Homeಅಪರಾಧಸರಗಳ್ಳತನ - 35 ಗ್ರಾಂ ಬಂಗಾರ ಅಮಾನತ್ತು ಪಡೆಸಿಕೊಂಡ ಪೊಲೀಸರು

ಸರಗಳ್ಳತನ – 35 ಗ್ರಾಂ ಬಂಗಾರ ಅಮಾನತ್ತು ಪಡೆಸಿಕೊಂಡ ಪೊಲೀಸರು

Spread the love

ಶಿವಮೊಗ್ಗ, ಏ.26: ಹೊಳಲೂರು ಸರ್ಕಾರಿ ಆಸ್ಪತ್ರೆಯ ಹತ್ತಿರ ನಡೆದು ಕಳ್ಳತನ ಪ್ರಕರಣ ಸಂಬಂಧಿಸಿದಂತೆ ಪೊಲೀಸ್ ಆರೋಪಿ ಬಂಧಿಸಿ, ಕಳ್ಳತನವಾದ ಬಂಗಾರವನ್ನು ಆಮಾನತ್ತು ಪಡಿಸಿಕೊಂಡಿದ್ದಾರೆ.

ಏ.25 ರಂದು ಬೆಳಿಗ್ಗೆ ಶಿವಮೊಗ್ಗ ನಗರದ ವಾಸಿ ಮಹಿಳೆಯರಿಬ್ಬರು ಹೊಳಲೂರು ಗ್ರಾಮ ಪಂಚಾಯ್ತಿಯಮಹಿಳಾ ಸಂಘದ ಸಭೆಗೆ ಹೊರಟು, ಹೊಳಲೂರು ಸರ್ಕಾರಿ ಆಸ್ಪತ್ರೆಯ ಹತ್ತಿರ ನಡೆದುಕೊಂಡುಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬನು ಮಹಿಳೆಯ ಕೊರಳಿನಲಿದ್ದ ಸುಮಾರು 35 ಗ್ರಾಂ ತೂಕದಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಬೈಕ್ ನಲ್ಲಿ ಪರಾರಿಯಾಗಿ ತಲೆ ಮರೆಸಿಕೊಂಡಿದ್ದು, ಬಗ್ಗೆ  ಶಿವಮೊಗ್ಗ  ಗ್ರಾಮಾಂತರ ಠಾಣೆ ಅಪರಾಧ ಸಂಖ್ಯೆ: 138/2026 ಕಲಂ 309 (4) ಬಿಎನ್ಎಸ್ಕಾಯ್ದೆರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

ಪ್ರಕರಣದ ಆರೋಪಿತರ ಪತ್ತೆಗಾಗಿ ಎಸ್ ಪಿ ನಿಖಿಲ್ ಬಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-01 ಕಾರಿಯಪ್ಪ,ಡಿವೈಎಸ್ ಪಿ ಸಂಜೀವ್ ಕುಮಾರ್ ರವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ರಾಘವೇಂದ್ರ ಕಾಂಡಿಕೆ & ಸಿಬ್ಬಂದಿಗಳಾದ ಎಎಸ್ಐ ವಿಜಯ, ಸಿಹೆಚ್.ಸಿ ಕಲ್ಲನಗೌಡ, ಕುಮಾರ್ಬಣಕಾರ್, ದಾಕ್ಷಾಯಣಿ, ರಾಘವೇಂದ್ರ, ಸಿಪಿಸಿ ಶ್ರೀಕಾಂತ್, ಕಾಶಿನಾಥ, ಕವನ ರವರನ್ನೊಳಗೊಂಡ ತನಿಖಾ ತಂಡವನ್ನು ರಚನೆ ಮಾಡಲಾಗಿರುತ್ತದೆ.

ಸದರಿ ತನಿಖಾ ತಂಡವು ದಿನ ದಿನಾಂಕ: ಏ.26 ರಂದು ಸರಗಳ್ಳತನ ಮಾಡಿದ ಆರೋಪಿತರಾದ 1) ಮನೋಜ್ ಶಿರಮಣ ಸಿ ಮತ್ತು 2) ವಿಜಯ್ ಕುಮಾರ್ ಇವರನ್ನು ದಸ್ತಗಿರಿ ಮಾಡಿ ಕೃತ್ಯಕ್ಕೆಉಪಯೋಗಿಸಿದ ಅಂದಾಜು 40,000/- ರೂ ಮೌಲ್ಯದ ಸ್ಪ್ಲೆಂಡರ್ ಬೈಕ್ ಹಾಗೂ  ಅಂದಾಜು  2,50,000/-ರೂ ಮೌಲ್ಯದ 18ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ಅಮಾನತ್ತುಪಡಿಸಿಕೊಂಡು, ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತದೆ.

ಸದರಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments