ಶಿವಮೊಗ್ಗ, ಮಾ.23 : ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಭದ್ರತೆ ಒದಗಿಸಬೇಕು ಎಂದುಪರವಾನಿಗೆ ಭೂಮಾಪಕರು ಆಗ್ರಹಿಸಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪರವಾನಿಗೆ ಭೂಮಾಪಕರ ಸಂಘದ ಜಿಲ್ಲಾಧ್ಯಕ್ಷ ಸತೀಶ್, ಸರ್ಕಾರಿ ಭೂಮಾಪಕರಿಗೆ ಸಿಗುತ್ತಿರುವ ಸೌಲಭ್ಯಗಳನ್ನು ಪರವಾನಿಗೆ ಭೂಮಾಪಕರಿಗೂ ವಿಸ್ತರಿಸಬೇಕು. ಈಹಿನ್ನಲೆಯಲ್ಲಿ ಫೆ.20ರಿಂದ ನಾವು ಮುಷ್ಕರ ನಡೆಸುತ್ತಿದ್ದು, ತಮ್ಮ ಬೇಡಿಕೆ ಈಡೇರುವವರೆಗೂ ಮುಷ್ಕರಮುಂದುವರೆಯುತ್ತದೆ. ಈಗಾಗಲೇ ನಮ್ಮ ಮುಷ್ಕರದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಅಳತೆಗಾಗಿ ಬಾಕಿ ಇರುವಕಡತಗಳ ಸಂಖ್ಯೆ 5112 ತಲುಪಿಸಿದೆ. ಇದು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಆದ್ದರಿಂದ ಸರ್ಕಾರ ನಮಗೆಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡಿ ಸೂಕ್ತ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು. ಜೆಓಸಿ ಲ್ಯಾಂಡ್ ಅಂಡ್ ಸಿಟಿ ಸರ್ವೇಂಗ್ ವೃತ್ತ ಶಿಕ್ಷಣ ಮಾಡಿದ ನಾವುಗಳು ಭೂ ಮಾಪಕರ ನೇಮಕಾತಿಮಾಡಿಕೊಳ್ಳುವಂತೆ ಹೋರಾಟ ನಡೆಸಿದ ಪರಿಣಾಮವಾಗಿ ಅಂದಿನ ಸರ್ಕಾರ 1998 ರಲ್ಲಿ ಸರ್ಕಾರ ಭೂಮಾಪಕರ ನೇಮಕಾತಿ ಮಾಡುವ ಬದಲು ಪರವಾನಗಿ ಭೂ ಮಾಪಕರು ಎನ್ನುವ ಯೋಜನೆ ತಂದು ಜೆಓಸಿಸರ್ವೇಂಗ್ ಮಾಡಿದವರೆಲ್ಲರಿಗೂ ಕೆಲಸ ನೀಡುವ ನಿಟ್ಟಿನಲ್ಲಿ ಭೂ ಕಂದಾಯ ಅಧಿನಿಯಮವನ್ನುತಿದ್ದುಪಡಿ ತಂದು 11ಇ ನಕ್ಷೆಯನ್ನು ನೊಂದಣಿ ಪೂರ್ವ ಕಡ್ಡಾಯಗೊಳಿಸಿತು.
ನಂತರ 1999ರ ಆಗಸ್ಟ್ನಲ್ಲಿ ಖಾಸಗಿ ಭೂಮಾಪನ ಮಾಡಲು ಪರವಾನಿಗಾಗಿ ಅರ್ಜಿ ಆಹ್ವಾನಿಸಿತು. ನಂತರನಿರಂತರ ಪತ್ರ ವ್ಯವಹಾರ ನಡೆಸಿ ತರಬೇತಿಗಗೆ 2001 ಮಾರ್ಚ್ 1ರಂದು 2000 ರೂ. ತರಬೇತಿ ಶುಲ್ಕವನ್ನುನಮ್ಮಿಂದ ಪಡೆದು ತರಬೇತಿ ನೀಡಲಾಯಿತು. ಇದಾದ ನಂತರ ಭೂ ಮಾಪನನ ಮತ್ತು ಕಂದಾಯ ನಿರ್ಣಯತರಬೇತಿ ಸಂಸ್ಥೆ ಮೈಸೂರು ಇವರು ಪರೀಕ್ಷೆ ನಡೆಸಿ ಇದರಲ್ಲಿ ಉತ್ತೀರ್ಣರಾದವರನ್ನು ಅಂತಿಮವಾಗಿ ಜೂ2002ರಂದು ಪರವಾನಿಗಿ ನೀಡಿ ಹಕ್ಕು ಬದಲಾವಣೆ ಪೂರ್ವ ನಕ್ಷೆ ತಯಾರಿಸಲು ಅವಕಾಶ ನೀಡಿದರು. 1998-1999ರಲ್ಲಿ 2ನೇ ದರ್ಜೆ ಭೂ ಮಾಪಕರ ಎಲ್ಲಾ ಭತ್ಯೆಗಳು ಸೇರಿ 5524 ರೂ. ವೇತನ ನಿಗದಿ ಪಡಿಸಿತುಎಂದರು.
ಪರವಾನಗಿ ಭೂ ಮಾಪಕ ಆಯುಷ್ ಮಾತನಾಡಿ, ರೈತರಿಂದ ಮತ್ತು ಸಾರ್ವಜನಿಕರಿಂದ ನೇರವಾಗಿ ಅರ್ಜಿಪಡೆದು ಅರ್ಜಿ ಶುಲ್ಕ 300 ರೂ ಕಟ್ಟಿಸಿಕೊಂಡು ಅಳತೆ ಮತ್ತು ನಕ್ಷೆ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಪರವಾನಿಗಿ ಭೂ ಮಾಪಕರು ಯಾವುದೇ ಸರ್ಕಾರಿ ಭೂಮಿಯನ್ನು ಅಳತೆ ಮಾಡಬಾರದೆಂಬ ಷರತ್ತಿನಮೇಲೆ ಪರವಾನಿಗಿ ನೀಡಿ ಅಧಿಕಾರ ನೀಡಿತ್ತು. ಕೆಲವು ತಿಂಗಳಲ್ಲಿ ಹೈಕೋರ್ಟ್ 11ಇ ನಕ್ಷೆಗೆ ಅಧಿಸೂಚನೆಗೆತಡೆ ಆಜ್ಞೆ ನೀಡಿದ್ದರಿಂದ ನಮಗೆ ಕೆಲಸ ಇಲ್ಲದೆ ಬೀದಿ ಪಾಲಾದೆವು. ಇದಾದ ನಂತರ ರಾಜ್ಯ ಸಂಘದನಿರಂತರ ಪ್ರಯತ್ನ ಮತ್ತು ಕೆಲವು ಅಧಿಕಾರ ಸಹಾಯದಿಂದ ಹೈಕೋರ್ಟ್ 2014ರಲ್ಲಿ ಮಧ್ಯಂತರ ಆದೇಶನೀಡಿ ನಮಗೆ ಕೆಲಸ ಮಾಡಲು ಅವಕಾಶ ಕಲ್ಪಿಸಿತು ಎಂದು ಹೇಳಿದರು.
ಒಂದು ಕಡತಕ್ಕೆ 1200 ರೂ. ನೀಡುತ್ತೇವೆ ಎಂದು ಸರ್ಕಾರ ಹೇಳಿದ್ದರೂ ಕೂಡ ಆದರೆ ಅಷ್ಟು ಹಣ ನಮಗೆಸಿಗುವುದಿಲ್ಲ. ಈ ಕಡತಗಳೆಲ್ಲಾ ವಿಲೇವಾರಿ ಆಗುವುದೂ ಕೂಡ ಕಷ್ಟವಾಗುತ್ತದೆ. ಅಲ್ಲದೆ ತಿಂಗಳಿಗೆ 23 ಕಡತಗಳನ್ನು ಮಾಡಲೇಬೇಕೆಂಬ ಕಡ್ಡಾಯ ಕೂಡ ಇದೆ. ಈಗ ರಾಜ್ಯದಲ್ಲಿ 5088 ಭೂಮಾಪಕರು ಕೆಲಸನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ 98 ಜನರು ಇದ್ದಾರೆ. ಅಲ್ಲದೆ ಸರ್ಕಾರ ಪರವಾನಿಗೆ ಭೂಮಾಪಕರನ್ನುಖಾಯಂಗೊಳಿಸುತ್ತೇವೆ ಎಂದು ಭರವಸೆಕೊಟ್ಟಿತ್ತು. ಈಗ ಭರವಸೆ ಇಲ್ಲವಾಗಿದೆ. ಹೈಕೋರ್ಟ್ ಕೂಡ ನಮ್ಮಪರವಾಗಿ ಇದೆ. ಆದರೆ ಸರ್ಕಾರದ ಸ್ಪಂದನೆ ಇಲ್ಲದೆ ತೊಂದರೆಯಾಗಿದೆ. ನಾವು ಕಾನೂನು ಹೋರಾಟವನ್ನುಕೂಡ ಮುಂದುವರಿಸುತ್ತೇವೆ. ಸುಪ್ರೀಂಕೋರ್ಟ್ನಲ್ಲೂ ನ್ಯಾಯ ಕೇಳುತ್ತೇವೆ. ಸರ್ಕಾರ ಇದ್ಯಾವುದಕ್ಕೂಆಸ್ಪದಕೊಡದೆ ನಮ್ಮನ್ನು ಖಾಯಂ ಮಾಡುವ ಮೂಲಕ ಜೀವನ ಭದ್ರತೆ ಒದಗಿಸಬೇಕೆಂದು ಮನವಿಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಹೇಶ್, ನಿಜಗುಣ, ಸಿದ್ಧಾಚಾರಿ, ರಾಜೇಶ್, ಲೋಕಪ್ಪ, ಸಣ್ಣರಂಗಯ್ಯ ಮುಂತಾದವರಿದ್ದರು.
