ಶಿವಮೊಗ್ಗ, ಏ.3 : ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಇಂಗ್ಲೀಷ್ ವಿಭಾಗದ ವತಿಯಿಂದ ಏ.7 ರಂದು ಕುವೆಂಪು ವಿರಚಿತ ‘ಜಲಗಾರ‘ ನಾಟಕ ಕುರಿತು ಒಂದು ದಿನದ ಕಾರ್ಯಾಗಾರವನ್ನು ಬೆಳಿಗ್ಗೆ10.30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ಈ ನಾಟಕವು 2ನೇ ಬಿಕಾಂ ವಿದ್ಯಾರ್ಥಿಗಳಿಗೆ ಪಠ್ಯವಾಗಿದ್ದು, ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ಹೆಚ್.ಟಿ. ಕೃಷ್ಣಮೂರ್ತಿ, ಡಾ.ನವೀನ್ ವಿ. ಉಪನ್ಯಾಸ ನೀಡಲಿದ್ದಾರೆ. ಪ್ರಾಂಶುಪಾಲ ಡಾ.ಅವಿನಾಶ್ ಟಿ. ಅಧ್ಯಕ್ಷತೆ ವಹಿಸಲಿದ್ದು, ಕಾರ್ಯಾಗಾರದಲ್ಲಿ ಡಾ.ಕೆ.ಎಸ್.ಸರಳ, ಡಾ.ಗಿರಿಧರ್ ಕೆ.ವಿ., ಎಂ.ಪರಶುರಾಮ್, ರಮ್ಯಾಎಸ್., ಸಲ್ಮಾಂ ತಬಸೂಮ್, ಧರ್ಮೇಗೌಡ ಮುಂತಾದವರು ಉಪಸ್ಥಿತರಿರುವರು.
ಆಸಕ್ತರು ವಾಣಿಜ್ಯ ಕಾಲೇಜು ಇಂಗ್ಲೀಷ್ ವಿಭಾಗವನ್ನು ಸಂಪರ್ಕಿಸಬೇಕು ಎಂದು ಪ್ರಾಂಶುಪಾಲ ಡಾ.ಟಿ.ಅವಿನಾಶ್ ಕೋರಿದ್ದಾರೆ.
