ಶಿವಮೊಗ್ಗ, ಮೇ.2 : ಯಾವುದೇ ಪಕ್ಷವಾಗಲಿ, ಜಾತಿಯಾಗಲಿ ಅಭಿವೃದ್ದಿ ವಿಚಾರದಲ್ಲಿ ಸಮಾನವಾಗಿ ಹಂಚಿಯಾಗಬೇಕೆಂದು ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದಲ್ಲಿ ತಿಳಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ಅದರ ಆಶಯದಂತೆ ನಡೆಯುತ್ತಿದೆ ಎಂದು ನಗರಾಭೀವೃದ್ದಿ ಸಚಿವ ಭೈರತಿ ಸುರೇಶ್ ಹೇಳಿದರು.
ಬೊಮ್ಮನಕಟ್ಟೆಯಲ್ಲಿ ಶನಿವಾರ ಏರ್ಪಡಿಸಲಾಗಿರುವ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ(ಹಂತ-2), ಎನ್.ಜಿ.ಟಿ. ಅನುದಾನದ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಬೊಮ್ಮನಕಟ್ಟೆ ಆಶ್ರಯಬಡಾವಣೆಗೆ ಮಾಜಿ ಮುಖ್ಯಮಂತ್ರಿ “ದಿ|| ಶ್ರೀ ಎಸ್. ಬಂಗಾರಪ್ಪ ಬಡಾವಣೆ” ನಾಮಕರಣಸಮಾರಂಭವನ್ನು ಉದ್ಟಾಟಿಸಿ ಅವರು ಮಾತನಾಡಿದರು.
ಕೆರೆ ನೀರು ಕೆರೆಗೆ ಚೆಲ್ಲಿ ಎನ್ನುವಂತೆ. ನಿಮ್ಮಿಂದ ಪಡೆದ ಹಣವನ್ನು ನಿಮ್ಮ ಅಭಿವೃದ್ದಿಗೆ ಬಳಸುತ್ತಿದ್ದೇವೆ. ಯಾವ ಸರ್ಕಾರವು ಅವರ ಮನೆಯಿಂದ ಹಣ ತಂದು ಕೊಟ್ಟಿಲ್ಲ. ಇವೆಲ್ಲ ನಿಮ್ಮ ಹಣವೇ ಎಂದರು.
ನಾವೆಲ್ಲ ಮೊದಲು ಭಾರತಿಯರು, ಆಮೇಲೇ ಜಾತಿ , ಧರ್ಮ. ಎಲ್ಲರನ್ನು ನಮ್ಮವರಂತೆ ತಿಳಿಯಬೇಕು. ನಮ್ಮ ಅಧಿಕಾರವನ್ನು ಒಳ್ಳೆತನಕೆ ಬಳಸಿಕೊಂಡು ಜನ ಸೇವೆ ಮಾಡಬೇಕು ಎಂದರು.
ನಮ್ಮ ಸರ್ಕಾರಕ್ಕೆ ಜನರನ್ನು ಅಭಿವೃದ್ದಿ ಮಾಡುವ ಮನಸ್ಸಿದೆ. ಹಾಗಾಗಿ ನಮ್ಮಲ್ಲಿ ಯಾವುದೇ ಹಣದ ಕೊರತೆ ಇಲ್ಲ. ನಮ್ಮ ಸರ್ಕಾರ ಅಭಿವೃದ್ದಿಗೆ ನೀಡುವ ಅನುದಾನದಲ್ಲಿ ಯಾವುದೇ ತಾರತಮ್ಯ ಮಾಡುವುದಿಲ್ಲ. ಎಲ್ಲರನ್ನು ಸಮಾನವಾಗಿ ಕಾಣುತ್ತೇವೆ. ಎಲ್ಲರು ನಮ್ಮರೆಂದು ಕಾಣುತ್ತ ಸರ್ಕಾರವನ್ನು ನಡೆಸುತ್ತಿದ್ದೇವೆ.
ಯಾವುದೇ ಸರ್ಕಾರ ಆಗಲಿ ಜನಗಳಿಗೆ ಮೂಲಭೂತ ಸೌಕರ್ಯಗಳು ಕೊಡಬೇಕು. ಇದು ನಮ್ಮೆಲ್ಲರ ಕರ್ತವ್ಯ. ಅದರಂತೆ ಬಂಗಾರಪ್ಪನವರು ಹಾಕಿಕೊಟ್ಟ ಹಾದಿಯಲ್ಲಿ ನಮ್ಮ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿದೆ ಎಂದರು.

ಮುಂದಿನ ಮಳೆಗಾಲದ ಒಳಗೆ ಶಂಕುಸ್ಥಾಪನೆ ಮಾಡಿರುವ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಅದರ ಜವಾಬ್ದಾರಿ ಆಯುಕ್ತರು, ಅಧ್ಯಕ್ಷತೆ ಚನ್ನಬಸಪ್ಪ ವಹಿಸುತ್ತಾರೆ.ಕುಡಿಯುವ ನೀರಿನ ಬಗ್ಗೆ ನಾನು, ಉಸ್ತುವಾರಿ ಸಚಿವರು, ಶಾಸಕರಾದ ಚನ್ನಬಸಪ್ಪ , ಅರುಣ್, ಶಾರದಾ ಪೂರ್ಯನಾಯ್ಕ, ಬಲ್ಕೀಶ್ ಬಾನು ಚರ್ಚಿಸಿದ್ದೇವೆ. ನಗರ ಕುಡಿಯುವ ನೀರಿನ ಅಭಿವೃದ್ದಿಗೆ 500 ಕೋಟಿ ಕೇಳಿದ್ದಾರೆ. ಇದರ ಚಿಂತಿಸಿ ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ. ಶಿವಮೊಗ್ಗಕ್ಕೆ ಸಮಗ್ರವಾಗಿ ಕುಡಿಯುವ ನೀರಿನ ಪೊರೈಸಲಾಗುತ್ತದೆ.
ಇನ್ನು ಸರ್ಕಾರದಿಂದ ಮಂಜೂರು ಆಗಿರುವ ಪೌರ ಕಾರ್ಮಿಕರ ನಿವೇಶನ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಅದನ್ನು ಪೂರ್ಣಗೊಳಿಸುವಲ್ಲಿ ಹಣಕಾಸು ಇಲಾಖೆ ಜೊತೆ ಚರ್ಚಿಸಿ ಬಾಕಿ ಹಣವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು.
