Homeಅಪರಾಧಜಾತಿ ನಿಂದನೆ- ಶಿಕ್ಷೆ ನೀಡಿದ ನ್ಯಾಯಾಲಯ

ಜಾತಿ ನಿಂದನೆ- ಶಿಕ್ಷೆ ನೀಡಿದ ನ್ಯಾಯಾಲಯ

Spread the love

ಶಿವಮೊಗ್ಗ, ಏ.26: ಮಹಿಳೆ ಮನೆಗೆ ಅತಿಕ್ರಮ ಪ್ರವೇಶ ಮಾಡಿ, ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿ ಪ್ರಕರಣದಲ್ಲಿ ಘನ ನ್ಯಾಯಾಲಯ ಪರಿಹಾರ ನೀಡಲು ಸೂಚಿಸಿದೆ.

ದಿ:9/9/22 ರಂದು ಭದ್ರಾವತಿ ಕೆ.ಹೆಚ್ ನಗರದ ವಾಸಿ ಮಹಿಳೆಯೊಬ್ಬರು ತಮ್ಮ ವಾಸದ ಮನೆಯಲ್ಲಿದ್ದಾಗ ಆರೋಪಿತರಾದ 1.ಉಮೇಶ್,49 ವರ್ಷ & 2.ನಂದನ್,22 ವರ್ಷರವರು ಜಾಗದ ವಿಚಾರವಾಗಿ,ಮಹಿಳೆ ಮನೆಗೆ ಅತಿಕ್ರಮ ಪ್ರವೇಶ ಮಾಡಿ, ಜಾತಿ ನಿಂದನೆ ಮಾಡಿ ಜೀವ ಬೆದರಿಕೆ ಹಾಕಿ, ಕಾಲಿನಿಂದ ಹಲ್ಲೆ ಮಾಡಿದ ಬಗ್ಗೆ ಹೊಸಮನೆ ಠಾಣಾ ಗುನ್ನೆ ನಂ 113/2022 ರಲ್ಲಿ ಎಸ್ಸಿ& ಎಸ್ಟಿ ಪಿಎ ಕಾಯ್ದೆ ರಿತ್ಯಾ ಪ್ರಕರಣ ದಾಖಲಾಗಿರುತ್ತದೆ.

ಗಮನಿಸಿ:ಅಂಬೇಡ್ಕರ್ ಜನಸಾಮಾನ್ಯರ ದಾರಿದೀಪ : ಕೊಟ್ರೇಶ್ ಎಸ್.ಉಪ್ಪಾರ್

ಪ್ರಕರಣದ ಆಗಿನ ತನಿಖಾಧಿಕಾರಿಗಳಾದ  ಭದ್ರಾವತಿ ಎಎಸ್‌ಪಿ ಜಿತೇಂದ್ರ ಕುಮಾರ್ ದಯಾಮ ರವರುದೋಷಾರೋಪಣ ಪತ್ರವನ್ನು ಸಲ್ಲಿಸಿರುತ್ತಾರೆ.

ಸರ್ಕಾರಿ ಅಭಿಯೋಜಕರವರು ರತ್ನಮ್ಮ ಪಿ. ವಾದ ಮಂಡಿಸಿದ್ದು, ಆರೋಪಿತರ ವಿರುದ್ಧ ಆರೋಪದೃಢಪಟ್ಟ ಹಿನ್ನೆಲೆಯಲ್ಲಿ ಭದ್ರಾವತಿ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರು ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ರವರು ಆರೋಪಿತರಿಗೆ ತಲಾ 02  ವರ್ಷ ಕಠಿಣಕಾರಾವಾಸ ಶಿಕ್ಷೆ ಮತ್ತು ಒಟ್ಟು ರೂ. 62,000/- ದಂಡ, ಇಬ್ಬರು ನೊಂದ ಮಹಿಳೆಯರಿಗೆ ತಲಾ 25,000/- ಪರಿಹಾರ ಕೊಡಲು ಆದೇಶಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments