕೃಷಿಯ ರಾಜಧಾನಿ ಎಂದೇ ಹೆಸರಾಗಿದ್ದುಅಂತಾರಾಷ್ಟ್ರೀಯ ಗುಣಮಟ್ಟದ ಹೂವುಗಳನ್ನು ವೈಜ್ಞಾನಿಕವಾಗಿ ಬೆಳೆದು ರಫ್ತು ಮಾಡುವ ಬೃಹತ್ಉದ್ಯಮವಾಗಿ ಬೆಳೆದಿದೆ ಎಂದು ತಿಳಿಸಿದರು.

ಐಸಿಎಆರ್ಐಎಆರ್‌ಐ ನಿಕಟಪೂರ್ವ ಡೀನ್ ಮತ್ತು ಮುಖ್ಯಸ್ಥ (ಎಫ್‌ಎಲ್‌ಎಸ್ )ರಾದಡಾ.ಎಸ್.ಎಸ್.ಸಿಂಧು, ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಕುಲಪತಿಗಳಾದ ಡಾ. ಆರ್.ಸಿ.ಜಗದೀಶ ಮಾತನಾಡಿದರು.

ಸಮ್ಮೇಳನದಲ್ಲಿ ಭಾರತೀಯ ಅಲಂಕಾರಿಕ ತೋಟಗಾರಿಕೆ ಸಂಘದ ವತಿಯಿಂದ 5 ಮಂದಿ ಪುಷ್ಪ ಕೃಷಿವಿಜ್ಞಾನಿಗಳಿಗೆ ಫೆಲೋಷಿಪ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇಬ್ಬರು ಪಿಎಚ್.ಡಿ. ವಿದ್ಯಾರ್ಥಿಗಳಿಗೆಡಾಕ್ಟೋರಲ್ ಸಂಶೋಧನಾ ಪ್ರಬಂಧಕ್ಕೆ ಅತ್ಯುತ್ತಮ ಸಂಶೋಧನಾ ಪ್ರಬಂಧ ಪ್ರಶಸ್ತಿಯನ್ನು ಹಾಗೂ 4 ಮಂದಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಸಂಶೋಧನಾ ಪ್ರಬಂಧಕ್ಕೆ ಅತ್ಯುತ್ತಮ ಪ್ರಬಂಧಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಹಾಗೂ ಇಬ್ಬರಿಗೆ ಅತ್ಯುತ್ತಮ ಸಂಶೋಧನಾ ಪ್ರಬಂಧಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸಮ್ಮೇಳನದಲ್ಲಿ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ಡಾ. ಬಸವರಾಜ್, ಡಾ.ಬಿ.ಕೆ ಕುಮಾರಸ್ವಾಮಿ, ಹೆಚ್ ಡಿ ದೇವಿಕುಮಾರ್, ಜೆ.ಜಿ.ಕಾವೇರಿಯಪ್ಪ, ಹೆಚ್ ಎಸ್ಶಶಾಂಕ್, ಕೃಷಿ ವಿರ್ಸವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು.

ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು, ವಿಜ್ಞಾನಿಗಳು, ಕಾರ್ಪೂರೇಟರ್ ವಲಯದ ತಜ್ಞರು, ಪ್ರಗತಿಪರರೈತರು, ಉದ್ದಿಮೆದಾರರು, ಮಾರುಕಟ್ಟೆ ತಜ್ಞರು ಹಾಗೂ ಪುಷ್ಪ ಕೃಷಿ ರೈತರು, ಆಸಕ್ತರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments