Homeಜಿಲ್ಲೆ1 ಕೆಜಿ 720 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡ ಪೊಲೀಸರು

1 ಕೆಜಿ 720 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡ ಪೊಲೀಸರು

Spread the love

ಶಿವಮೊಗ್ಗ, ಏ.13: ಹುಲ್ಲಿನ ಬಣವೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ , ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ.

ಏ.12 ರಂದು ಅಣ್ಣಾನಗರ ಚಾನಲ್ ಏರಿಯಾ ದಲ್ಲಿ ಮಾದಕ ವಸ್ತು ಗಾಂಜಾವನ್ನು ಹುಲ್ಲಿನ ಬಣವೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿರುವ ಮಾಹಿತಿಯನ್ನು ಖಚಿತ ಪಡಿಸಿಕೊಂಡು ದೊಡ್ಡಪೇಟೆ ಪೊಲೀಸ್ಠಾಣೆ ಪಿಐ ಮತ್ತು ಪಿಎಸ್‌ಐ ಹಾಗೂ  ಸಿಬ್ಬಂಧಿಗಳ ತಂಡವು ದಿಢೀರ್ ದಾಳಿ ನಡೆಸಿತು.

ಗಮನಿಸಿ: 🌸 ವಿಶೇಷ ಲೇಖನ 🌸 ಜಾತಿಯತೆಯನ್ನೇ ಕಾರುವ ಪತ್ರಕರ್ತರು ಅಂಬೇಡ್ಕರ್ ನ ನೆನೆಯುತ್ತಿದ್ದಾರೆ!?

ದಾಳಿ ನಡೆಸಿದ ಸ್ಥಳದಲ್ಲಿ  ನಗರದ ಚಿಕ್ಕಲ್ ನ ಮಹಮ್ಮದ್ ಅಂಬ್ರೋಸ್ (50) ಸಿಕ್ಕಿ ಬಿದಿದ್ದು, ಈತನನ್ನು ಬಳಿ ಇದ್ದ ಅಂದಾಜು ಮೌಲ್ಯ 85,000/- ರೂ ಮೌಲ್ಯದ 1ಕೆಜಿ 720 ಗ್ರಾಂ  ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ವಿರುದ್ಧ ಠಾಣಾ ಗುನ್ನೆ ಸಂಖ್ಯೆ 133/2026 ಕಲಂ  20(b) (ii) B) NDPS ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments