Homeಜಿಲ್ಲೆಅಂಬೇಡ್ಕರ್ ಜನಸಾಮಾನ್ಯರ ದಾರಿದೀಪ : ಕೊಟ್ರೇಶ್ ಎಸ್.ಉಪ್ಪಾರ್

ಅಂಬೇಡ್ಕರ್ ಜನಸಾಮಾನ್ಯರ ದಾರಿದೀಪ : ಕೊಟ್ರೇಶ್ ಎಸ್.ಉಪ್ಪಾರ್

Spread the love

ಶಿವಮೊಗ್ಗ,ಏ.26: ಮಹಾನಾಯಕರಾದ ಅಂಬೇಡ್ಕರ್ ಅವರು ಈ ದೇಶದ ಜನಸಾಮಾನ್ಯರ ದಾರಿದೀಪವಾಗಿದ್ದಾರೆ ಎಂದು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರಿನ ಅಧ್ಯಕ್ಷರಾದ ಕೊಟ್ರೇಶ್ ಎಸ್ ಉಪ್ಪಾರ್ ರವರು ಹೇಳಿದರು.

ನವ್ಯಶ್ರೀ ಸಭಾಂಗಣದಲ್ಲಿ ನಡೆದ ರಾಜ್ಯಮಟ್ಟದ ಮಹಾ ನಾಯಕ ಕವಿಗೋಷ್ಠಿ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಅಂಬೇಡ್ಕರ್ ಎಂದರೆ ಅವರೊಬ್ಬ ಸಂವಿಧಾನದ ಪಿತಾಮಹ ಮಾತ್ರವಲ್ಲ ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಪತ್ರಿಕೋದ್ಯಮ ಹಾಗೂ ಕಾನೂನು ಕ್ಷೇತ್ರಗಳಲ್ಲಿ ಅಪರಿಮಿತವಾದ ಸೇವೆಯನ್ನು ಸಲ್ಲಿಸಿ ಭಾರತದ ಮಹಾ ನಾಯಕ ಎಂದು ಸ್ಮರಿಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪತ್ರಕರ್ತ ಆರುಂಡಿ ಶ್ರೀನಿವಾಸ್ ಮಾತನಾಡಿ, ಒಂದು ಕಾಲದಲ್ಲಿ ಅಂಬೇಡ್ಕರ್ ಅವರನ್ನು ಸಂಪೂರ್ಣ ವಿರೋಧ ಮಾಡುತ್ತಿದ್ದ ಕೆಲವು ಸಂಘಟನೆಗಳು, ಕೆಲವು ಜಾತಿಯವರು ಇಂದು ಅಂಬೇಡ್ಕರ್ ಜಯಂತಿಯನ್ನು ಆಚರಿಸುತ್ತ ಅಂಬೇಡ್ಕರ್ ಅವರನ್ನು ತಮ್ಮವರು ಎಂದು ಗುರುತಿಸಿಕೊಳ್ಳುತ್ತಿದ್ದಾರೆ ಇದು ಅಂಬೇಡ್ಕರ್ ರವರ ಮಹಾನ್ ವ್ಯಕ್ತಿತ್ವವನ್ನು ತೋರಿಸುತ್ತದೆ ಎಂದರು.

ಗಮನಿಸಿ: ದೇಶದ ಭವಿಷ್ಯತ್ತಿನ ಮಕ್ಕಳಿಗೆ ಬಿಜೆಪಿ ನಾಯಕರಿಂದ ಅವಮಾನ: ಮಧು ಬಂಗಾರಪ್ಪ ಕಿಡಿ

ಮತ್ತೋರ್ವ ಮುಖ್ಯ ಅತಿಥಿ ಹಾಗೂ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಡಾಕ್ಟರ್ ಕೆ.ಜಿ ವೆಂಕಟೇಶ್ ರವರು ಮಾತನಾಡಿ, ಅಂಬೇಡ್ಕರ್ ಅವರ ಶೂದ್ರರು ಯಾರು ಎಂಬ ಪುಸ್ತಕವನ್ನು ಮತ್ತೊಮ್ಮೆ ನಾನು ಓದಿದೆ ಆಗ ನಾವೆಲ್ಲಾ ಎಷ್ಟೊಂದು ಮೂಢನಂಬಿಕೆಯಿಂದ ಇದುವರೆಗೆ ಜೀವನ ಸಾಗಿಸಿದ್ದೇವೆ ಎಂದು ಅರ್ಥವಾಯಿತು ಎಂದ ಅವರು 35 ಜನ ಕವಿಗಳ ಕವನಗಳನ್ನು ಒಂದೊಂದು ಸಾಲಿನಲ್ಲಿ ವಿಮರ್ಶೆ ಮಾಡಿ ಗದ್ಯ ಮತ್ತು ಪದ್ಯದ ವ್ಯತ್ಯಾಸ ತಿಳಿಸಿ ಅನೇಕ ಕವಿಗಳ ಕವಿತೆ ವಿಷಯವನ್ನು ಹೇಳಿದ್ದರು ಕೂಡ ಗದ್ಯಶೈಲಿಯಲ್ಲಿದೆ ಅದನ್ನು ಬದಲಿಸಿಕೊಳ್ಳಬೇಕು ಎಂದು ಹೇಳಿ ಅಂಬೇಡ್ಕರ್ ರವರಂತ ನಾಯಕರ ಬಗ್ಗೆ 35 ಕವನಗಳು ಬಂದಿರುವುದೇ ಅಂಬೇಡ್ಕರ್ ನಮ್ಮ ನಡುವೆ ಜೀವಂತವಾಗಿದ್ದಾರೆ ಎಂಬುದಕ್ಕೆ ಸಾಕ್ಷಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ.ಎಚ್.ಕೆ. ಹಸೀನಾ ರವರು ಮಾತನಾಡಿ, ನಮ್ಮ ಕಾರ್ಯಕ್ರಮಕ್ಕೆ ಬೀದರ್ ,ಗುಲ್ಬರ್ಗ,ರಾಯಚೂರು, ಕೊಡಗು, ಮಂಗಳೂರು ಜಿಲ್ಲೆಯಿಂದ ಕವಿಗಳು ಆಗಮಿಸಿದ್ದು ತುಂಬಾ ಸಂತೋಷ ತಂದಿದೆ ಎಂದರು.

ಈ ರೀತಿ ಕವಿಗೋಷ್ಠಿ ನಡೆಯುವುದಕ್ಕೆ ನಮ್ಮ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ರಾಜ್ಯಾಧ್ಯಕ್ಷರಾದ ಕೊಟ್ರೇಶ್ ರವರು ನೀಡಿದ ಪ್ರೋತ್ಸಾಹವೇ ಕಾರಣ ಎಂದು ಹೇಳಿ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಬಂದ ಸುಮಾರು 20ಕ್ಕೂ ಹೆಚ್ಚು ಸಾಧಕರನ್ನು ಸನ್ಮಾನಿಸಿದರು ಹಾಗೂ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದ ವಿಶೇಷ ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ರೂಪ ಹರಿಹರ ಹಾಗೂ ಶ್ರೀಮತಿ ಪ್ರತಿಭಾ ಸುದರ್ಶನ್ ಹಾಸನಗಳನ್ನು ವಿಶೇಷವಾಗಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಸ್ವಾಗತವನ್ನು ಸುಜಾತ ಎಸ್. ಹೇಮಂತ ತೀರ್ಥಹಳ್ಳಿ ನಿರೂಪಣೆಯನ್ನು ಲತಾ ಮಣಿ ಎಂ.ಕೆ. ತುರುವೇಕೆರೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಆಯಾ ತಾಲೂಕು ಅಧ್ಯಕ್ಷರು ಇದ್ದರು. ಸ್ವಾಗತ ನೃತ್ಯವನ್ನು ಕುವೆಂಪು ವಿ.ವಿ.ಎಂ.ಎ. ಪ್ರಥಮ ವರ್ಷ ಇತಿಹಾಸ ವಿಷಯದ ವಿದ್ಯಾರ್ಥಿನಿ ಪ್ರದರ್ಶಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments